More

    ಕೇಂದ್ರ ಸರ್ಕಾರ ತೆರಿಗೆ ಇಳಿಸಿದ್ರೂ ಪೆಟ್ರೋಲ್-ಡೀಸೆಲ್​ಗಾಗಿ ಕೇರಳಿಗರು ಕರ್ನಾಟಕಕ್ಕೆ ಬರ್ತಿರೋದ್ಯಾಕೆ?

    ಮಂಗಳೂರು: ಕೇರಳ ಮತ್ತು ಕರ್ನಾಟಕ ನಡುವೆ ಪೆಟ್ರೋಲ್-ಡೀಸೆಲ್ ದರದಲ್ಲಿ ಭಾರಿ ಅಂತರವಿರುವ ಹಿನ್ನೆಲೆಯಲ್ಲಿ ಕೇರಳದ ಜನರು ಕರ್ನಾಟಕಕ್ಕೆ ಬಂದು ವಾಹನಗಳಿಗೆ ಇಂಧನ ಹಾಕಿಸಿಕೊಳ್ಳುತ್ತಿದ್ದಾರೆ.

    ಕರ್ನಾಟಕಕ್ಕೆ ಬರುತ್ತಿರುವ ಬಹುತೇಕ ವಾಹನ ಸವಾರರು ಫುಲ್ ಟ್ಯಾಂಕ್ ಇಂಧನ ಹಾಕಿಸುತ್ತಿದ್ದಾರೆ. ಕರ್ನಾಟಕದ ಪೆಟ್ರೋಲ್ ಬಂಕ್​ಗಳಲ್ಲಿ ಕೇರಳಕ್ಕಿಂತ ಕಡಿಮೆ ದರದಲ್ಲಿ ಪೆಟ್ರೋಲ್ ಡಿಸೇಲ್ ಸಿಗುತ್ತಿದೆ. ಪ್ರತಿ ಲೀಟರ್ ಪೆಟ್ರೋಲ್​ಗೆ 6 ರೂಪಾಯಿ ಮತ್ತು ಡಿಸೇಲ್​ಗೆ 8 ರೂಪಾಯಿ ಅಂತರ ಇದೆ.

    ಕೇಂದ್ರ ಸರ್ಕಾರ ತೆರಿಗೆ ಕಡಿತಗೊಳಿಸಿದರು ಕೆಲ ಬಿಜೆಪಿಯೇತರ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಇಂಧನ ತೆರಿಗೆ ಕಡಿತಗೊಳಿಸಿಲ್ಲ. ಕೇರಳ ಸಹ ಇದೇ ಹಾದಿಯನ್ನು ಅನುಸರಿಸಿರುವುದರಿಂದ ಕರ್ನಾಟಕದ ಗಡಿಯಲ್ಲಿರುವ ಕೇರಳಿಗರು ಕರ್ನಾಟಕದ ಪೆಟ್ರೋಲ್​ ಬಂಕ್​ಗಳಿಗೆ ಮುಗಿ ಬೀಳುತ್ತಿದ್ದಾರೆ. ದರ ವ್ಯತ್ಯಾಸದಿಂದ ಗಡಿ ಭಾಗ ಕಾಸರಗೋಡು ಜಿಲ್ಲೆಯ ಪಂಪ್​ಗಳಲ್ಲಿ ಇಂಧನ ಮಾರಾಟ ಕುಸಿತ ಕಂಡಿದೆ. ದಕ್ಷಿಣಕನ್ನಡ ಜಿಲ್ಲೆಯ ಗಡಿ ಭಾಗದ ಪೆಟ್ರೋಲ್ ಬಂಕ್​ಗಳಿಗೆ ಹೆಚ್ಚಿನ ಆದಾಯ ಹರಿದುಬರುತ್ತಿದೆ.

    ನಿರಂತರ ಇಂಧನ ದರ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ದೇಶಾದ್ಯಂತ ತೀವ್ರ ಆಕ್ರೋಶ ಕೇಳಿಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್​ ಮೇಲೆ 5 ರೂ. ಹಾಗೂ ಡೀಸೆಲ್​ ಮೇಲೆ 10 ರೂ. ಅಬಕಾರಿ ಸುಂಕವನ್ನು ಇಳಿಸುವ ಕುರಿತ ನವೆಂಬರ್​ 3ರಂದು ನಿರ್ಧಾರ ಮಾಡಿತು. ಇದಾದ ಕೆಲವೇ ನಿಮಿಷಗಳಲ್ಲಿ ಕರ್ನಾಟಕ ಸರ್ಕಾರ ಕೂಡ ಪೆಟ್ರೊಲ್​-ಡೀಸೆಲ್​ ಬೆಲೆ ಇಳಿಸಲಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅದರಂತೆ ರಾಜ್ಯದಲ್ಲಿ ಪೆಟ್ರೋಲ್​-ಡೀಸೆಲ್​ ಮೇಲೆ ತಲಾ 7 ರೂ. ತೆರಿಗೆ ಇಳಿದಿದೆ. (ದಿಗ್ವಿಜಯ ನ್ಯೂಸ್​)

    ಮಾಡೆಲ್​ಗಳಿಬ್ಬರ ದುರ್ಮರಣ: ಪಾರ್ಟಿ ನಡೆದ ಹೋಟೆಲ್​ ಮಾಲೀಕ ಮಾಡಿದ ಈ ಕೃತ್ಯದಿಂದ ಸಂಶಯ ದುಪ್ಪಟ್ಟು!

    ಒಂದೇ ಫ್ರೇಮ್​ನಲ್ಲಿ ಸೆರೆಯಾದ ಮೂರು ನಾಗರಹಾವುಗಳ ಅದ್ಭುತ ಫೋಟೋ​! ನೆಟ್ಟಿಗರು ಹೇಳಿದ್ದು ಹೀಗೆ..

    ಅಪ್ಪು ಸಮಾಧಿಯ ಮುಂದೆ ಜಮೀರ್ ಪುತ್ರ ಝೈದಾ ಖಾನ್​ ಅಭಿನಯದ “ಬನಾರಸ್” ಚಿತ್ರದ ಫಸ್ಟ್ ಲುಕ್ ರಿಲೀಸ್​

    ರಂಗೇರಿದ ರಾಜ್ಯ ಒಕ್ಕಲಿಗರ ಸಂಘ ಚುನಾವಣೆ; ನಿರ್ದೇಶಕರ ಸ್ಥಾನಕ್ಕೆ ನಿರ್ಮಾಪಕ ಉಮಾಪತಿ ಸ್ಪರ್ಧೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts