More

    ಅದರಲ್ಲೇನು ತಪ್ಪಿದೆ? ಡಾರ್ಲಿಂಗ್​ ಹೇಳಿಕೆಯನ್ನು ಸಮರ್ಥಿಸಿಕೊಂಡ ಯುವ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ

    ನವದೆಹಲಿ: ಸಂಸತ್​ ಸದಸ್ಯತ್ವದಿಂದ ರಾಹುಲ್​​ ಗಾಂಧಿ ಅವರನ್ನು ಅನರ್ಹ ಮಾಡಿರುವುದನ್ನು ಖಂಡಿಸಿ ಎಐಸಿಸಿ ಭಾನುವಾರ ನಡೆಸಿದ ಸಂಕಲ್ಪ ಸತ್ಯಾಗ್ರಹದಲ್ಲಿ ನಡೆಸಿತ್ತು. ಈ ವೇಳೆ ಯುವ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮಾತನಾಡುತ್ತ ಹಣದುಬ್ಬರವನ್ನು ಇವರು ಡಾರ್ಲಿಂಗ್​ ಮಾಡಿಕೊಂಡು ಬೆಡ್​ರೂಂನಲ್ಲಿ ಇರಿಸಿಕೊಂಡಿದ್ದಾರೆ ಎಂದು ಹೇಳಿದ್ದರು. ಸ್ಮೃತಿ ಇರಾನಿ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ಧಾರೆ ಎನ್ನುವ ಅವರ ಮಾತಿನ ವಿಡಿಯೋ ವೈರಲ್​ ಆಗುತ್ತಿದ್ದಂತೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.

    ಇನ್ನು ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿರುವ ಬಿ.ವಿ.ಶ್ರೀನಿವಾಸ್,​ 2014ಕ್ಕೂ ಮುಂಚೆ ಸಿಲಿಂಡರ್​ ಬೆಲೆ 400 ರೂಪಾಯಿ ಇತ್ತು. ಆದರೆ, ಈಗ ಒಂದು ಸಿಲಿಂಡರ್​ನ ಬೆಲೆ 1,100 ರೂಪಾಯಿ ಆಗಿದೆ. ಹಣದುಬ್ಬರವನ್ನ ಇವರು ಪ್ರಿಯತಮೆಯನ್ನಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದೇನೆ, ಅದರಲ್ಲೇನು ತಪ್ಪಿದೆ ಎಂದು ಪ್ರಶ್ನಿಸಿದ್ದಾರೆ.

    ಇನ್ನು ಬಿ.ವಿ.ಶ್ರೀನಿವಾಸ್​ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶಬ್ದಗಳು ರಾಹುಲ್​ ಗಾಂಧಿ ಅವರದ್ದು, ಸಂಸ್ಕಾರ ಸೋನಿಯಾ ಗಾಂಧಿ ಅವರದ್ದು, ಬಾಯಿ ಮಾತ್ರ ಯುವ ಕಾಂಗ್ರೆಸ್​​ನವರದ್ದು ಎಂದು ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಸರ್ಕಾರಿ ಬಂಗಲೆ ಖಾಲಿ ಮಾಡಿ: ಕೇಂದ್ರದ ನೋಟಿಸ್​ಗೆ​​​ ರಾಹುಲ್​ ಗಾಂಧಿ ಪ್ರತಿಕ್ರಿಯೆ ಹೀಗಿದೆ…

    ಯುವ ಕಾಂಗ್ರೆಸ್​​ನವರು ಈ ರೀತಿ ಹೇಳಿಕೆಯನ್ನು ನೀಡುತ್ತಿರುವುದು ಇದೇ ಮೊದಲಲ್ಲ ಎಲ್ಲಿಯವರೆಗೂ ಈ ಇಬ್ಬರು ನಾಯಕರು ಇರುತ್ತಾರೋ ಅಲ್ಲಿಯವರೆಗೂ ಈ ರೀತಿಯ ಅಸಭ್ಯ ಹೇಳಿಕೆಗಳನ್ನ ಇವರ ಮುಖಂಡರು ನೀಡುತ್ತಾರೆ ಎಂದು ರಾಗುಲ್​ ಹಾಗೂ ಸೋನಿಯಾ ಗಾಂಧಿ ವಿರುದ್ದ ಹರಿಹಾಯ್ದಿದ್ದಾರೆ. ‘

    ಇನ್ನು ಶ್ರೀನಿವಾಸ್​ ಹೇಳಿಕೆಗೆ ಸ್ವಪಕ್ಷದ ಮುಖಂಡ ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಪುತ್ರ ಅನಿಲ್​ ಆ್ಯಂಟೋನಿ ಹೇಳಿಕೆಯನ್ನ ಖಂಡಿಸಿದ್ದು ಮಹಿಳೆಯರ ಬಗ್ಗೆ ಈ ರೀತಿ ಮಾತನಅಡುವುದು ನಾಚಿಕೆಗೇಡಿನ ಸಂಗತಿ ಎಂದು ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts