More

    PHOTOS| ಬಿಕಿನಿ ಧರಿಸಿ ಮಾಲ್ಡೀವ್ಸ್​ ಕಡಲ ಕಿನಾರೆಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿದ ನಟಿ ಪ್ರಣೀತಾ

    ಹೈದರಾಬಾದ್​: ಕರೊನಾ ಕಾಲದಲ್ಲಿ ದಿಢೀರ್​ ಮದುವೆ ಆಗಿ ಅಭಿಮಾನಿಗಳಿಗೆ ಸರ್ಪ್ರೈಸ್​ ನೀಡಿದ ನಟಿ ಪ್ರಣೀತಾ, ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ತಮ್ಮ ಮಗುವಿನ ಜೊತೆ ಫೋಟೋಶೂಟ್​ ಮಾಡಿಸಿ, ಸಂಭ್ರಮಿಸಿದ್ದರು. ಇದೀಗ ಪ್ರಣೀತಾ ಅವರು ತಮ್ಮ ಕುಟುಂಬದೊಂದಿಗೆ ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್​ನಲ್ಲಿ ಬೀಡು ಬಿಟ್ಟಿದ್ದು, ಪ್ರಕೃತಿಯ ಮಡಿಲಲ್ಲಿ ಎಂಜಾಯ್​ ಮಾಡುತ್ತಿದ್ದಾರೆ.

    ಮಾಲ್ಡೀವ್ಸ್​ಗೆ ಹೋಗುವ ಸೆಲೆಬ್ರಿಟಿಗಳಂತೂ ತಮ್ಮ ಇನ್​ಸ್ಟಾಂಗ್ರಾಂನಲ್ಲಿ ಏನಾದರೂ ಒಂದು ಅಪ್​ಡೇಟ್​ ಕೊಡಲೇಬೇಕು. ಇಲ್ಲದಿದ್ದರೆ, ಅವರ ಪ್ರವಾಸ ಪೂರ್ಣವಾಗುವುದೇ ಇಲ್ಲ. ಪ್ರಣೀತಾ ಕೂಡ ಇದಕ್ಕೆ ಹೊರತಾಗಿಲ್ಲ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಾಲ್ಡೀವ್ಸ್​ ರೆಸಾರ್ಟ್ಸ್​ನಲ್ಲಿ ತೀರ ಪ್ರದೇಶದಲ್ಲಿ ಕಳೆದ ಸುಮಧುರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಮಾಲ್ಡೀವ್ಸ್​ನಲ್ಲಿರುವ ರೆಸಾರ್ಟ್​ಗಳು ತಮ್ಮ ಪ್ರಚಾರದ ಭಾಗವಾಗಿ ಸೆಲೆಬ್ರಿಟಿಗಳಿಗೆ ಉಚಿತ ಪ್ರವಾಸದ ವ್ಯವಸ್ಥೆ ಮಾಡುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ಸೆಲೆಬ್ರಿಟಿಗಳ ನೆಚ್ಚಿನ ತಾಣ ಇದೇ ಆಗಿದೆ. ಕರೊನಾದಿಂದ ಬಿಡುವು ಸಿಕ್ಕ ಬಳಿಕ ಬಾಲಿವುಡ್​, ಟಾಲಿವುಡ್​, ಕಾಲಿವುಡ್​ ಮತ್ತು ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು ಒಂದು ಸುತ್ತು ಸುತ್ತಾಡಿ ಬಂದಿರುವುದು ವರದಿಯಾಗಿವೆ.

    ನಟಿಯರಿಗಂತೂ ಮಾಲ್ಡೀವ್ಸ್​ ಸ್ವರ್ಗವೇ ಸರಿ. ಕಡಲ ಕಿನಾರೆಯಲ್ಲಿ ಮೈಚಳಿ ಬಿಟ್ಟು ಮಿಂದೇಳುತ್ತಾರೆ. ಬಿಕಿನಿ ಧರಿಸಿ ಬೋಲ್ಡ್​ ಅವತಾರದಲ್ಲಿ ಕ್ಯಾಮೆರಾಗೆ ಪೋಸ್​ ನೀಡುತ್ತಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಾರೆ. ಅದರಂತೆ ಪ್ರಣೀತಾ ಕೂಡ ಬಿಕಿನಿ ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ್ದು, ಅನಂತ ಮತ್ತು ಅದಕ್ಕೂ ಮೀರಿದ್ದು ಎಂಬ ಅಡಿಬರಹದೊಂದಿಗೆ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

    ಪ್ರಣೀತಾ ಪೋಸ್ಟ್​ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ. ಈಗಾಗಲೇ 70 ಸಾವಿರಕ್ಕೂ ಅಧಿಕ ಲೈಕ್ಸ್​ಗಳು ಹರಿದುಬಂದಿವೆ. ತಾಯಿಯಾದ ಬಳಿಕ ಮತ್ತೆ ವರ್ಕೌಟ್​ ಮಾಡಿರುವ ಪ್ರಣೀತಾ ತಮ್ಮ ದೇಹವನ್ನು ಮೊದಲಿನ ಲಯಕ್ಕೆ ಮರಳಿಸಿದ್ದಾರೆ. ಫಿಟ್​ ಆ್ಯಂಡ್​ ಫೈನ್​ ಆಗಿ ಕಾಣುತ್ತಿದ್ದು, ಮತ್ತೆ ಸಿನಿಮಾ ರಂಗದ ಕಡೆ ಮುಖ ಮಾಡುವ ಲಕ್ಷಣಗಳು ಕಾಣುತ್ತಿವೆ. ಕುಟುಂಬ ಮತ್ತು ಸಿನಿಮಾ ಹೊರತಾಗಿ ಪ್ರಣೀತಾ, ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ರಾಜಕೀಯಕ್ಕೆ ಎಂಟ್ರಿ ಕೊಡಲು ಸ್ಯಾಂಡಲ್​ವುಡ್​ ನಟಿ ತಯಾರಿ!

    ಮರೆಯಾದ ಮಾನವೀಯತೆ: ಯುವಕ ನೇಣು ಹಾಕಿಕೊಳ್ಳುವುದನ್ನು ತಡೆಯದೇ ವಿಡಿಯೋ ಮಾಡಿದ ಭೂಪರು

    ಎಲೆಕ್ಟ್ರಿಕ್​ ಸ್ಕೂಟರ್​ ಶೋರೂಮ್​ನಲ್ಲಿ ಅಗ್ನಿ ಅವಘಡ: 8 ಮಂದಿ ಸಾವು, ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts