More

    ಸರ್ಕಾರಿ ಕಚೇರಿಯಲ್ಲೇ ಮಹಿಳೆ ಜತೆ ಸರಸ ಸಲ್ಲಾಪ: ವೈರಲ್​ ಆಯ್ತು ರೆವಿನ್ಯೂ ಇನ್ಸ್​ಪೆಕ್ಟರ್ ವಿಡಿಯೋ!​

    ಧೆಂಕನಲ್​: ಒಡಿಶಾದ ಗಾಡಸಿಲಾ ಪಟ್ಟಣದ ಉಸ್ತುವಾರಿ, ಧೆಂಕನಲ್​ ಜಿಲ್ಲೆಯ ರೆವಿನ್ಯೂ ಇನ್ಸ್​ಪೆಕ್ಟರ್​ ಒಬ್ಬರು ತಮ್ಮ ಕಚೇರಿಯಲ್ಲಿ ಮಹಿಳೆಯೊಬ್ಬರ ಜತೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಅವರನ್ನು ಅಮಾನತಿನಲ್ಲಿ ಇಡಲಾಗಿದೆ.

    ಅಮಾನತಾದ ಅಧಿಕಾರಿಯನ್ನು ರಂಜನ್​ ಪಾಣಿಗ್ರಹಿ ಎಂದು ಗುರುತಿಸಲಾಗಿದೆ. ಧೆಂಕನಕಲ್​ ಜಿಲ್ಲಾಧಿಕಾರಿ ಭೂಮೇಶ್​ ಚಂದ್ರ ಬೆಹೆರಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಹೆಚ್ಚುವರಿ ರೆವಿನ್ಯೂ ಇನ್ಸ್​ಪೆಕ್ಟರ್​ ಆಗಿದ್ದ ಪಾಣಿಗ್ರಹಿ ಅವರನ್ನು ಕೆಲವು ತಿಂಗಳ ಹಿಂದೆ ಗಾಡಸಿಲಾ ಸರ್ಕಲ್​ ಕಚೇರಿಯ ಉಸ್ತುವರಿಯಾಗಿ ನೇಮಕ ಮಾಡಲಾಗಿತ್ತು. ಇದೀಗ ವೈರಲ್​ ಆಗಿರುವ ಅವರ ವಿಡಿಯೋದಲ್ಲಿ, ಪಾಣಿಗ್ರಹಿ ಅವರ ಕಚೇರಿಯಲ್ಲಿ ಖಾಲಿ ಮದ್ಯದ ಬಾಟೆಲ್​ಗಳಿದ್ದು, ಹೊರಗಿನವರು ಸಹ ಕಚೇರಿಯಲ್ಲಿ ಮಲಗಿರುವ ದೃಶ್ಯವಿದೆ. ಅದರಲ್ಲೂ ಪಾಣಿಗ್ರಹಿ, ಮಹಿಳೆಯೊಬ್ಬಳ ಜತೆ ಕಚೇರಿಯಲ್ಲಿಯೇ ಸಂಧಾನ ಸ್ಥಿತಿಯಲ್ಲಿರುವ ದೃಶ್ಯವು ಸೆರೆಯಾಗಿದೆ.

    ಇದನ್ನೂ ಓದಿರಿ: ರಾಹುಲ್​ ಡ್ರಾವಿಡ್​ ಕೋಪಕ್ಕೆ ಧೋನಿ ಹೆದರಿದ್ದರು! ಹಳೆಯ ಘಟನೆ ಮೆಲುಕು ಹಾಕಿದ ಸೆಹ್ವಾಗ್​

    ವೈರಲ್​ ವಿಡಿಯೋ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಪಾಣಿಗ್ರಹಿ ಅವರನ್ನು 6 ತಿಂಗಳ ಕಾಲ ಅಮಾನತು ಮಾಡಲಾಗಿದೆ. ಅಲ್ಲದೆ, ಘಟನೆ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಒಡಪಾದ ತಹಸೀಲ್ದಾರ್​ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ತನಿಖಾ ವರದಿ ಬಂದ ಬಳಿಕ ವರದಿ ಆಧರಿಸಿ ಮತ್ತೊಮ್ಮೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಕರ್ನಾಟಕದ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ ಕಣ್ಣೇ ಅದಿರಿಂದಿ ಖ್ಯಾತಿಯ ಮಂಗ್ಲಿ..!

    ಎರಡು ತಲೆ, ಮೂರು ಕೈಯುಳ್ಳ ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ..!

    ಶೀಘ್ರದಲ್ಲೇ ತೆರೆಗೆ ಬರಲಿದೆ ಮತ್ತೊಂದು ಶುಭಮಂಗಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts