More

    ಎಂಥಾ ಅದ್ಭುತ ಕ್ಯಾಚ್! ಫೈನಲ್​ ಪಂದ್ಯದ ದಿಕ್ಕನ್ನೇ ಬದಲಿಸಿದ ಕ್ಯಾಚ್ ಇದು… ವಿಡಿಯೋ ವೈರಲ್​

    ಸಿಡ್ನಿ: ಇಲ್ಲಿನ ನಡೆಯುತ್ತಿರುವ ಮಾರ್ಷ್​ ಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ನ್ಯೂ ಸೌಥ್​ ವೇಲ್ಸ್​ (ಎನ್​ಎಸ್​ಡಬ್ಲ್ಯು) ತಂಡವನ್ನು ಮಣಿಸಿದ ವೆಸ್ಟರ್ನ್​ ಆಸ್ಟ್ರೇಲಿಯಾ 18 ರನ್​ಗಳ ಅಂತರದಿಂದ ಅಮೋಘ ಜಯ ದಾಖಲಿಸಿದೆ.

    ಮೆಲ್ಬೋರ್ನ್​ನ ಓವಲ್​​ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಆ್ಯಂಡ್ರಿವ್​ ಟೈ ಮತ್ತು ಜೆ ರಿಚರ್ಡ್​ಸನ್​ ಉತ್ತಮ ಆಟವಾಡುವ ಮೂಲಕ ವೆಸ್ಟರ್ನ್​ ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ, ಇಡೀ ಆಟಕ್ಕೆ ಉತ್ತಮ ತಿರುವು ನೀಡಿದ್ದು ಮಾತ್ರ ಒಂದು ಅದ್ಧುತ ಕ್ಯಾಚ್​. ನ್ಯೂ ಸೌಥ್​ ವೇಲ್ಸ್​ ತಂಡ ಗುರಿಯನ್ನು ಬೆನ್ನತ್ತಿದ್ದಾಗ 44ನೇ ಓವರ್​ನಲ್ಲಿ ವೆಸ್ಟರ್ನ್​ ಆಸ್ಟ್ರೇಲಿಯಾದ ಹಿಲ್ಟನ್​ ಕಾರ್ಟ್​ರೈಟ್​ ಹಿಡಿದ ಕ್ಯಾಚ್​ ಪಂದ್ಯದ ದಿಕ್ಕನ್ನೇ ಬದಲಿಸಿತು.

    226 ರನ್​ ಗುರಿ ಬೆನ್ನತ್ತಿದ ಎನ್​ಎಸ್​ಡಬ್ಲ್ಯು ತಂಡ ಉತ್ತಮ ಲಯದಲ್ಲೇ ಇತ್ತು. ಮೋಸೆಸ್ ಹೆನ್ರಿಕ್ಸ್ ಅವರು ರಕ್ಷಣಾತ್ಮಕ ಆಟವನ್ನು ಆಡುತ್ತಿದ್ದರು. ಇನ್ನೊಂದೆಡೆ ಬೆನ್ ದ್ವಾರ್ಶುಯಿಸ್ ಕೂಡ ಉತ್ತಮವಾಗಿ ಆಡುತ್ತಿದ್ದರು. ತಂಡದ ಗೆಲುವಿಗೆ 36 ಬಾಲ್​ಗಳಲ್ಲಿ 22 ರನ್​ ಬೇಕಿತ್ತು. ಇನ್ನು ಮೂರು ವಿಕೆಟ್​ ಎನ್​ಎಸ್​ಡಬ್ಲ್ಯ ಕೈಯಲ್ಲಿತ್ತು.

    44ನೇ ಓವರ್​ನ ಮೊದಲ ಎಸೆತದಲ್ಲಿ ಹೆನ್ರಿಕ್ಸ್​ ಮುಂದೆ ಬಂದು ಬಾರಿಸಿದಾಗ ಚೆಂಡು ಬೌಂಡರಿ ಬಳಿಯತ್ತ ಹಾರಿತು. ಈ ವೇಳೆ ಬೌಂಡರಿಯಲ್ಲಿದ್ದ ಹಿಲ್ಟನ್​ ಅವರು ಓಡಿಬಂದು ಮಾರು ಉದ್ದಕ್ಕೆ ಜಿಗಿದು ಅದ್ಭುತವಾಗಿ ಕ್ಯಾಚ್​ ಹಿಡಿದರು. ಪಂದ್ಯದ ವೀಕ್ಷಕ ವಿವರಣೆಗಾರರು ಕೂಡ ಹಿಲ್ಟನ್​ ಕ್ಯಾಚ್​ ಹಿಡಿದ ರೀತಿಯನ್ನು ಒಂದು ಕ್ಷಣ ನಂಬಲೇ ಇಲ್ಲ. ಅಷ್ಟು ಅದ್ಭುತವಾಗಿತ್ತು ಅವರ ಕ್ಯಾಚ್​.

    ಹೆನ್ರಿಕ್ಸ್​ ಓರ್ವ ಅದ್ಭುತ ಆಟಗಾರ. ಔಟ್​ ಆಗಿರದಿದ್ದರೆ ಪಂದ್ಯವು ಸುಲಭವಾಗಿ ಎನ್​ಎಸ್​ಡಬ್ಲ್ಯು ಪಾಲಾಗುತ್ತಿತ್ತು. ಆದರೆ, ಕ್ಯಾಚ್​ ಹಿಡಿದಿದ್ದೆ ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಅಂತಿಮವಾಗಿ ಎನ್​ಎಸ್​ಡಬ್ಲ್ಯು ತಂಡ 46.3 ಓವರ್​ಗಳಲ್ಲಿ 207 ರನ್​ ಗಳಿಸಲಷ್ಟೇ ಶಕ್ತವಾಯಿತು. ವೆಸ್ಟರ್ನ್​ ಆಸ್ಟ್ರೇಲಿಯಾ 18 ರನ್​ಗಳ ಅಂತರದಿಂದ ಗೆಲುವಿನ ನಗೆ ಬೀರಿತು. ಹಿಲ್ಟನ್​ ಕ್ಯಾಚ್​ ಹಿಡಿದ ವಿಡಿಯೋ ವೈರಲ್​ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

    ಪ್ರೀತಿಸಿ ಮದ್ವೆಯಾದ ಯುವತಿಗೆ ಇದೆಂಥಾ ಅನ್ಯಾಯ? ಗಂಡನ ಜತೆ ಬಾಡಿಗೆ ಮನೆಗೆ ಹೋದ ಬೆನ್ನಲ್ಲೇ ಬಿಗ್​ ಶಾಕ್​!

    ಶಾಲಾ ಸಮವಸ್ತ್ರದಲ್ಲಿ ಬಂದ ಹುಡುಗಿಯಿಂದ ನೀಚ ಕೃತ್ಯ: ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ!

    ಹೃದಯದಲ್ಲಿ ತೊಂದರೆ, ಜ್ವರ: ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್​ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts