More

    ವಿಮಾನ ಪತನ ಮಾಡೋದಾಗಿ ಪೈಲಟ್​ ಬೆದರಿಕೆ: ಸ್ಥಳದಲ್ಲೇ ಗಿರಕಿ ಹೊಡೆಯುತ್ತಿರುವ ವಿಮಾನ, ಹೈ ಅಲರ್ಟ್​ ಘೋಷಣೆ

    ನ್ಯೂಯಾರ್ಕ್​: ನಗರ ಪ್ರದೇಶದಲ್ಲೇ ವಿಮಾನ ಪತನ ಮಾಡುವುದಾಗಿ ಪೈಲಟ್​ ಓರ್ವ ಬೆದರಿಕೆ ಹಾಕಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಪೈಲಟ್​ ಬೆದರಿಕೆಯಿಂದ ಕೆಲ ಕಾಲ ಯುಎಸ್ ನಗರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಅಲ್ಲದೆ, ಮುನ್ನೆಚ್ಚರಿಕಾ ಕ್ರಮವಾಗಿ ಬೆದರಿಕೆ ಹಾಕಿದ ಪ್ರದೇಶದಿಂದ ಜನರನ್ನು ಸ್ಥಳಂತಾರ ಸಹ ಮಾಡಲಾಗಿತ್ತು.

    ಅಂದಹಾಗೆ ಈ ಘಟನೆ ಯುನೈಟೆಡ್​ ಸ್ಟೇಟ್ಸ್​ನ ಈಶಾನ್ಯ ಮಿಸ್ಸಿಸ್ಸಿಪಿಯಲ್ಲಿರುವ ತುಪೆಲೊ ನಗರದಲ್ಲಿ ನಡೆದಿದೆ. ನಗರದ ಪಶ್ಚಿಮ ಭಾಗದಲ್ಲಿರುವ ವಾಲ್​ಮಾರ್ಟ್​ಗೆ ವಿಮಾನ ಪತನ ಮಾಡುವುದಾಗಿ ಪೈಲಟ್​ ಬೆದರಿಕೆ ಹಾಕಿದ್ದ. ಇದರ ಬೆನ್ನಲ್ಲೇ ಮಾರ್ಟ್​ನಲ್ಲಿದ್ದ ಜನರನ್ನು ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರ ಮಾಡಲಾಯಿತು ಎಂದು ಸ್ಥಳೀಯ ಪೊಲೀಸ್​ ಇಲಾಖೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    ಪೈಲಟ್​ ಜೊತೆ ಪೊಲೀಸ್​ ಅಧಿಕಾರಿಗಳು ನೇರವಾಗಿ ಮಾತುಕತೆ ಆರಂಭಿಸಿದ್ದು, ಆತನ ಮನವೊಲಿಕೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದು ಸೂಚನೆ ಬರುವವರೆಗೂ ಬೆದರಿಕೆ ಪ್ರದೇಶವನ್ನು ನಿರ್ಲಕ್ಷಿಸುವಂತೆ ನಾಗರಿಕರ ಬಳಿ ಪೊಲೀಸ್​ ಇಲಾಖೆ ಮನವಿ ಮಾಡಿದೆ. ಟುಪೆಲೋ ಪೊಲೀಸ್ ಇಲಾಖೆ ಜನರನ್ನು ಚದುರಿಸಲು ಕೇಳಿದ್ದು, ಎಲ್ಲಾ ತುರ್ತು ಸೇವೆಗಳನ್ನು ಅಲರ್ಟ್ ಮಾಡಲಾಗಿದೆ ಎಂದು ಹೇಳಿದೆ. ಸದ್ಯ ಸ್ಥಳದಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ.

    ಎರಡು ಇಂಜಿನ್​ ಸಾಮರ್ಥ್ಯದ 9 ಆಸನ ವ್ಯವಸ್ಥೆ ಇರುವ ಬೀಚ್​ಕ್ರಾಫ್ಟ್​ ಕಿಂಗ್​ ಏರ್​ 90 ಹೆಸರಿನ ಸಣ್ಣ ವಿಮಾನವನ್ನು ತೆಗೆದುಕೊಂಡು ಹೋಗಿರುವ ಪೈಲಟ್​, ಆಗಸದಲ್ಲೇ ಒಂದು ಗಂಟೆಗೂ ಅಧಿಕ ಸಮಯದಿಂದ ಗಿರಕಿ ಹೊಡೆಯುತ್ತಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಮೂಡಿದೆ. ರಾಜ್ಯದ ಕಾನೂನು ಜಾರಿ ನಿರ್ದೇಶನಾಲಯ ಮತ್ತು ತುರ್ತು ಇಲಾಖೆ ಬಹಳ ಹತ್ತಿರದಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. (ಏಜೆನ್ಸೀಸ್​)

    ಕಿಡ್ನಿ ಸ್ಟೋನ್ ಇದೆ ಅಂತ ಗೊತ್ತಾಗುವುದು ಹೇಗೆ? ಅದನ್ನು ಗುಣಪಡಿಸಲು ಇರುವ ಮನೆಮದ್ದು ಏನು?

    ನೀವು ಮೋದಿ ಫೋಟೋ ಕೇಳಿದ್ರಲ್ಲ ಇಲ್ಲಿದೆ ನೋಡಿ… ವಿತ್ತ ಸಚಿವೆಯ ಬೇಡಿಕೆಗೆ ಕೆಸಿಆರ್​ ಪಕ್ಷದ ಪ್ರತಿಕ್ರಿಯೆ ಇದು!

    VIDEO| ಡಾನ್ಸ್​ ಮಾಡುತ್ತಲೇ ಪುಟ್ಟ ಬಾಲಕನ ಮೇಲೆ ಬಿದ್ದ ದಡೂತಿ ಮಹಿಳೆ! ಮುಂದೇನಾಯ್ತು ನೀವೇ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts