ಧೆಂಕನಲ್: ಮಹಿಳೆಯ ಜತೆ ಸರ್ಕಾರಿ ಕಚೇರಿಯಲ್ಲಿಯೇ ಸರಸ ಸಲ್ಲಾಪದಲ್ಲಿ ತೊಡಗಿದ್ದ ಒಡಿಶಾದ ಗಾಡಸಿಲಾ ಪಟ್ಟಣದ ಉಸ್ತುವಾರಿ, ಧೆಂಕನಲ್ ಜಿಲ್ಲೆಯ ರೆವಿನ್ಯೂ ಇನ್ಸ್ಪೆಕ್ಟರ್ನನ್ನು ಬಂಧಿಸಲಾಗಿದೆ.
ತಮ್ಮ ಕಚೇರಿಯಲ್ಲಿ ಮಹಿಳೆಯೊಬ್ಬರ ಜತೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಅವರನ್ನು ಅಮಾನತಿನಲ್ಲಿ ಇಡಲಾಗಿದೆ.
ಬಂಧಿತ ಅಧಿಕಾರಿಯನ್ನು ರಂಜನ್ ಪಾಣಿಗ್ರಹಿ ಎಂದು ಗುರುತಿಸಲಾಗಿದೆ. ಸಲ್ಲಾಪದಲ್ಲಿ ತೊಡಗಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಏಪ್ರಿಲ್ 11ರಂದು ಧೆಂಕನಕಲ್ ಜಿಲ್ಲಾಧಿಕಾರಿ ಭೂಮೇಶ್ ಚಂದ್ರ ಬೆಹೆರಾ ಅವರು ಆರೋಪಿ ಪಾಣಿಗ್ರಹಿಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶ ನೀಡಿದ್ದರು.
ಇದನ್ನೂ ಓದಿರಿ: ನೀನು ಸತ್ತ ಮೇಲೆ ಮಗ ನನ್ನ ಜತೆ ಇರಬೇಕು ಅಂತಿದ್ದಾರೆ ವಿಚ್ಛೇದಿತ ಪತಿ- ಹೀಗೆ ಕಂಡೀಷನ್ ಹಾಕ್ಬೋದಾ?
ಅಲ್ಲದೆ, ವಿಡಿಯೋ ವೈರಲ್ ಆದ ಎರಡು ದಿನಗಳ ಬಳಿಕ ವಿಡಿಯೋದಲ್ಲಿದ್ದ ಮಹಿಳೆಯು ಸಹ ಪಾಣಿಗ್ರಹಿ ವಿರುದ್ಧ ದೂರು ದಾಖಲಿಸಿದ್ದಾಳು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.
ಹೆಚ್ಚುವರಿ ರೆವಿನ್ಯೂ ಇನ್ಸ್ಪೆಕ್ಟರ್ ಆಗಿದ್ದ ಪಾಣಿಗ್ರಹಿ ಅವರನ್ನು ಕೆಲವು ತಿಂಗಳ ಹಿಂದೆ ಗಾಡಸಿಲಾ ಸರ್ಕಲ್ ಕಚೇರಿಯ ಉಸ್ತುವರಿಯಾಗಿ ನೇಮಕ ಮಾಡಲಾಗಿತ್ತು. ವೈರಲ್ ಆಗಿರುವ ಅವರ ವಿಡಿಯೋದಲ್ಲಿ, ಪಾಣಿಗ್ರಹಿ ಅವರ ಕಚೇರಿಯಲ್ಲಿ ಖಾಲಿ ಮದ್ಯದ ಬಾಟೆಲ್ಗಳಿದ್ದು, ಹೊರಗಿನವರು ಸಹ ಕಚೇರಿಯಲ್ಲಿ ಮಲಗಿರುವ ದೃಶ್ಯವಿದೆ. ಅದರಲ್ಲೂ ಪಾಣಿಗ್ರಹಿ, ಮಹಿಳೆಯೊಬ್ಬಳ ಜತೆ ಕಚೇರಿಯಲ್ಲಿಯೇ ಸಂಧಾನ ಸ್ಥಿತಿಯಲ್ಲಿರುವ ದೃಶ್ಯವು ಸೆರೆಯಾಗಿದೆ.
ವೈರಲ್ ವಿಡಿಯೋ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಪಾಣಿಗ್ರಹಿ ಅವರನ್ನು 6 ತಿಂಗಳ ಕಾಲ ಅಮಾನತು ಮಾಡಲಾಗಿದೆ. ಅಲ್ಲದೆ, ಘಟನೆ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಒಡಪಾದ ತಹಸೀಲ್ದಾರ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು. ತನಿಖಾ ವರದಿ ಬಂದ ಬಳಿಕ ವರದಿ ಆಧರಿಸಿ ಮತ್ತೊಮ್ಮೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದರು. ಅದರಂತಯೇ ಆರೋಪಿಯನ್ನು ಇದೀಗ ಬಂಧಿಸಲಾಗಿದೆ. (ಏಜೆನ್ಸೀಸ್)
ಈ 3 ಕ್ರಮ ಅನುಸರಿಸಿದ್ರೆ ಕರೊನಾ ವಿರುದ್ಧ ಪರಿಣಾಮಕಾರಿ ಹೋರಾಟ ಸಾಧ್ಯ: ಏಮ್ಸ್ ಮುಖ್ಯಸ್ಥರ ಸಲಹೆ
VIDEO| ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಡೈನೋಸಾರ್ ರೀತಿಯ ಜೀವಿ: ಬೆಚ್ಚಿಬೀಳಿಸೋ ವಿಡಿಯೋ ಇದು!