More

    ಆನೆ ಕೊಂದು ದಂತ ದೋಚಿದ ಕೇಸ್​: ಪ್ರಜ್ವಲ್ ರೇವಣ್ಣ ವಿರುದ್ಧ ಸಿಎಂಗೆ ಪತ್ರ ಬರೆದ ಸಂಸದೆ ಮನೇಕಾ ಗಾಂಧಿ

    ಹಾಸನ: ವೀರಾಪುರ ಗ್ರಾಮದಲ್ಲಿ ವಿದ್ಯುತ್​ ಶಾಕ್​ ನೀಡಿ ಆನೆ ಕೊಂದು, ಅದರ ದಂತ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಂಸದೆ ಹಾಗೂ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮನೇಕಾ ಗಾಂಧಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

    ಅರಣ್ಯ ಇಲಾಖೆಗೆ ಸಂಬಂಧಿಸಿದ ಈ ಗಂಭೀರ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಪ್ರಜ್ವಲ್​ ರೇವಣ್ಣ ಒತ್ತಡ ಹೇರಿದ್ದಾರೆ ಎಂದು ಮನೇಕಾ ಗಾಂಧಿ ಪತ್ರದಲ್ಲಿ ಆರೋಪ ಮಾಡಿದ್ದಾರೆ.

    ಹಾಸನ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಚಂದ್ರೆಗೌಡ ಮತ್ತು ತಮ್ಮಯ್ಯ ಎಂಬುವರು ಅಕ್ರಮವಾಗಿ ವಿದ್ಯುತ್ ಹರಿಸಿ ಒಂಟಿ ಸಲಗವನ್ನು ಕೊಂದು, ಅದರ ದಂತವನ್ನು ದೋಚಿ ಹೂತು ಹಾಕಿದ್ದರು. ನಂತರ ದಂತವನ್ನು ಮಾರಾಟ ಮಾಡುವ ವೇಳೆ ಕಳೆದ ಮಾರ್ಚ್ 19 ರಂದು ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

    ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿರುವ ಹಾಸನದ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ. ಆದರೆ, ಆರೋಪಿಗಳ ರಕ್ಷಣೆಗೆ ಸ್ಥಳೀಯ ವಲಯ ಅರಣ್ಯಾಧಿಕಾರಿ ಭಾರಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಪತ್ರದಲ್ಲಿ ಮನೇಕಾ ಗಾಂಧಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಪ್ರಕರಣವನ್ನು ವರ್ಗಾಯಿಸಲು ಸಿ.ಕೆ. ಅಚ್ಚುಕಟ್ಟು ಪ್ರದೇಶದ ಪೊಲೀಸರಿಗೆ ಪ್ರಜ್ವಲ್ ರೇವಣ್ಣ ಅವರು ಪದೇಪದೆ ಒತ್ತಡ ಹಾಕಿದ್ದಾರೆ ಎಂದು ಮನೇಕಾ ಗಾಂಧಿ ದೂರಿದ್ದಾರೆ.

    ಆರೋಪಿಗಳು ಸಂಸದ ಪ್ರಜ್ವಲ್ ರೇವಣ್ಣ ಪಾರ್ಟಿಯ ಬೆಂಬಲಿಗರು ಅನ್ನೋ ಕಾರಣಕ್ಕೆ ಅವರ ಪರವಾಗಿ ಸಂಸದರ ಒತ್ತಡ ಹೇರುತ್ತಿದ್ದಾರೆ. ಈ ಪ್ರಕರಣದಲ್ಲಿ ಸಿಎಂ ಬೊಮ್ಮಾಯಿ ಅವರು ಮಧ್ಯಪ್ರವೇಶಿಸಿ, ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸಲು ಸೂಚನೆ ನೀಡುವಂತೆ ಒತ್ತಾಯಿಸಿ ಜುಲೈ 18 ರಂದು ಸಂಸದೆ ಮನೇಕಾ ಗಾಂಧಿ ಪತ್ರ ಬರೆದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಅಪಘಾತ ಆಗಿದೆ ಅಂತ ಕರೆ ಮಾಡಿದ್ರೆ ಕಾಪಾಡುವ ಬದಲು ಪತಿಗೆ ಸಾವಿನ ದಾರಿ ತೋರಿದ ಪತ್ನಿ: ಪ್ರೀತಿ ಕೊಂದ ಕಿರಾತಕಿ?

    ನಾಪತ್ತೆಯಾದ ಮುದ್ದಿನ ಗಿಣಿಗಾಗಿ ಕಣ್ಣೀರಿಡುತ್ತಿರುವ ಕುಟುಂಬ: ಹುಡುಕಿ ಕೊಟ್ಟವರಿಗೆ 50 ಸಾವಿರ ರೂ. ಬಹುಮಾನ

    ಒಳಉಡುಪು ಬಿಚ್ಚಿಟ್ಟು ಪರೀಕ್ಷೆ ಬರೆಯುವಂತೆ ಪಟ್ಟು: ಪಾಲಕರ ಮುಂದೆ ಕಣ್ಣೀರಿಟ್ಟ ವಿದ್ಯಾರ್ಥಿನಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts