More

    ಅನುದಾನ ವಿಚಾರವಾಗಿ ಎಚ್​​ಡಿಕೆ-ಸಿಪಿವೈ ಬೆಂಬಲಿಗರ ನಡುವೆ ಜಟಾಪಟಿ: ಸಿಪಿವೈ ಕಾರಿಗೆ ಕಲ್ಲು ತೂರಾಟ

    ರಾಮನಗರ: ಸರ್ಕಾರದ ಅನುದಾನ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್​ ಬೆಂಬಲಿಗರ ನಡುವೆ ಜಟಾಪಟಿ ನಡೆದ ಘಟನೆ ಚನ್ನಪಟ್ಟಣದಲ್ಲಿಂದು (ಅ.1) ನಡೆದಿದೆ.

    ಎಚ್​ಡಿಕೆ ಮತ್ತು ಸಿಪಿವೈ ಉಭಯ ನಾಯಕರ ಮನವಿ ಮೇರೆಗೆ ಗ್ರಾಮೀಣಾಭಿವೃದ್ಧಿಗೆ 50 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ಚನ್ನಪಟ್ಟಣದ ರಾಂಪುರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು.

    ಕಾರ್ಯಕ್ರಮಕ್ಕೆ ಸಂಬಂಧಿಸಿದ ಆಹ್ವಾನ ಪತ್ರಿಕೆಯಲ್ಲಿ ವಿಧಾನ ಪರಿಷತ್​ ಶಾಸಕರಾದ ಸಿ.ಪಿ ಯೋಗೇಶ್ವರ್ ಕೋರಿಕೆ ಮೇರೆಗೆ ವಿಶೇಷ ಅನುದಾನ ಬಿಡುಗಡೆಯಾಗಿದೆ ಎಂದು ಮುದ್ರಿಸಿರುವುದು ಜೆಡಿಎಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಎಚ್​.ಡಿ. ಕುಮಾರಸ್ವಾಮಿ ಅವರು ಸ್ಥಳೀಯ ಶಾಸಕರಾಗಿದ್ದು, ಅವರನ್ನು ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಜೆಡಿಎಸ್​ ಬೆಂಬಲಿಗರು ಪ್ರತಿಭಟನೆ ನಡೆಸಿದರು.

    ಅನುದಾನ ವಿಚಾರವಾಗಿ ಎಚ್​​ಡಿಕೆ-ಸಿಪಿವೈ ಬೆಂಬಲಿಗರ ನಡುವೆ ಜಟಾಪಟಿ: ಸಿಪಿವೈ ಕಾರಿಗೆ ಕಲ್ಲು ತೂರಾಟ

    ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ಜೊತೆ ಸಿ.ಪಿ.ಯೋಗೇಶ್ವರ್​ ಭೂಮಿ ಪೂಜೆ ನೆರವೇರಿಸಿದರು. ಇದಕ್ಕೂ ಮುನ್ನ ತೀವ್ರ ಪ್ರತಿಭಟನೆ ನಡೆಸಲು ಮುಂದಾದಾಗ, ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕೊರೆದೊಯ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ 500ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಅಲ್ಲದೆ, ಭೂಮಿ ಪೂಜೆ ಮಾಡುವ ಸ್ಥಳಕ್ಕೆ ಸಾರ್ವಜನಿಕರು ತೆರಳದಂತೆ ತಡೆ ನೀಡಲಾಗಿತ್ತು.

    ಪ್ರತಿಭಟನಾಕಾರರನ್ನು ಬಂಧಿಸಿ ಕರೆದೊಯ್ಯುವ ವೇಳೆ ಪೊಲಿಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ಸಹ ನಡೆಯಿತು. ಸ್ಥಳದಲ್ಲಿ 40% ಸರ್ಕಾರ, 40% ಪಡೆಯುವುದಕ್ಕಾಗಿ ಸಿಪಿವೈ ಗುದ್ದಲಿ ಪೂಜೆ ಮಾಡುತ್ತಿದ್ದಾರೆಂದು ಘೋಷಣೆ ಕೂಗಿದರು.

    ಇದಾದ ಬಳಿಕ ಪ್ರತಿಭಟನೆ ರಾಂಪುರ ಗ್ರಾಮದಿಂದ ಬೈರಾಪಟ್ಟಣ ಗ್ರಾಮಕ್ಕೆ ಸ್ಥಳಾಂತರವಾಯಿತು. ಬೈರಪಟ್ಟಣದಲ್ಲೂ ಗುದ್ದಲಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಸಚಿವರು ಬೈರಾಪಟ್ಟಣಕ್ಕೆ ಬರುತ್ತಾರೆಂದು ಬೈರಾಪಟ್ಟಣಕ್ಕೆ ತೆರಳಿದ ಜಿಡಿಎಸ್ ಕಾರ್ಯಕರ್ತರು, ಬೈರಾಪಟ್ಟಣದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸಿದರು.

    ಸಿಪಿವೈ ಕಾರಿನ ಮೇಲೆ ಕಲ್ಲು ಎಸೆತ
    ಪೋಲಿಸ್ ಭದ್ರತೆಯಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಯೋಗೇಶ್ವರ್ ಹೊರಟ್ಟಿದ್ದಾಗ ಪ್ರತಿಭಟನಾಕಾರರು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು. ಇದನ್ನು ಕಂಡ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಲಾಟಿ ಬೀಸಿದರು. ಅಲ್ಲದೆ, ದಶಪಥ ಹೆದ್ದಾರಿ ಬೈಪಾಸ್ ಬಳಿ ಪ್ರತಿಭಟನಾಕಾರನ್ನು ಪೊಲೀಸರು ಅಡ್ಡಗಟ್ಟಿದರು. ಅಕ್ಕೂರಿನಲ್ಲಿ ಗುದ್ದಲಿ ಪೂಜೆಗೆ ಸಿಪಿವೈ ತೆರಳಿದ ಹಿನ್ನೆಲೆಯಲ್ಲಿ ಅಕ್ಕೂರಿಗೆ ತೆರಳದಂತೆ ಪ್ರತಿಭಟನಾಕಾರರನ್ನು ಪೊಲೀಸರು ತಡೆ‌ದರು. (ದಿಗ್ವಿಜಯ ನ್ಯೂಸ್​)

    ದೇಶದಲ್ಲಿ 5ಜಿ ಯುಗ ಆರಂಭ: ಹೈಸ್ಟೀಡ್​ ಇಂಟರ್ನೆಟ್​ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

    ಕಾಂಗ್ರೆಸ್ ಅಧ್ಯಕ್ಷ ಚುನಾವಣೆ: ಖರ್ಗೆ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ!

    2 ವಾರಗಳ ಹಿಂದಷ್ಟೇ ಬಿಡುಗಡೆಯಾದ ಸಿನಿಮಾದಲ್ಲಿ ನಟಿಸಿದ್ದ ಯುವ ನಟಿಯ ಶವ ಹೋಟೆಲ್ ರೂಮ್​ನಲ್ಲಿ ಪತ್ತೆ!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts