More

    ಯುರೋಪ್​ನ ಅತಿ ದೊಡ್ಡ ಅಣು ಸ್ಥಾವರ ಝಪೊರಿಝಿಯಾ ಮೇಲೆ ರಷ್ಯಾ ದಾಳಿ: ವಿಶ್ವಸಂಸ್ಥೆಯಿಂದ ತುರ್ತು ಸಭೆ

    ಕೀಯೆವ್​/ಮಾಸ್ಕೋ: ಯೂಕ್ರೇನ್​ ಮೇಲೆ ತೀವ್ರ ದಾಳಿಯನ್ನು ಮುಂದುವರಿಸಿರುವ ರಷ್ಯಾ, ಯೂಕ್ರೇನ್​ನಲ್ಲಿರುವ ಯುರೋಪ್​ನ ಅತಿ ದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಝಪೊರಿಝಿಯಾ ಮೇಲೆ ಶೆಲ್​ ದಾಳಿ ನಡೆಸಿರುವುದಾಗಿ ಹತ್ತಿರದ ಪಟ್ಟಣದ ಮೇಯರ್ ಒಬ್ಬರು ತಿಳಿಸಿದ್ದಾರೆ. ರಷ್ಯಾ ಪಡೆಗಳು ಗುಂಡಿನ ದಾಳಿ ಮುಂದುವರಿಸಿರುವುದರಿಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಸಾಧ್ಯವಾಗಿಲ್ಲ. ರಷ್ಯಾದ ಈ ನಡೆ ತುಂಬಾ ವಿನಾಶಕಾರಿಯಾಗಿದ್ದು, ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.

    ಅಣು ಸ್ಥಾವರದ ಮೇಲೆ ದಾಳಿಯಾಗಿದ್ದರೂ ಸ್ಥಳದಲ್ಲಿ ವಿಕಿರಣ ಭದ್ರತೆಯನ್ನು ಖಾತರಿಪಡಿಸಲಾಗಿದೆ ಎಂದು ಅಣು ಸ್ಥಾವರದ ನಿರ್ದೇಶಕ ಯೂಕ್ರೇನ್​ 24 ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಕೂಡ ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿಗೆ ಕರೆ ಮಾಡಿ ಅಣು ಸ್ಥಾವರ ಮೇಲಿನ ದಾಳಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ, ಜಪೋರಿಝಿಯಾದಲ್ಲಿ ಮಿಲಿಟರಿ ಚಟುವಟಿಕೆಗಳನ್ನು ನಿಲ್ಲಿಸಲು ಬೈಡೆನ್ ರಷ್ಯಾವನ್ನು ಒತ್ತಾಯಿಸಿದ್ದಾರೆ.

    ಅಣು ಸ್ಥಾವರದ ಮೇಲಿನ ದಾಳಿಯ ಬೆನ್ನಲ್ಲೇ ರಷ್ಯಾ ವಿರುದ್ಧ ಹರಿಹಾಯ್ದಿರುವ ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಕಚೇರಿಯ ಮುಖ್ಯ ಸಲಹೆಗಾರ ಝಪೊರಿಝಿಯಾ ಅಣು ಸ್ಥಾವರ ಬೆಂಕಿಯಲ್ಲಿದೆ. ಇಡೀ ಯುರೋಪ್ ಪರಮಾಣು ದುರಂತದ ಪುನರಾವರ್ತನೆಯ ಅಪಾಯದಲ್ಲಿದೆ. ರಷ್ಯಾ ಕೂಡಲೇ ತನ್ನ ಫೈರಿಂಗ್​ ಅನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

    ಅಣುಸ್ಥಾವರದ ಮೇಲೆ ರಷ್ಯಾ ದಾಳಿ ಮಾಡಿದ ಬೆನ್ನಲ್ಲೇ ಯುನೈಟೆಡ್​ ಕಿಂಗ್​ಡಮ್​ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆ ಕರೆದಿದೆ.

    ದಾಳಿಯ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿರುವ ವ್ಲಾದಿಮಿರ್​ ಪುತಿನ್​, ಯೂಕ್ರೇನ್​ ಮೇಲಿನ ದಾಳಿ ಅಂದುಕೊಂಡಂತೆ ಸಾಗುತ್ತಿದೆ. ರಷ್ಯಾವು “ನವ-ನಾಜಿಗಳನ್ನು” ಬೇರುಸಹಿತ ಕಿತ್ತೊಗೆಯುತ್ತಿದೆ ಎಂದಿರುವ ಪುತಿನ್, ರಷ್ಯಾನ್ನರು ಮತ್ತು ಉಕ್ರೇನಿಯನ್ನರು ಒಂದೇ ಎಂಬ ತನ್ನ ನಂಬಿಕೆಯನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಮಾಧ್ಯಮವನ್ನು ಉದ್ದೇಶಿಸಿ ಹೇಳಿಕೆ ನೀಡಿದರು.

    ರಷ್ಯಾ ಕಳೆದ ಫೆ. 24ರಂದು ಯೂಕ್ರೇನ್​ ವಿರುದ್ಧ ಆಕ್ರಮಣ ಆರಂಭಿಸಿದಾಗಿನಿಂದ ಈವರೆಗೆ ಲಕ್ಷಾಂತರ ಮಂದಿ ಯೂಕ್ರೇನ್​ ತೊರೆದಿದ್ದಾರೆ. ಅಲ್ಲದೆ, ಈ ಯುದ್ಧ 700ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಚ್ಛಾ ತೈಲದ ಬೆಲೆ ಏರಿಕೆಯಾಗಿದ್ದು, ಜಾಗತಿಕ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗುವ ಲಕ್ಷಣಗಳು ಗೋಚರಿಸುತ್ತಿವೆ. (ಏಜೆನ್ಸೀಸ್​)

    ಜೀವಂತ ಅಥವಾ ಶವ! ಪುತಿನ್​ ಜೀವಕ್ಕೆ ರಷ್ಯಾ ಉದ್ಯಮಿ ಆಫರ್​ ಮಾಡಿದ ಮೊತ್ತ ಕೇಳಿದ್ರೆ ದಂದಾಗ್ತೀರಾ!

    ಉತ್ತರ ಕನ್ನಡದ ದಾಂಡೇಲಿಯಲ್ಲಿ ಸೈಕಲ್​ ಅಪಘಾತದಲ್ಲಿ ಯುವ ವೈದ್ಯೆ ದುರಂತ ಸಾವು

    ಇಂದಿನಿಂದ ಶ್ರೀಲಂಕಾ ವಿರುದ್ಧ ಕಾದಾಟ; ಕೊಹ್ಲಿಗೆ 100ನೇ, ಕ್ಯಾಪ್ಟನ್ ರೋಹಿತ್‌ಗೆ 1ನೇ ಟೆಸ್ಟ್ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts