More

    ಯೂಕ್ರೇನ್​-ರಷ್ಯಾ ಯುದ್ಧದ ವಿಚಾರದಲ್ಲಿ ಅಚ್ಚರಿಯ ನಡೆ ಅನುಸರಿಸಿದ ತಾಲಿಬಾನಿಗಳು: ಪಾಕ್​ ಪ್ರಧಾನಿಗೆ ತದ್ವಿರುದ್ಧ

    ಕಿಯೆವ್​/ಮಾಸ್ಕೋ: ಶಾಂತಿ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ರಷ್ಯಾ ಮತ್ತು ಯೂಕ್ರೇನ್​ಗೆ ತಾಲಿಬಾನ್​ ಸಲಹೆ ನೀಡಿದೆ. ಕೆಲ ತಿಂಗಳುಗಳ ಹಿಂದೆ ಹಿಂಸೆಯ ಮೂಲಕ ಆಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡ ತಾಲಿಬಾನಿಗಳು ಇದೀಗ ಶಾಂತಿ ಮಾತುಕತೆಯನ್ನು ಪ್ರತಿಪಾದಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

    ತಾಲಿಬಾನಿಗಳ ಆಪ್ತರಾಗಿರುವ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮೊನ್ನೆಯಷ್ಟೇ ರಷ್ಯಾಗೆ ಮೊದಲ ಬಾರಿ ಭೇಟಿ ನೀಡಿದ್ದರು. ಈ ವೇಳೆ ಯುದ್ಧ ಪರಿಸ್ಥಿತಿಯನ್ನು ರೋಮಾಂಚನಕಾರಿ ಎಂದು ಬಣ್ಣಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ, ತಾಲಿಬಾನಿಗಳು ಶಾಂತಿ ಮಂತ್ರ ಆಯ್ದುಕೊಳ್ಳುವ ಸಲಹೆ ನೀಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

    ಇಸ್ಲಾಮಿಕ್​ ಎಮಿರೇಟ್ಸ್​ ಆಫ್ಘಾನ್​ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಶುಕ್ರವಾರ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ರಷ್ಯಾ ಮತ್ತು ಯೂಕ್ರೇನ್​ ಎರಡು ದೇಶಗಳು ಸಂಯಮ ಕಾಯ್ದುಕೊಳ್ಳುವಂತೆ ಕರೆ ನೀಡಿದೆ.

    ಯೂಕ್ರೇನ್​ನಲ್ಲಿನ ಪರಿಸ್ಥಿತಿಯನ್ನು ಅಫ್ಘಾನಿಸ್ತಾನ ತುಂಬಾ ಹತ್ತಿರದಿಂದ ಅವಲೋಕಿಸುತ್ತಿದ್ದು, ಅಲ್ಲಿನ ನಾಗರಿಕ ಸಾವು-ನೋವುಗಳಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ತನ್ನ ತಟಸ್ಥತೆಯ ವಿದೇಶಾಂಗ ನೀತಿಗೆ ಅನುಗುಣವಾಗಿ ಉಭಯ ರಾಷ್ಟ್ರಗಳು ತಮ್ಮ ಸಮಸ್ಯೆಗಳನ್ನು ಶಾಂತಿಯುತ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕೆಂದು ಕರೆ ಕೊಟ್ಟಿದೆ. (ಏಜೆನ್ಸೀಸ್​)

    ಕೇಳುವವರು ಕೇಳುತ್ತಾರೆ….ಪಾತ್ರಕ್ಕಾಗಿ ಪಲ್ಲಂಗದ ಬಗ್ಗೆ ಶಾಕಿಂಗ್​ ಕಾಮೆಂಟ್​ ಮಾಡಿದ ನಟಿ ಸ್ನೇಹಾ ಶರ್ಮಾ!

    ಬೆಂಗಳೂರಿನಲ್ಲಿ ಪಾದಚಾರಿ ಬಲಿ ಪಡೆದ ಟಿಪ್ಪರ್ ಲಾರಿ ಚಾಲಕನಿಗೆ ಕೋರ್ಟ್​ ಕೊಟ್ಟ ಶಿಕ್ಷೆ ಹೀಗಿದೆ…

    ರಷ್ಯಾ ಹಿಡಿತ, ಕದನವಿರಾಮ ಸನ್ನಿಹಿತ: ಹತಾಶ ಯೂಕ್ರೇನ್​ನಿಂದ ಸಂಧಾನ ಸೂತ್ರ  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts