More

    ನೇಪಾಳ, ಚೀನಾ ಅವಲಂಬಿಸಬೇಕಿಲ್ಲ, ಉತ್ತರಾಖಂಡ ಮೂಲಕವೇ ಮಾನಸ ಸರೋವರ ಯಾತ್ರೆಗೆ ಹೋಗ್ಬೋದು

    ನವದೆಹಲಿ: ಭಾರತದ ಯಾತ್ರಿಗಳಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಚೀನಾ ಅಥವಾ ನೇಪಾಳ ಮಾರ್ಗವನ್ನು ಅವಲಂಬಿಸದೇ 2023ರ ಡಿಸೆಂಬರ್​ ಹೊತ್ತಿಗೆ ದೇಶಿಯ ಮಾರ್ಗದಲ್ಲೇ ಕೈಲಾಶ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳಬಹುದೆಂದು ಮಂಗಳವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.

    ಉತ್ತರಾಖಂಡದ ಪಿತೋರಗಢದ ಗುಡ್ಡಗಾಡು ಪ್ರದೇಶದಲ್ಲಿ ಕೊರೆಯಲಾದ ರಸ್ತೆಯು ನೇರವಾಗಿ ಮಾನಸ ಸರೋವರಕ್ಕೆ ಸಂಪರ್ಕ ಕಲ್ಪಿಸುತ್ತದೆ ಎಂದು ನಿತಿನ್​ ಗಡ್ಕರಿ ಅವರು ತಿಳಿಸಿದ್ದಾರೆ. ಅಲ್ಲದೆ, ಈ ರಸ್ತೆಯಿಂದ ಸಮಯ ಉಳಿತಾಯ ಆಗುವುದಲ್ಲದೆ, ಮೃಧುವಾದ ಪ್ರಯಾಣವನ್ನು ಯಾತ್ರಿಗಳಿಗೆ ನೀಡಲಿದೆ. ಈ ಹಿಂದಿನಂತೆ ಯಾವುದೇ ಅಪಾಯಕಾರಿ ಚಾರಣದಂತೆ ಪ್ರಯಾಣ ಇರುವುದಿಲ್ಲ ಎಂದು ಹೇಳಿದ್ದಾರೆ.

    ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಸಚಿವಾಲಯವು ರಸ್ತೆ ಸಂಪರ್ಕವನ್ನು ಹೆಚ್ಚಿಸುತ್ತಿದೆ. ಇದರಿಂದ ಶ್ರೀನಗರ, ದೆಹಲಿ ಅಥವಾ ಮುಂಬೈ ನಡುವಿನ ಪ್ರಯಾಣದ ಸಮಯವನ್ನು ತೀವ್ರ ಕಡಿತಗೊಳ್ಳಲಿದೆ. ಈ ಯೋಜನೆಗಳಿಗೆ 7,000 ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ಗಡ್ಕರಿ ಸಂಸತ್ತಿಗೆ ತಿಳಿಸಿದರು.

    ಲಡಾಕ್‌ನಿಂದ ಕಾರ್ಗಿಲ್, ಕಾರ್ಗಿಲ್‌ನಿಂದ ಝಡ್-ಮೋರ್, ಝಡ್-ಮೋರ್‌ನಿಂದ ಶ್ರೀನಗರ ಮತ್ತು ಶ್ರೀನಗರದಿಂದ ಜಮ್ಮುವಿಗೆ ನಾಲ್ಕು ಸುರಂಗಗಳನ್ನು ನಿರ್ಮಿಸಲಾಗುತ್ತಿದೆ. Z-Morh ಸಿದ್ಧವಾಗುತ್ತಿದೆ. ಜೋಜಿಲಾ ಸುರಂಗದಲ್ಲಿ ಈಗಾಗಲೇ ಕೆಲಸ ನಡೆಯುತ್ತಿದೆ. ಸುಮಾರು 1,000 ಕಾರ್ಮಿಕರು ಪ್ರಸ್ತುತ ಸ್ಥಳದಲ್ಲಿದ್ದಾರೆ. ಯೋಜನೆ ಪೂರ್ಣಗೊಳಿಸಲು 2024ರ ಗಡುವು ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.

    ನಿರ್ಮಾಣ ಹಂತದಲ್ಲಿರುವ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ ದೆಹಲಿ ಮತ್ತು ಶ್ರೀನಗರ ನಡುವಿನ ಪ್ರಯಾಣವನ್ನು ಕೇವಲ ಎಂಟು ಗಂಟೆಗಳವರೆಗೆ ಕಡಿಮೆ ಮಾಡುತ್ತದೆ ಎಂದು ಗಡ್ಕರಿ ಹೇಳಿದರು. ಅಲ್ಲದೆ, ನಮ್ಮ ಸಚಿವಾಲಯವೂ 28 ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ವಿಮಾನದ ತುರ್ತು ಲ್ಯಾಂಡಿಂಗ್​ ಸೌಲಭ್ಯವು ಇದರಲ್ಲಿ ಇರಲಿದೆ. ಡ್ರೋನ್​ಗಳನ್ನು ಕೂಡ ಲ್ಯಾಂಡ್​ ಮಾಡಬಹುದು. ಅಪಘಾತದ ಸಂದರ್ಭದಲ್ಲಿ ಹೆಲಿಕಾಪ್ಟರ್​ ಆ್ಯಂಬುಲೆನ್ಸ್​ ಕೂಡ ಲ್ಯಾಂಡ್​ ಮಾಡಲು ಅನುಕೂಲಕರವಾಗಲಿದೆ ಎಂದು ತಿಳಿಸಿದರು. (ಏಜೆನ್ಸೀಸ್​)

    ಕೈಲಾಸದಲ್ಲಿಯೂ ನಿತ್ಯಾನಂದ ಲೈಂಗಿಕ ದೌರ್ಜನ್ಯ? ವಿದೇಶಿ ಶಿಷ್ಯೆಯಿಂದ ಮೇಲ್​ ಮೂಲಕ ದೂರು ದಾಖಲು!

    ಕೆಜಿಎಫ್​-2 ಚಿತ್ರತಂಡಕ್ಕೆ ತಲೆನೋವಾದ ಪ್ರಕಾಶ್​ ರಾಜ್​! ಬೇಡ ಸುಮ್ನಿರಿ ಸರ್​… ತೆರೆಮರೆಯಲ್ಲಿ ಕಸರತ್ತು

    ವೈರಲ್​ ಆಯ್ತು ಕಚ್ಚಾ ಬಾದಮ್​ ಹಾಡಿಗೆ ಪೊಲೀಸ್​ ಸಿಬ್ಬಂದಿ ಹಾಕಿದ ಸ್ಟೆಪ್ಸ್​: ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts