ಈ 3 ಕ್ರಮ ಅನುಸರಿಸಿದ್ರೆ ಕರೊನಾ ವಿರುದ್ಧ ಪರಿಣಾಮಕಾರಿ ಹೋರಾಟ ಸಾಧ್ಯ: ಏಮ್ಸ್​ ಮುಖ್ಯಸ್ಥರ ಸಲಹೆ

ನವದೆಹಲಿ: ಹೆಚ್ಚುತ್ತಿರುವ ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಭಾರತದ ಪ್ರಧಾನ ವೈದ್ಯಕೀಯ ವಿಜ್ಞಾನ ಸಂಸ್ಥೆ ಏಮ್ಸ್​ನ ಮುಖ್ಯಸ್ಥರು ಮೂರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಕಂಟೈನ್​ಮೆಂಟ್​ ಜೋನ್​ಗಳನ್ನು ಸೃಷ್ಟಿಸುವುದು, ಜನಜಂಗುಳಿಯನ್ನು ನಿಯಂತ್ರಿಸುವುದು ಮತ್ತು ಲಸಿಕೆಯನ್ನು ಉತ್ತೇಜಿಸುವ ಕ್ರಮಗಳನ್ನು ಅನುಸರಿಸಿದರೆ ಕರೊನಾ ಎರಡನೇ ಅಲೆಯನ್ನು ತಗ್ಗಿಸಬಹುದೆಂದು ಏಮ್ಸ್​ ನಿರ್ದೇಶಕ ಡಾ. ರಣದೀಪ್​ ಗುಲೆರಿಯಾ ತಿಳಿಸಿದರು. ಎರಡನೇ ಅಲೆ ಯಾವಾಗಲೂ ಹೆಚ್ಚು ಅಪಾಯಕಾರಿ ಆಗಿರುತ್ತದೆ. ನಾವು ಹೆಚ್ಚು ಜಾಗೃತರಾಗಿರಬೇಕು. ಜಗತ್ತಿನಲ್ಲಿ ಪ್ರಸಾರವಾಗುವ ವೈರಸ್​ ರೂಪಾಂತರಗಳಿವೆ ಎಂದು … Continue reading ಈ 3 ಕ್ರಮ ಅನುಸರಿಸಿದ್ರೆ ಕರೊನಾ ವಿರುದ್ಧ ಪರಿಣಾಮಕಾರಿ ಹೋರಾಟ ಸಾಧ್ಯ: ಏಮ್ಸ್​ ಮುಖ್ಯಸ್ಥರ ಸಲಹೆ