More

    ಒಂದೇ ದಿನದಲ್ಲಿ ಪೆಟ್ರೋಲ್​ 77, ಡೀಸೆಲ್​ 55 ರೂ. ಹೆಚ್ಚಳ; ಭಾರತೀಯರಿಗೂ ಕಾದಿದೆ ತೈಲಾಘಾತ!

    ಕೊಲಂಬೋ: ರಾವಣ ರಾಜ್ಯ ಶ್ರೀಲಂಕಾದಲ್ಲಿ ಒಂದೇ ದಿನದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ದಾಖಲೆ ಏರಿಕೆ ಕಂಡಿದೆ. ಪೆಟ್ರೋಲ್​ 77 ರೂಪಾಯಿ ಏರಿಯಾದರೆ, ಡೀಸೆಲ್​ 55 ರೂಪಾಯಿ ಹೆಚ್ಚಾಗಿದೆ.

    ಲಂಕಾ ಸರ್ಕಾರಿ ಒಡೆತನದ ಇಂಧನ ಮತ್ತು ಗ್ಯಾಸ್​ ಘಟಕ ಸಿಲೋನ್ ಪೆಟ್ರೋಲಿಯಂ ಬೆಲೆಯನ್ನು ಏರಿಸಿದೆ. ಪ್ರಮುಖ ಭಾರತೀಯ ತೈಲ ನಿಗಮದ ಸ್ಥಳೀಯ ಅಂಗಸಂಸ್ಥೆಯಾದ ಶ್ರೀಲಂಕಾ ಐಒಸಿ, ಲಂಕಾದಲ್ಲಿ ಪ್ರಮುಖ ತೈಲ ವಿತರಣಾ ಕಂಪನಿಯಾಗಿದೆ.

    ಐಒಸಿ ಬೆಲೆ ಏರಿಕೆ ಮಾಡಿದ ನಂತರ ಶ್ರೀಲಂಕಾದಲ್ಲಿ ತೈಲ ಬೆಲೆ ಹೆಚ್ಚುತ್ತಿದೆ. ಶ್ರೀಲಂಕಾದ ದರಗಳ ಪ್ರಕಾರ, ಐಒಸಿ ಪೆಟ್ರೋಲ್ ಬೆಲೆಯಲ್ಲಿ 75 ಮತ್ತು ಡೀಸೆಲ್ ಬೆಲೆಯಲ್ಲಿ 50 ರೂಪಾಯಿಯಷ್ಟು ಹೆಚ್ಚಿಸಿದೆ. ಇದರ ಬೆನ್ನಲ್ಲೇ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ಕೂಡ ಪೆಟ್ರೋಲ್ ಬೆಲೆಯಲ್ಲಿ 43.5 ಮತ್ತು ಡೀಸೆಲ್ ಬೆಲೆಯಲ್ಲಿ ಶೇಕಡಾ 45.5 ರಷ್ಟು ಹೆಚ್ಚಿಸಿದೆ.

    ಲಂಕಾ ರೂಪಾಯಿ ಪ್ರಕಾರ ಭಾನುವಾರ ಒಂದು ಲೀಟರ್​ ಪೆಟ್ರೋಲ್​ಗೆ 254 ಮತ್ತು ಡೀಸೆಲ್​ಗೆ 176 ರೂಪಾಯಿ ವೆಚ್ಚವಾಗುತ್ತಿದೆ. ಇನ್ನು ಇದೇ ಸಂದರ್ಭದಲ್ಲಿ ಭಾರತದಲ್ಲೂ ಪೆಟ್ರೋಲ್​ ಬೆಲೆಯಲ್ಲಿ 25 ರೂ.ವರೆಗೆ ಏರಿಕೆಯಾಗಬಹುದು ಎಂದು ಹೇಳಲಾಗಿದೆ. ರಷ್ಯಾದ ತೈಲ ಸರಬರಾಜಿನ ಮೇಲೆ ಯುರೋಪಿಯನ್ ರಾಷ್ಟ್ರಗಳು ನಿರ್ಬಂಧಗಳನ್ನು ಹೇರಲಿವೆ ಎಂಬ ವರದಿಗಳ ನಂತರ ಕಚ್ಚಾ ತೈಲ ಬೆಲೆಗಳು ಗಗನಕ್ಕೇರಿವೆ. ದೇಶದಲ್ಲಿ 100 ದಿನಗಳಿಗೂ ಹೆಚ್ಚು ಕಾಲ ಯಥಾಸ್ಥಿತಿಯಲ್ಲಿದ್ದ ಪೆಟ್ರೋಲ್, ಡೀಸೆಲ್ ಬೆಲೆಯೂ ಇದೀಗ ಏರಿಕೆಯಾಗಲಿದೆ ಎಂದು ವರದಿಯಾಗಿದೆ.

    ನವೆಂಬರ್ 4, 2021 ರಂದು ದೇಶದಲ್ಲಿ ಕೊನೆಯದಾಗಿ ಇಂಧನ ಬೆಲೆ ಏರಿಕೆ ವರದಿಯಾಗಿದೆ. (ಏಜೆನ್ಸೀಸ್​)

    ಹಾಟ್​​​ ಡ್ರೆಸ್​ ನೋಡಿ ತಮ್ಮ ಮೇಲೆ ಮುಗಿಬಿದ್ದ ವಿರೋಧಿಗಳಿಗೆ ಸಮಂತಾ ಕೊಟ್ಟ ಮಾತಿನ ಪಂಚ್​ ಹೀಗಿದೆ…

    ಸೊಸೆ ಮೇಲಿನ ಕೋಪಕ್ಕೆ 1 ತಿಂಗಳಿಂದ ಅತ್ತೆ ಮುಚ್ಚಿಟ್ಟಿದ್ದ ರಹಸ್ಯ ಮೊಮ್ಮಗಳನ್ನೇ ಬಲಿ ಪಡೆಯಿತು

    ಕುಟುಂಬ ಸಮೇತ ಹಂಪಿಗೆ ಭೇಟಿ ನೀಡಿದ ಹಿಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts