More

    ಆನ್​ಲೈನ್​ ಕ್ಲಾಸ್​ನಲ್ಲಿ ಅರೆಬೆತ್ತಲೆಯಾದ ಶಿಕ್ಷಕನ ಕರಾಳ ಮುಖ ಬಯಲು ಮಾಡಿದ ವಿದ್ಯಾರ್ಥಿನಿಯರು..!

    ಚೆನ್ನೈ: ಶಿಕ್ಷಕನೊಬ್ಬ ಟವೆಲ್​ ಧರಿಸಿ ಅರೆಬೆತ್ತಲೆಯಾಗಿ ಆನ್​ಲೈನ್​ ಕ್ಲಾಸ್​ಗೆ ಹಾಜರಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಶಿಕ್ಷಕನ ವಿರುದ್ಧ ಕೇಳಿಬಂದಿದೆ. ದೂರು ಸಹ ದಾಖಲಾಗಿದೆ.

    ಖಾಸಗಿ ಶಾಲೆಯಾಗಿದ್ದು, ಅದರ ಮಾಲೀಕರ ವಿರುದ್ಧವೂ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳನ್ನು ವ್ಯಕ್ತಪಡಿಸಿದ್ದಾರೆ.

    ರಾಜಗೋಪಾಲನ್​ ಆರೋಪಿ ಶಿಕ್ಷಕ. ಅಕೌಂಟೆನ್ಸಿ ಮತ್ತು ಬಿಸಿನೆಸ್​ ಸ್ಟಡಿ ಕ್ಲಾಸ್​ ತೆಗೆದುಕೊಳ್ಳುವ ಈತ ವಿದ್ಯಾರ್ಥಿಗಳ ಮುಂದೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದೆ. ಅಲ್ಲದೆ, ಶಾಲಾ ಸಿಬ್ಬಂದಿ ಜಾತಿ ಪಕ್ಷಪಾತ ಧೋರಣೆ ಹೊಂದಿದ್ದಾರೆಂಬ ಗಂಭೀರ ಆರೋಪ ಸಹ ಮಾಡಿದ್ದಾರೆ.

    ಶಾಲೆಯ ಡೀನ್​ ಆರೋಪಿ ಶಿಕ್ಷಕನನ್ನು ತಕ್ಷಣ ಅಮಾನತುಗೊಳಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ಆರೋಪಿ ರಾಜಗೋಪಾಲನ್​, ಭೌತಿಕ ತರಗತಿಯಲ್ಲೂ ವಿದ್ಯಾರ್ಥಿನಿಯರ ಬಗ್ಗೆ ಕೆಟ್ಟದಾಗಿ ಕಾಮೆಂಟ್​ ಮಾಡುತ್ತಿದ್ದರು ಮತ್ತು ಅನುಚಿತವಾಗಿಯು ಸ್ಪರ್ಶಿಸುತ್ತಿದ್ದರು. ಇಷ್ಟೇ ಅಲ್ಲದೆ, ಚಿತ್ರವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ವಿದ್ಯಾರ್ಥಿನಿಯರ ದೇಹದ ಆಕಾರದ ಬಗ್ಗೆ ಮಾತನಾಡುತ್ತಿದ್ದ ರಾಜ್​ಗೋಪಾಲನ್​, ಮಹಿಳೆಯರ ಸ್ಲೀವ್​ಲೆಸ್​ ಉಡುಗೆ ಅಥವಾ ಅಸಾಂಪ್ರದಾಯಿಕ ಬಟ್ಟೆಗಳ ಬಗ್ಗೆ ಅಣುಕಿಸುತ್ತಿದ್ದರೆಂದು ದೂರಿದ್ದಾರೆ.

    ಲಾಕ್​ಡೌನ್​ ಸಮಯದಲ್ಲಿ ಬರೀ ಟವಲ್​ನಲ್ಲಿ ಮಾತ್ರ ಆನ್​ಲೈನ್​ ಕ್ಲಾಸ್​ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯರ ವಾಟ್ಸ್​ಆ್ಯಪ್​ ಪ್ರೊಫೈಲ್​ ಫೋಟೋ ಬಗ್ಗೆ ಕಾಮೆಂಟ್​ ಮಾಡುತ್ತಿದ್ದರಂತೆ. ಕೆಲವರಿಗೆ ತುಂಬಾ ಚೆನ್ನಾಗಿದ್ದೀಯಾ ಎಂದು ಕಾಮೆಂಟ್​ ಮಾಡಿದರೆ, ಇನ್ನು ಕೆಲವರಿಗೆ ತಲೆಕೆಟ್ಟ ರೀತಿಯಲ್ಲಿ ಕಾಮೆಂಟ್​ ಮಾಡುತ್ತಿದ್ದರಂತೆ. ಇಷ್ಟೇ ಅಲ್ಲದೆ, ನನ್ನೊಂದಿಗೆ ಸಿನಿಮಾ ಬನ್ನಿ ಅಂತಲೂ ವಿದ್ಯಾರ್ಥಿನಿಯರನ್ನು ಆರೋಪಿ ಶಿಕ್ಷಕ ಕರೆಯುತ್ತಿದ್ದನಂತೆ.

    ಈ ಬಗ್ಗೆ ಶಾಲೆಯ ಮ್ಯಾನೇಜ್​ಮೆಂಟ್​ ಅನೇಕ ಬಾರಿ ದೂರು ಸಹ ನೀಡಲಾಗಿದೆ. ಆದರೆ, ಈವರೆಗೂ ಒಮ್ಮೆಯು ಕ್ರಮ ತೆಗೆದುಕೊಂಡಿರಲಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. (ಏಜೆನ್ಸೀಸ್​)

    ಕರಾವಳಿಯಲ್ಲಿ ಗೋಚರಿಸಿದ ಮತ್ಸ್ಯಕನ್ಯೆ!

    ಬಾಲಿವುಡ್ ಅಂದ್ರೆ ಸಮಂತಾಗೆ ಭಯವಂತೆ!

    VIDEO| ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಭಾಷಾಭಿಮಾನ ಮೆರೆದ ಕೇರಳ ಶಾಸಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts