More

    ಪ್ರಾರಂಭಿಕ ಹಂತದಲ್ಲಿಯೇ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯಿರಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬಹಳಷ್ಟು ಜನ ಮುಂದುವರಿದ ಹಂತದಲ್ಲಿದ್ದಾಗ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯಲು ಬರುತ್ತಾರೆ. ಪ್ರಾರಂಭಿಕ ಹಂತದಲ್ಲಿಯೇ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯಬೇಕು ಎಂದು ಹುಬ್ಬಳ್ಳಿಯ ಕರ್ನಾಟಕ ಕ್ಯಾನ್ಸರ್ ಥೆರಪಿ ಆಂಡ್ ರಿಸರ್ಚ್ ಇನ್​ಸ್ಟಿಟ್ಯೂಟ್ (ಕೆಸಿಟಿಆರ್​ಐ) ಚೇರ್ಮನ್ ಡಾ. ಬಿ.ಆರ್. ಪಾಟೀಲ ಹೇಳಿದರು.

    ನವನಗರದಲ್ಲಿ ಗುರುವಾರ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವತಿಯಿಂದ ‘ರೋಟರಿ ಆರೋಗ್ಯ ವಾಹಿನಿ(ಬಸ್)’ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದುವರಿದ ಹಂತದಲ್ಲಿ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುವುದು ವೆಚ್ಚದಾಯಕವೂ ಆಗಿರಲಿದೆ ಎಂದರು.

    ಎಲ್ಲ ಸ್ವರೂಪದ ಕ್ಯಾನ್ಸರ್​ಗಳಲ್ಲಿ ಸ್ತನ, ಬಾಯಿ ಹಾಗೂ ಗರ್ಭಕಂಠ ಕ್ಯಾನ್ಸರ್​ಗಳ ಪಾಲು ಶೇ. 70 ರಷ್ಟಿದೆ. ಇವುಗಳನ್ನು ಪತ್ತೆ ಮಾಡುವುದು ಸುಲಭ. ಬಹಳ ಕಡಿಮೆ ಜನ ಚಿಕಿತ್ಸೆಗೆ ಬರುತ್ತಾರೆ. ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯಲು ಜನರು ಮುಂದಾಗಬೇಕು ಎಂದು ಹೇಳಿದರು.

    ಆರೋಗ್ಯ ವಾಹಿನಿ ವಾಹನ ಉದ್ಘಾಟಿಸಿದ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ನಾಸಿರ್ ಬೊರಸಡವಾಲಾ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಅವರು ಬಹಳ ದೊಡ್ಡ ಸೇವೆ ಮಾಡಿದ್ದರು. ಅವರು ಕಟ್ಟಿದ ಸಂಸ್ಥೆ (ಕೆಸಿಟಿಆರ್​ಐ)ಯಲ್ಲಿ ಉತ್ತಮ ತಂಡವಿದ್ದು, ಇಂದು ಸಹ ಅತ್ಯುತ್ತಮ ಚಿಕಿತ್ಸೆ ನೀಡುವಲ್ಲಿ ಹೆಸರು ಮಾಡಿದ ಎಂದು ಹೇಳಿದರು.

    ರೋಟಟಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷ ಅರವಿಂದ ಕುಬಸದ ಮಾತನಾಡಿ, ದಾನಿಗಳ ನೆರವಿಲ್ಲದಿದ್ದರೆ ಇಂದು ಇಂಥದೊಂದು ಕಾರ್ಯ ಸಾಧ್ಯವಾಗುತ್ತಿರಲಿಲ್ಲ. ಟಾಟಾ ಮೋಟಾರ್ಸ್​ನವರು ಆರೋಗ್ಯ ವಾಹಿನಿ ಬಸ್​ನ ಚೇಸಿಸ್ ಉಚಿತವಾಗಿ ನೀಡಿದ್ದಾರೆ. ರೋಟರಿ ಕ್ಲಬ್ ಆಫ್ ಆಗಸ್ಟಾ (ಅಮೆರಿಕ), ರಾಜು ಮಹಾಲಿಂಗಶೆಟ್ಟಿ ಆರ್ಥಿಕ ನೆರವು ಕಲ್ಪಿಸಿದ್ದಾರೆ ಎಂದು ತಿಳಿಸಿದರು.

    ಮಾಜಿ ಡಿಸ್ಟಿಕ್ಟ್ ಗವರ್ನರ್​ಗಳಾದ ರವಿ ವಡ್ಡಲಮನಿ, ಸಂಗ್ರಾಮ ಪಾಟೀಲ ಮಾತನಾಡಿದರು. ಟಾಟಾ ಮೋಟಾರ್ಸ್​ನ ಪ್ರಾದೇಶಿಕ ವ್ಯವಸ್ಥಾಪಕ ಶ್ರೀಧರ ಕಟ್ಟಿ, ದಾನಿ ರಾಜು ಮಹಾಲಿಂಗಶೆಟ್ಟಿ, ವಸಂತ ಭಸ್ಮೆ, ವಿನಯ ಮೋಮಯ್, ಇತರರು ವೇದಿಕೆಯಲ್ಲಿ ಇದ್ದರು. ಅಕ್ಷಯ ಮೆಹರವಾಡೆ ನಿರೂಪಿಸಿದರು. ಸುರೇಂದ್ರ ಪೋರವಲ್ ವಂದಿಸಿದರು. ಉದ್ಯಮಿ ಮಹಾದೇವ ಕರಮರಿ, ಮಹೇಂದ್ರ ಸಿಂಘಿ, ಡಾ.ಎಸ್.ಎಸ್. ಹಿರೇಮಠ, ಅನಿತಾ ಪಾಟೀಲ, ಸಿದ್ದೇಶ್ವರ ಕಮ್ಮಾರ, ರಿಯಾಜ್ ಬಸರಿ, ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts