More

    ಇಡೀ ವಿಶ್ವವೇ ಇನ್ನೂ ಕಂಡುಹಿಡಿಯಲಾಗದ ಕೋವಿಡ್​ ಸೋಂಕಿನ ಕಾರಣವನ್ನು ಪತ್ತೆಹಚ್ಚಿದ ಉತ್ತರ ಕೊರಿಯಾ!

    ಸಿಯಾಲ್: ಇಡೀ ಜಗತ್ತನ್ನು ಕಾಡಿದ ಮಹಾಮಾರಿ ಕೋವಿಡ್​ಗೆ ಇನ್ನು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಕಳೆದ ಎರಡು ವರ್ಷದಿಂದ ಬಿಟ್ಟು ಬಿಡದೇ ಹೆಮ್ಮಾರಿ ಜಗತ್ತನ್ನು ಕಾಡುತ್ತಿದೆ. ಕರೊನಾ ಹೇಗೆ ಹುಟ್ಟುಕೊಂಡಿತು ಎಂಬ ಪ್ರಶ್ನೆಗೆ ವೈಜ್ಞಾನಿಕ ಸಮುದಾಯ ಇನ್ನೂ ಉತ್ತರ ಕಂಡುಕೊಂಡಿಲ್ಲ. ಆದರೆ, ಬಹುತೇಕರಿಗೆ ಚೀನಾ ಮೇಲೆ ಅನುಮಾನ ಇದೆ. ಏಕೆಂದರೆ, ಕೋವಿಡ್​ ಮೊದಲು ಸ್ಫೋಟಗೊಂಡಿದ್ದೇ ಚೀನಾದ ವುಹಾನ್​ ನಗರದ ಜೀವಂತ ಪ್ರಾಣಿ ಮಾರುಕಟ್ಟೆಯಲ್ಲಿ. ಇದೀಗ ಉತ್ತರ ಕೊರಿಯಾವು ಕೋವಿಡ್​ ಸ್ಫೋಟಕ್ಕೆ ಕಾರಣ ಏನೆಂಬುದನ್ನು ಕಂಡುಕೊಂಡಿದೆ.

    ಇತ್ತೀಚಗೆ ಉತ್ತರ ಕೊರಿಯಾದಲ್ಲಿ ಕೋವಿಡ್​ ಸ್ಫೋಟಗೊಂಡಿದೆ. ಅಸಾಮಾನ್ಯ ವಸ್ತುಗಳಿಂದ ಕೋವಿಡ್​ ಹರಡಿರುವುದನ್ನು ಉತ್ತರ ಕೊರಿಯಾ ಕಂಡುಕೊಂಡಿದೆಯಂತೆ. ದಕ್ಷಿಣ ಕೊರಿಯಾದ ಗಡಿಯ ಬಳಿ ಜನರು ಅಸಾಮಾನ್ಯ ವಸ್ತುಗಳನ್ನು ಮುಟ್ಟಿದ್ದರಿಂದ ದೇಶದ ಮೊದಲ ಕೋವಿಡ್ ಸ್ಫೋಟ ಏಕಾಏಕಿ ಸಂಭವಿಸಿದೆ ಎಂದು ಉತ್ತರ ಕೊರಿಯಾ ಶುಕ್ರವಾರ ಹೇಳಿಕೊಂಡಿದೆ. ತಮ್ಮ ದೇಶದ ಮೇಲೆ ಪರಿಣಾಮ ಬೀರುವ ಸೋಂಕಿನ ಅಲೆಗೆ ಅವರು ನೆರೆಯ ದೇಶವಾದ ದಕ್ಷಿಣ ಕೊರಿಯಾವನ್ನು ದೂಷಿಸಿದ್ದಾರೆ.

    ಅಸಾಮಾನ್ಯ ವಸ್ತುಗಳ ಬಗ್ಗೆ ಜಾಗರೂಕರಾಗಿರಲು ಉತ್ತರ ಕೊರಿಯಾವು ಜನರನ್ನು ಒತ್ತಾಯಿಸಿದೆ. 18 ವರ್ಷ ವಯಸ್ಸಿನ ಸೈನಿಕ ಮತ್ತು ಐದು ವರ್ಷದ ಹುಡುಗನನ್ನು ಮೊದಲ ಎರಡು ಕೋವಿಡ್​ ಪಾಸಿಟಿವ್​ ಪ್ರಕರಣಗಳೆಂದು ಗುರುತಿಸಲಾಗಿದೆ. ಈ ಎರಡು ಪ್ರಕರಣಗಳು ಬಳಕೆಯಾಗದ ವಸ್ತುಗಳು ಅಥವಾ ಅಸಾಮಾನ್ಯ ವಸ್ತುಗಳ ಸಂಪರ್ಕಕ್ಕೆ ಬಂದ ಕೋವಿಡ್​ ತಗುಲಿದೆ ಎಂದು ಉತ್ತರ ಕೊರಿಯಾ ಸರ್ಕಾರಿ ಸ್ವಾಮ್ಯದ ಕೆಸಿಎನ್​ಎ ವರದಿ ಮಾಡಿದೆ.

    ಕುಮ್‌ಗಾಂಗ್ ಕೌಂಟಿಯ ಇಫೊ-ರಿ ಪ್ರದೇಶದಿಂದ ರಾಜಧಾನಿಗೆ ಬರುವ ಜನರಲ್ಲಿ ಈ ರೋಗ ವರದಿಯಾಗಿದೆ. ಗಡಿ ದಾಟುವ ಬಲೂನ್‌ಗಳ ಮೂಲಕ ರೋಗವನ್ನು ರವಾನಿಸಲಾಗುತ್ತಿದೆ ಎಂದು ಕೊರಿಯಾ ಹೇಳಿದೆ. ದಕ್ಷಿಣ ಕೊರಿಯಾದ ಕಾರ್ಯಕರ್ತರು ದಶಕಗಳಿಂದ ಉತ್ತರ ಕೊರಿಯಾಕ್ಕೆ ಕರಪತ್ರಗಳು ಮತ್ತು ಮಾನವೀಯ ನೆರವು ತುಂಬಿದ ಬಲೂನ್‌ಗಳನ್ನು ಹಾರಿಸುತ್ತಿದ್ದಾರೆ. ಈ ಕಾರಣದಿಂದ ಉತ್ತರ ಕೊರಿಯಾ ಕೋವಿಡ್​ ಸ್ಫೋಟಕ್ಕೆ ಇದೇ ಕಾರಣ ಎಂದು ಸಮರ್ಥಿಸಿಕೊಂಡಿದೆ.

    ಉತ್ತರ ಕೊರಿಯಾದಲ್ಲಿ ಶುಕ್ರವಾರ 4,570 ಜನರಲ್ಲಿ ಕೋವಿಡ್ ರೋಗಲಕ್ಷಣಗಳು ಪತ್ತೆಯಾಗಿವೆ. ಏಪ್ರಿಲ್ ಅಂತ್ಯದಿಂದ ದೇಶದಲ್ಲಿ ಒಟ್ಟು ರೋಗಿಗಳ ಸಂಖ್ಯೆ 4. 74 ಮಿಲಿಯನ್ ಆಗಿದೆ. ಸದ್ಯ ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೋವಿಡ್ ಏಕಾಏಕಿ ಸ್ಫೋಟಗೊಂಡ ಬೆನ್ನಲ್ಲೇ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು ಮತ್ತು ಮೂರು ವಾರಗಳ ಲಾಕ್‌ಡೌನ್ ಅನ್ನು ವಿಧಿಸಿದರು. ಇದೀಗ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಹಂತ ಹಂತವಾಗಿ ನಿರ್ಬಂಧಗಳನ್ನು ಸಡಿಸಲಾಗುತ್ತಿದೆ. (ಏಜೆನ್ಸೀಸ್​)

    ಲಸಿಕೆ ಹಾಕಿದ್ರು ರೇಬೀಸ್​ನಿಂದ ಯುವತಿ ಗುಣವಾಗಲಿಲ್ಲ ಯಾಕೆ? ತನಿಖೆಯಲ್ಲಿ ಭಯಾನಕ ಸಂಗತಿ ಬಯಲು

    40 ರೂಪಾಯಿ ಕೊಟ್ಟು ಚಿಕಿತ್ಸೆ ಪಡೆದುಕೊಂಡ ಧೋನಿ! ಎಲ್ಲೂ ವಾಸಿಯಾಗದ ನೋವು ಹಳ್ಳಿ ವೈದ್ಯನಿಂದ ಮಾಯ

    ಈಜಿಪ್ಟ್, ಮಾಲ್ಡೀವ್ಸ್, ದುಬೈ ಸುತ್ತಾಡಿ ನೇಪಾಳದಲ್ಲಿ ಅಡಗಿದ್ದ ಮೋಸ್ಟ್​ ವಾಂಟೆಡ್ ವಂಚಕ ಮುಂಬೈನಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts