More

    ಸಂಸತ್​ ಸದಸ್ಯತ್ವದಿಂದ ರಾಹುಲ್​ ಗಾಂಧಿ ಅನರ್ಹ; ಕಾಂಗ್ರೆಸ್​ ಸಂಸದರಿಂದ ಸಾಮೂಹಿಕ ರಾಜೀನಾಮೆ!

    ನವದೆಹಲಿ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಲೋಕಸಭೆ ಸಂಸತ್ ಸ್ಥಾನದಿಂದ ಅನರ್ಹಗೊಳಿಸಿರುವ ಕ್ರಮವನ್ನ ಖಂಡಿಸಿ ಎಐಸಿಸಿ ಸುಧೀರ್ಘ ರಾಜಕೀಯ ಹೋರಾಟಕ್ಕೆ ಕರೆ ನೀಡಿದ್ದು ಪಕ್ಷದ ಸಭೆಯಲ್ಲಿ ಯುವ ನಾಯಕರು ಪ್ರಸ್ತಾಪ ಒಂದನ್ನು ಮುಂದಿರಿಸಿದ್ದಾರೆ.

    ರಾಹುಲ್​ ಗಾಂಧಿ ಅವರನ್ನು ಅನರ್ಹಗೊಳಿಸಿರುವ ಕ್ರಮವನ್ನ ಖಂಡಿಸಿ ಪಕ್ಷದ ಎಲ್ಲಾ ಸಂಸದರು ರಾಜೀನಾಮೆ ನೀಡಬೇಕು ಎಂದು ಸಂಸದ ರವನೀತ್ ಸಿಂಗ್​​ ಬಿಟ್ಟು ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಸರ್ಕಾರಿ ಬಂಗಲೆ ಖಾಲಿ ಮಾಡಿ: ಕೇಂದ್ರದ ನೋಟಿಸ್​ಗೆ​​​ ರಾಹುಲ್​ ಗಾಂಧಿ ಪ್ರತಿಕ್ರಿಯೆ ಹೀಗಿದೆ…

    ರವನೀತ್​ ಸಿಂಗ್​ ಬಿಟ್ಟು ಅವರ ಸಲಹೆಗೆ ವಿರುದುನಗರ್​ ಸಂಸದ ಮಾಣಿಕಂ ಠಾಗೋರ್​ ಬೆಂಬಲ ಸೂಚಿಸಿದ್ಧಾರೆ ಎಂದು ತಿಳಿದು ಬಂದಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​ನ ಹಿರಿಯ ಮುಖಂಡರು ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ಪಕ್ಷದ 10ಕ್ಕೂ ಹೆಚ್ಚು ಸಂಸದರು ನಡೆಸಿದ ಅನೌಪಚಾರಿಕ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ವಿಚಾರದ ಬಗ್ಗೆ ಶೀಘ್ರದಲ್ಲೇ ಚರ್ಚೆ ನಡೆಯುವ ಸಾರ್ದಯತೆ ಇಲ್ಲ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts