More

    VIDEO| ಕನ್ನಡದ ಕೂಸು ರಾಕೇಶ್ ಈಗ ನಮ್ಮವ… ಕಬ್ಬಡಿ ಆಟಗಾರ ರಾಕೇಶ್ ಗೌಡಗೆ ಅದ್ಧೂರಿ ಸ್ವಾಗತ

    ಬೆಂಗಳೂರು: ಅಕ್ಟೋಬರ್​​ 7ರಿಂದ ಸಿಲಿಕಾನ್​ ಸಿಟಿಯಲ್ಲಿ ಆರಂಭವಾಗಲಿರುವ ಪ್ರೋ ಕಬಡ್ಡಿ ಲೀಗ್​ಗೆ ಬೆಂಗಳೂರು ಬುಲ್ಸ್ ತಂಡ, ರಾಕೇಶ್ ಗೌಡ ಅವರನ್ನು ತಂಡಕ್ಕೆ ಬರಮಾಡಿಕೊಂಡಿದೆ.

    ಈ ಸಂಬಂಧದ ವಿಡಿಯೋವನ್ನು ಬೆಂಗಳೂರು ಬುಲ್ಸ್ ಬಹುಭಾಷಿಕ ಸಾಮಾಜಿಕ ಜಾಲತಾಣ ಕೂ ವೇದಿಕೆಯಲ್ಲಿ ಹಂಚಿಕೊಂಡಿದ್ದು, ಕನ್ನಡದ ಕೂಸು ರಾಕೇಶ್ ಈಗ ನಮ್ಮವ ಎಂದು ರಾಕೇಶ್ ಗೌಡ ಅವರಿಗೆ ಸ್ವಾಗತ ಕೋರಿದೆ.

    ಅಕ್ಟೋಬರ್ 7ರಂದು ಬೆಂಗಳೂರಿನ ಕಂಠೀರವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೋ ಕಬ್ಬಡಿ ಲೀಗ್ ಆರಂಭವಾಗಲಿದ್ದು, ಎರಡು ಹಂತಗಳಲ್ಲಿ ನಡೆಯಲಿದೆ. ಈ ಬಾರಿ ಪ್ರೇಕ್ಷಕರಿಗೂ ಆಹ್ವಾನ ಸಿಕ್ಕಿರುವುದು ಕಬ್ಚಡಿ ಆಟದ ಮೆರಗನ್ನು ಮತ್ತಷ್ಟು ಹೆಚ್ಚಿಸಲಿದೆ.

    VIDEO| ಕನ್ನಡದ ಕೂಸು ರಾಕೇಶ್ ಈಗ ನಮ್ಮವ... ಕಬ್ಬಡಿ ಆಟಗಾರ ರಾಕೇಶ್ ಗೌಡಗೆ ಅದ್ಧೂರಿ ಸ್ವಾಗತ

    ಅಕ್ಟೋಬರ್ 7 ರ ಮೊದಲ ದಿನ ದಬಾಂಗ್ ಮತ್ತು ಯು ಮುಂಬಾ ಸೆಣಸಲಿದೆ. ಇನ್ನು ಅದೇ ದಿನ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟನ್ಸ್ ಕಾದಾಟಕ್ಕಿಳಿಯಲಿವೆ. ಅಕ್ಟೋಬರ್ 7 ರಂದು ಮೂರು ಪಂದ್ಯಗಳು, ಅಕ್ಟೋಬರ್ 8 (ಶನಿವಾರ) ಮೂರು ಪಂದ್ಯಗಳು, ಅಕ್ಟೋಬರ್ 9 ಎರಡು ಪಂದ್ಯಗಳು ನಡೆಯಲಿದೆ. ಅಕ್ಟೋಬರ್ 7 ರ ಮೊದಲ ದಿನ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

    ಪ್ರೋ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ: ಸಿಲಿಕಾನ್​ ಸಿಟಿಯಲ್ಲಿ ಕಳೆಗಟ್ಟಲಿದೆ ಕಬಡ್ಡಿ ಕಲರವ

    ಸದನದಲ್ಲಿ BMS ಸಮರ: ಅಶ್ವತ್ಥ್​ ನಾರಾಯಣ್​ ರಾಜೀನಾಮೆಗೆ ಎಚ್​ಡಿಕೆ ಆಗ್ರಹ, ಮುಂದುವರಿದ ಜೆಡಿಎಸ್​ ಪ್ರತಿಭಟನೆ

    ಪಿಎಫ್​ಐ ಪ್ರತಿಭಟನೆಗೆ ಹೈಕೋರ್ಟ್​ ಕೆಂಡಾಮಂಡಲ: ಸ್ವಯಂ ಪ್ರೇರಿತ ದೂರು ದಾಖಲು- ನ್ಯಾಯಾಂಗ ನಿಂದನೆ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts