More

    ಫಿನ್​ಲ್ಯಾಂಡ್​ ಪ್ರಧಾನಿಯ ಬ್ರೇಕ್​ಫಾಸ್ಟ್​ ಬಿಲ್​ನಲ್ಲಿ ಅಕ್ರಮ ಶಂಕೆ: ಪೊಲೀಸ್​ ತನಿಖೆ ಘೋಷಣೆ

    ಹೆಲ್ಸಿಂಕಿ: ಜನರ ತೆರಿಗೆ ಹಣವನ್ನು ಬಳಸಿ ಪ್ರಧಾನಮಂತ್ರಿಯ ಉಪಹಾರದ ಬಿಲ್​ಗೆ ಅಕ್ರಮವಾಗಿ ಸಬ್ಸಿಡಿ ನೀಡಲಾಗಿದೆಯೇ ಎಂಬ ಸಂಶಯ ವ್ಯಕ್ತವಾದ ಬೆನ್ನಲ್ಲೇ ಆ ಬಗ್ಗೆ ತನಿಖೆ ನಡೆಸುವುದಾಗಿ ಫಿನ್​ಲ್ಯಾಂಡ್​ ಪೊಲೀಸರು ಶುಕ್ರವಾರ ಘೋಷಣೆ ಮಾಡಿದ್ದಾರೆ.

    ಅಧಿಕೃತ ಸರ್ಕಾರಿ ನಿವಾಸ ಕೇಸರಂತಾದಲ್ಲಿ ವಾಸವಾಗಿದ್ದಾಗ ತನ್ನ ಕುಟುಂಬದ ಉಪಹಾರಕ್ಕಾಗಿ ಪ್ರಧಾನಿ ತಿಂಗಳಿಗೆ ಸುಮಾರು 300 ಯುರೋಗಳಷ್ಟು (26,423 ರೂಪಾಯಿ) ವಾಪಸ್ ಪಡೆಯುತ್ತಿದ್ದಾರೆಂದು ಆರೋಪಿಸಿ, ಇಲ್ತಾಲೆಹ್ತಿ ಹೆಸರಿನ ಹಳದಿ ಪತ್ರಿಕೆ ಗುರುವಾರ ವರದಿ ಮಾಡಿದ್ದು, ಈ ಬಗ್ಗೆ ತಿಳಿದ ಪ್ರಧಾನಿ ಸನ್ನಾ ಮರೀನ್​ಗೆ ಶಾಕ್​ ಆಗಿದೆ.

    ಪ್ರತಿಪಕ್ಷದ ನಾಯಕರು ಸಹ ಪ್ರಧಾನಿಯನ್ನು ಆರೋಪಿ ಎಂದು ಬಿಂಬಿಸಿದ್ದಾರೆ. ಆದರೆ, ಈ ಸೌಲಭ್ಯಗಳನ್ನು ನಮ್ಮ ಹಿಂದಿನ ಆಡಳಿತಗಾರರಿಗೂ ನೀಡಲಾಗುತ್ತಿತ್ತು ಎಂದು ಸಮರ್ಥನೆ ನೀಡಿದ್ದಾರೆ. ಅಲ್ಲದೆ, ಓರ್ವ ಪ್ರಧಾನಿಯಾಗಿ ನಾನು ಈ ಪ್ರಯೋಜನವನ್ನು ಕೇಳಿಲ್ಲ ಅಥವಾ ಅದನ್ನು ನಿರ್ಧರಿಸುವಲ್ಲಿಯೂ ಭಾಗಿಯಾಗಿಲ್ಲ ಎಂದು ತಿಳಿಸಿದ್ದಾರೆ.

    ಮಾಧ್ಯಮದ ಜತೆ ಸಮಾಲೋಚನೆ ನಡೆಸಿದ ಕಾನೂನು ತಜ್ಞರು ತರುವಾಯ ತೆರಿಗೆದಾರರ ಹಣವನ್ನು ಪ್ರಧಾನ ಮಂತ್ರಿಯ ಬೆಳಗಿನ ಉಪಾಹರಕ್ಕೆ ಪಾವತಿಸಲು ಬಳಸುವುದು ಫಿನ್ನಿಶ್​ ಶಾಸನವನ್ನು ಉಲ್ಲಂಘಿಸದಂತಾಗುತ್ತದೆ ಎಂದು ಸೂಚಿಸಿದ್ದಾರೆ.

    ಈ ಪ್ರಕರಣದ ತನಿಖೆ ನಡೆಸಲು ಸಾಕಷ್ಟು ಮನವಿಗಳು ಕೇಳಿಬಂದ ಬಳಿಕ ಪೊಲೀಸರು ಪೂರ್ವ-ವಿಚಾರಣೆಯ ತನಿಖೆಯನ್ನು ಶುಕ್ರವಾರ ಘೋಷಿಸಿದ್ದಾರೆ. ಪ್ರಧಾನಮಂತ್ರಿಗಳ ಸಂಭಾವನೆ ಮೇಲಿನ ಕಾನೂನು ಇದಕ್ಕೆ ಅನುಮತಿ ನೀಡುವಂತೆ ಕಾಣಿಸದಿದ್ದರೂ, ಪ್ರಧಾನ ಮಂತ್ರಿಗಳ ಕೆಲವು ಊಟಕ್ಕೆ ಮರುಪಾವತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಪತ್ತೇದಾರಿ ಅಧೀಕ್ಷಕ ಟೀಮು ಜೋಕಿನೆನ್, ಪ್ರಧಾನಮಂತ್ರಿ ಕಚೇರಿ ಒಳಗಿನ ಅಧಿಕಾರಿಗಳ ನಿರ್ಧಾರದ ಮೇಲೆ ತನಿಖೆಯಲ್ಲಿ ಹೆಚ್ಚಿನ ಗಮನ ಹರಿಸಲಾಗುವುದು ಮತ್ತು ಯಾವುದೇ ರೀತಿಯಲ್ಲಿ ಪ್ರಧಾನಿ ಅಥವಾ ಅವರ ಅಧಿಕೃತ ಚಟುವಟಿಕೆಗಳಿಗೆ ತನಿಖೆ ಸಂಬಂಧಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ತನಿಖೆಯ ಘೋಷಣೆ ಬೆನ್ನಲ್ಲೇ ಶುಕ್ರವಾರ ಟ್ವೀಟ್​ ಮಾಡಿರುವ ಪ್ರಧಾನಿ ಮರೀನ್​, ತನಿಖೆಯನ್ನು ಸ್ವಾಗತಿಸಿದ್ದಾರೆ ಮತ್ತು ಪರಿಶೀಲನೆ ವೇಳೆ ಪ್ರಯೋಜನವನ್ನು ಪಡೆಯುವುದನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್​)

    ನನ್ನದು ನಿನ್ನ ಬಾಲ್​ಗಳಿಂತ ದೊಡ್ಡದು! ಅಶ್ಲೀಲ ಪ್ರಶ್ನೆ ಕೇಳಿದವನಿಗೆ ನಟಿಯ ಖಡಕ್​ ಉತ್ತರ

    ನಟಿ ಕಾಜಲ್ ಅಗರ್​ವಾಲ್​ ಸಂಭಾವನೆಯಲ್ಲಿ ಕಟ್!

    ಲವ್ ಮೀ ಆರ್ ಹೇಟ್ ಮೀ; ಇದು ರಚಿತಾ ಹೊಸ ಚಿತ್ರದ ಹೆಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts