More

    ಮತ್ತೆ ರೆಪೋ ದರ ಏರಿಸಿದ RBI: ಬ್ಯಾಂಕ್​ ಸಾಲಗಾರರಿಗೆ ಇಎಂಐ ಮತ್ತಷ್ಟು ಹೊರೆ

    ನವದೆಹಲಿ: ಬ್ಯಾಂಕ್​ ಸಾಲಗಾರರಿಗೆ ಮತ್ತೆ ಬಡ್ಡಿ ಏರಿಕೆ ಬರೆ ಎದುರಾಗಿದೆ. 50 ಮೂಲ ಅಂಶಗಳ ಏರಿಕೆಯೊಂದಿಗೆ ರೆಪೋ ದರ ಶೇ 4.90 ರಷ್ಟಾಗಿದ್ದು, ಇಎಂಐ ಮತ್ತಷ್ಟು ದುಬಾರಿಯಾಗಲಿದೆ.

    ಆರ್​ಬಿಐನ ಹಣಕಾಸು ನೀತಿ ಸಮಿತಿಯ ಮೂರು ದಿನಗಳ ಸಭೆಯ ಬಳಿಕ ರೆಪೋ ದರ ಏರಿಕೆ ನಿರ್ಧಾರವನ್ನು ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್ ಬುಧವಾರ​ ಪ್ರಕಟಿಸಿದ್ದಾರೆ. ಕಳೆದ ತಿಂಗಳು 40 ಮೂಲಾಂಶಗಳೊಂದಿಗೆ ರೆಪೋ ದರ 4.4 ರಷ್ಟಿತ್ತು. ಇದೀಗ 50 ಮೂಲಾಂಶಗಳ ಏರಿಕೆಯೊಂದಿಗೆ ರೆಪೋ ದರ 4.90 ರಷ್ಟಾಗಿದೆ. ಏರುತ್ತಿರುವ ಹಣದುಬ್ಬರವನ್ನು ಸರಿದೂಗಿಸುವ ನಿಟ್ಟಿನಲ್ಲಿ ಆರ್​ಬಿಐ ರೆಪೋ ದರ ಏರಿಕೆ ಮಾಡಿದೆ.

    2018ರ ಆಗಸ್ಟ್​ನಿಂದ ಇಲ್ಲಿಯವರೆಗೆ ಎರಡನೇ ಬಾರಿಯ ರೆಪೋ ದರ ಏರಿಕೆ ಇದಾಗಿದೆ. ರೆಪೋ ರೇಟ್​ ವಾಣಿಜ್ಯ ಬ್ಯಾಂಕ್​ಗಳಿಗೆ ಆರ್​ಬಿಐ ನೀಡುವ ಹಣದ ದರವಾಗಿದ್ದು, ಹಣದುಬ್ಬರ ನಿಯಂತ್ರಿಸಲು ಇರುವ ಪ್ರಮುಖ ಸಾಧನ ಎಂದು ಪರಿಗಣಿಸಲಾಗಿದೆ.

    ರೆಪೋ ದರ ಏರಿಕೆಯಿಂದಾಗಿ ಸಾಲ ಪಡೆಯಲು ಸಿದ್ಧತೆ ನಡೆಸಿದ್ದರೆ ಬೇಗ ಸಾಲ ಪಡೆಯುವುದು ಒಳಿತು. ಸಾಲದ ಬಡ್ಡಿದರ ಶೀಘ್ರದಲ್ಲೇ ಏರಿಕೆ ಆಗಲಿದೆ. ಈಗಾಗಲೇ ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲ ಪಡೆದವರಿಗೂ ಬಡ್ಡಿ ದರ ಏರಿಕೆಯ ಬಿಸಿ ತಟ್ಟಲಿದೆ.

    ಮೇ 31 ರಂದು ರಾಷ್ಟ್ರೀಯ ಅಂಕಿ-ಅಂಶ ಕಚೇರಿ (NSO) ಬಿಡುಗಡೆ ಮಾಡಿದ ತಾತ್ಕಾಲಿಕ ಅಂದಾಜುಗಳ ಪ್ರಕಾರ, 2021-22ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಬೆಳವಣಿಗೆ 8.7 ರಷ್ಟಿದೆ ಎಂದು ಅಂದಾಜಿಸಿದೆ. 2021-22ರಲ್ಲಿ ನೈಜ ಜಿಡಿಪಿಯ ಮಟ್ಟವು ಸಾಂಕ್ರಾಮಿಕ ಪೂರ್ವದ ಅಂದರೆ 2019-20ರ ಮಟ್ಟವನ್ನು ಮೀರಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

    2022-23ರ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿ ಬೆಳವಣಿಗೆಯನ್ನು ಆರ್​ಬಿಐ ಶೇ. 7. 2ರಲ್ಲಿ ಇರಿಸಿದೆ. 2022-23ರ ಮೊದಲ ತ್ರೈಮಾಸಿಕ (ಏಪ್ರಿಲ್​-ಜೂನ್​)ದಲ್ಲಿ ಶೇ. 16.2, ಎರಡನೇ ತ್ರೈಮಾಸಿಕ(ಜುಲೈ-ಸೆಪ್ಟೆಂಬರ್​)ದಲ್ಲಿ ಶೇ. 6.2, ಮೂರನೇ ತ್ರೈಮಾಸಿಕ (ಅಕ್ಟೋಬರ್​-ಡಿಸೆಂಬರ್​)ದಲ್ಲಿ ಶೇ. 4.1 ಮತ್ತು ನಾಲ್ಕನೇ ತ್ರೈಮಾಸಿಕ(ಜನವರಿ-ಮಾರ್ಚ್​)ದಲ್ಲಿ ಶೇ. 4ರಷ್ಟು ಜಿಡಿಪಿ ಬೆಳವಣಿಗೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

    ‘ಸಿಎಂ ಮಗ ಸಿಎಂ ಆದ್ರೆ ತಪ್ಪೇನು? ವಿಜಯೇಂದ್ರ ಮುಖ್ಯಮಂತ್ರಿ ಆಗಲಿ…’

    3.5 ಕೋಟಿ ರೂ. ಸಂಬಳದ ಉದ್ಯೋಗಕ್ಕೆ ಗುಡ್​ ಬೈ ಹೇಳಿದ ಭೂಪ: ಕಾರಣ ಕೇಳಿದ್ರೆ ಶಾಕ್​ ಆಗೋದು ಖಂಡಿತ!

    ಮೈಸೂರು ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ? ಪಿಯುಸಿ ಓದುತ್ತಿದ್ದ ಮಗಳನ್ನೇ ಹತ್ಯಗೈದ ತಂದೆ-ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts