More

    ಯುದ್ಧ ಬೇಡ ಎಂದು ಸಾಮೂಹಿಕ ರಾಜೀನಾಮೆ ನೀಡಿದ ರಷ್ಯಾದ ಟಿವಿ ರೇನ್​ ಚಾನೆಲ್​ ಸಿಬ್ಬಂದಿ..!

    ಮಾಸ್ಕೋ: ಯೂಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧವನ್ನು ವಿರೋಧಿಸಿ ನಮಗೆ “ಯುದ್ಧ ಬೇಡ” ಎಂದು ರಷ್ಯಾದ ಟಿವಿ ಮಾಧ್ಯಮವೊಂದರ ಎಲ್ಲ ಸಿಬ್ಬಂದಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಿರುವ ದೃಶ್ಯ ನೇರಪ್ರಸಾರವಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಯೂಕ್ರೇನ್​ ಮೇಲಿನ ರಷ್ಯಾ ದಾಳಿಯನ್ನು ಪ್ರಸಾರ ಮಾಡುತ್ತಿದ್ದ ರಷ್ಯಾದ “ಟಿವಿ ರೇನ್​” ಮಾಧ್ಯಮವನ್ನು ರಷ್ಯಾ ಅಧಿಕಾರಿಗಳು ನಿಷೇಧಿಸಿದ ಬಳಿಕ ಮಾಧ್ಯಮದ ಎಲ್ಲ ಸಿಬ್ಬಂದಿಗಳು ಕೊನೆಯ ಟೆಲಿಕಾಸ್ಟ್​ ವೇಳೆ ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡರು ಎಂದು ತಿಳಿದುಬಂದಿದ್ದು, ರಾಜೀನಾಮೆಯನ್ನ ಸನ್ನಿವೇಶ ನೇರಪ್ರಸಾರವಾಗಿದೆ.

    ಈ ಬಗ್ಗೆ ಮಾತನಾಡಿರುವ ಟಿವಿ ಚಾನೆಲ್​ನ ಸಂಸ್ಥಾಪಕರಲ್ಲಿ ಒಬ್ಬರಾದ ನತಾಲಿಯಾ ಸಿಂಧೆಯಿವಾ ‘ಯುದ್ಧ ಬೇಡ’ ಎಂಬ ಕೊನೆಯ ಪ್ರಸಾರದ ವೇಳೆ ಉದ್ಯೋಗಿಗಳು ಸಾಮೂಹಿಕ ರಾಜೀನಾಮೆ ನೀಡಿ ಸ್ಟುಡಿಯೋದಿಂದ ಹೊರನಡೆದರು ಎಂದು ತಿಳಿಸಿದ್ದಾರೆ. ಸದ್ಯ ಅನಿರ್ದಿಷ್ಟಾವಧಿವರೆಗೆ ಚಾನೆಲ್​ ಕಾರ್ಯಾಚರಣೆಯನ್ನು ರಷ್ಯಾ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಚಾನೆಲ್​ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

    ಬರಹಗಾರ ಡೇನಿಯಲ್​ ಅಬ್ರಾಹಮ್ಸ್​ ಎಂಬುವರು ಲಿಂಕ್​ಡಿನ್​ನಲ್ಲಿ ಸಾಮೂಹಿಕ ರಾಜೀನಾಮೆ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಸಿಬ್ಬಂದಿಯ ರಾಜೀನಾಮೆ ನಿರ್ಗಮನದ ನಂತರ, ಟಿವಿ ರೇನ್​ ವಾಹಿನಿಯು 1991ರಲ್ಲಿ ಸೋವಿಯತ್ ಯೂನಿಯನ್ ಪತನಗೊಂಡಾಗ ರಷ್ಯಾದ ಸರ್ಕಾರಿ ಟಿವಿ ಚಾನೆಲ್‌ಗಳಲ್ಲಿ ತೋರಿಸಲಾದ ‘ಸ್ವಾನ್ ಲೇಕ್’ ಬ್ಯಾಲೆಟ್ ವೀಡಿಯೊವನ್ನು ಪ್ಲೇ ಮಾಡಿದೆ. ಈ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಯುದ್ಧದ ವಿರುದ್ಧವಾಗಿ ಮಾತನಾಡುವ ಮಾಧ್ಯಮಗಳ ಮೇಲೆ ರಷ್ಯಾ ಸರ್ಕಾರ ಕಣ್ಣಿಟ್ಟಿದ್ದು, ಅವುಗಳ ಮೇಲೆ ನಿಯಂತ್ರಣ ಸಾಧಿಸುತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣದ ಮೇಲೆಯೂ ರಷ್ಯಾ ತನ್ನ ಕಣ್ಗಾವಲನ್ನು ಇರಿಸಿದ್ದು, ರಾಷ್ಟ್ರಕ್ಕೆ ಅವಮಾನವಾಗುವಂತೆ ಯಾವುದೇ ದೃಶ್ಯ ಅಥವಾ ಬರಹಗಳು ಕಂಡುಬಂದಲ್ಲಿ ತಕ್ಷಣ ಅದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. (ಏಜೆನ್ಸೀಸ್​)

    ಭರವಸೆ ಈಡೇರಿಸಿದ ಬೊಮ್ಮಾಯಿ- ನವಲಿ ಜಲಾಶಯ, ಅಂಜನಾದ್ರಿ ಅಭಿವೃದ್ಧಿಗೆ ಅನುದಾನ

    ಬಜೆಟ್​ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ: ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಉಚಿತ ತರಬೇತಿ, 27 ಸಾವಿರ ಅತಿಥಿ ಶಿಕ್ಷಕರ ನೇಮಕ

    ಬಜೆಟ್​ನಲ್ಲಿ ಅನ್ನಭಾಗ್ಯ ಅಕ್ಕಿ ಪ್ರಮಾಣ ಹೆಚ್ಚಿಸಿದ ಸರ್ಕಾರ: ಏ.1ರಿಂದ 6 ಕೆಜಿ ಅಕ್ಕಿ ಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts