More

    ಕೆಲ್ಸ ಕೊಟ್ಟ ಕಂಪನಿ ವಿರುದ್ಧವೇ ಕೇಸ್​ ಹಾಕಿ 33 ಲಕ್ಷ ಪರಿಹಾರ ಗೆದ್ದ: ಕಾರಣ ಕೇಳಿದ್ರೆ ಬೆರಗಾಗ್ತೀರಾ!

    ಪ್ಯಾರೀಸ್​: ಮಾಡುವ ಕೆಲಸ ಎಷ್ಟೇ ನೀರಸ ಎನಿಸಿದರೂ ಕೂಡ ಹೊಟ್ಟೆಪಾಡಿಗಾಗಿ ಸುಮ್ಮನೇ ಕೆಲಸ ಮಾಡಿಕೊಂಡು ಹೋಗುವವರನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ತಾನು ಮಾಡುವ ಕೆಲಸ ನೀರಸ ಎಂದು ಕೆಲಸ ನೀಡಿದ ಕಂಪನಿ ವಿರುದ್ಧವೇ ಪ್ರಕರಣ ದಾಖಲಿಸಿ, ನ್ಯಾಯಾಲಯದಲ್ಲಿ ಗೆಲುವು ದಾಖಲಿಸಿ ಪರಿಹಾರಣ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

    2016ರಲ್ಲಿ ಫ್ರಾನ್ಸ್​ ರಾಜಧಾನಿ ಪ್ಯಾರಿಸ್​ ಮೂಲದ ಫ್ರೆಡರಿಕ್​ ಡೆಸ್ನಾರ್ಡ್​ ಎಂಬಾತ ತಾನು ಕೆಲಸ ಮಾಡುತ್ತಿದ್ದ ಸುಗಂಧದ್ರವ್ಯ ಮತ್ತು ಸೌಂದರ್ಯವರ್ಧಕ ಕಂಪನಿಯ ವಿರುದ್ಧ ದೂರು ದಾಖಲಿಸಿದ್ದ. ವರ್ಷಕ್ಕೆ $90,000 ಅಂದರೆ 66,53,063 ರೂಪಾಯಿ ಸಂಬಳ ಸಿಗುತ್ತಿದ್ದ ಕೆಲಸದ ಮೇಲೆ ಡೆಸ್ನಾರ್ಡ್​ಗೆ ಬೇಸರವಿತ್ತು.

    ಕಂಪನಿ ವಿರುದ್ಧ ದೂರು ದಾಖಲಿಸಿದ ಡೆಸ್ನಾರ್ಡ್ $4,00,000 (2,95,66,000 ರೂಪಾಯಿ)​ ಕ್ಕೂ ಹೆಚ್ಚಿನ ಪರಿಹಾರ ಹಣ ಸಿಗಬೇಕೆಂದು ಒತ್ತಾಯಿಸಿದ್ದ. ಅಚ್ಚರಿಯೆಂದರೆ ನಾಲ್ಕು ವರ್ಷಗಳ ಕಾನೂನು ಹೋರಾಟದಲ್ಲಿ ಡೆಸ್ನಾರ್ಡ್​ ಕೊನೆಗೂ ತನ್ನ ಕೇಸನ್ನು ಗೆದ್ದಿದ್ದು, ಕಂಪನಿಯಿಂದ 33 ಲಕ್ಷ ರೂ. ಪರಿಹಾರವನ್ನು ಪಡೆದುಕೊಂಡಿದ್ದಾರೆ.

    ಕೆಲಸಕ್ಕೆ ಸರಿಯಾದ ಸಮಯಕ್ಕೆ ಹಾಜರಾದರು ಕೂಡ ಯಾರೊಬ್ಬರು ನನ್ನನ್ನು ಗಮನಿಸುತ್ತಿರಲಿಲ್ಲ. ತನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ಆದರೆ, ಕಡಿಮೆ ಸಂಬಳ ಪಡೆಯಲು ತುಂಬಾ ನಾಚಿಕೆಯಾಗುತ್ತಿತ್ತು ಮತ್ತು ಅದರಿಂದ ಖಿನ್ನತೆಗೆ ಒಳಗಾಗಿದ್ದೆ. ಮಾನಸಿಕ ಆರೋಗ್ಯ ತೀವ್ರ ಹದಗೆಟ್ಟಾಗ ವೈದ್ಯರನ್ನು ಸಂಪರ್ಕಿಸಿದೆ. ತೀವ್ರ ನೀರಸ ಕೆಲಸವೇ ಇದಕ್ಕೆ ಕಾರಣ ಎಂದು ಹೇಳಿದರು. ಬಳಿಕ ಆರೇ ತಿಂಗಳಿಗೆ ಕೆಲಸ ಬಿಡಬೇಕಾಯಿತು ಎಂದು ಡೆಸ್ನಾರ್ಡ್​ ಹೇಳಿಕೊಂಡಿದ್ದಾರೆ.

    ದಿ ಟೆಲಿಗ್ರಾಫ್‌ನ ವರದಿಯ ಪ್ರಕಾರ, ಡೆಸ್ನಾರ್ಡ್ ಅವರ ವಕೀಲರು ತಮ್ಮ ಕಕ್ಷಿದಾರರ ಆರೋಗ್ಯ ಹದಗೆಡುವಿಕೆ ಮತ್ತು ಅವರ ಕೆಲಸದ ನಡುವೆ ಸಂಬಂಧವಿದೆ ಎಂದು ನ್ಯಾಯಮಂಡಳಿ ಮುಂದೆ ಪ್ರಸ್ತಾಪಿಸಿದರು. ಅಲ್ಲದೆ, ತನ್ನ ಕಕ್ಷಿದಾರ ‘ಬೋರ್-ಔಟ್’ ಎಂಬ ಸ್ಥಿತಿಯನ್ನು ತಲುಪಿದ್ದಾರೆ. ಇದು ತೀವ್ರವಾದ ಬೇಸರದ ಸ್ಥಿತಿಯಾಗಿದ್ದು ಅದು ಖಿನ್ನತೆ ಮತ್ತು ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ವಕೀಲರು ವಾದ ಮಂಡಿಸಿದ್ದರು.

    ಡೆಸ್ನಾರ್ಡ್ ಕಾರ್ಮಿಕ ಸಂಬಂಧಗಳ ನ್ಯಾಯಮಂಡಳಿಯಲ್ಲಿ ದೂರು ಸಲ್ಲಿಸಿದ ನಂತರ, ನ್ಯಾಯಾಲಯವು ‘ಬೋರ್ ಔಟ್’ ಎನ್ನುವುದು ‘ಕಿರುಕುಳದ ರೂಪ’ ಎಂದು ಒಪ್ಪಿಕೊಂಡಿತು ಮತ್ತು ಅವರಿಗೆ ಪರಿಹಾರವನ್ನು ನೀಡಲು ನಿರ್ಧರಿಸಿತು. (ಏಜೆನ್ಸೀಸ್​)

    ಖ್ಯಾತ ನಟಿ ಮೇಲೆ ದೌರ್ಜನ್ಯ​: ನಟ ದಿಲೀಪ್ ಮನೆಯಲ್ಲಿ ಸಿಕ್ಕಿದ್ದೇನು? ಕೇಸ್​ಗೆ ಟ್ವಿಸ್ಟ್​ ಕೊಟ್ಟ ನಿರ್ದೇಶಕನ ಹೇಳಿಕೆ

    ದಾವಣಗೆರೆಯಲ್ಲಿ ಭೀಕರ ರಸ್ತೆ ಅಪಘಾತ: ರಸ್ತೆ ತಡೆಗೋಡೆಗೆ ಕಾರು ಡಿಕ್ಕಿಯಾಗಿ 7 ಯುವಕರ ದುರ್ಮರಣ

    ತಿರುಪತಿ ಏರ್​ಪೋರ್ಟ್​ಗೆ ನೀರು ನಿಲ್ಲಿಸಿದ ಶಾಸಕನ ಪುತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts