More

    ದಯವಿಟ್ಟು ನನಗೆ ಚಿನ್ನ ಬೇಡ: ಮದುವೆಯಲ್ಲಿ ವರದಕ್ಷಿಣೆ ವಿರೋಧಿ ಹೇಳಿಕೆ ನೀಡಿ ಮಾದರಿಯಾದ ಯುವಕ!

    ಆಲಪ್ಪುಳ: ಕೇವಲ ಎರಡು ದಿನಗಳ ಅಂತರದಲ್ಲಿ ಕೇರಳದ ಮೂವರು ಯುವತಿಯರು ವರದಕ್ಷಿಣೆ ಕಿರುಕುಳಕ್ಕೆ ಮೃತಪಟ್ಟ ಘಟನೆ ಸಾಕ್ಷರತಾ ನಾಡು ಕೇರಳದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿತು. ಮಾನವನ ದುರಾಸೆಯಿಂದ ಮೂವರು ಅಮಾಯಕರ ಪ್ರಾಣವೇ ಹೋಯಿತು. ಈ ಘಟನೆಯಿಂದ ಹೆಣ್ಣು ಮಕ್ಕಳನ್ನು ಹೆತ್ತ ಪಾಲಕರು ಆತಂಕಕ್ಕೀಡಾಗಿರುವುದಲ್ಲದೇ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೆ ದೂಡಿದೆ. ಆದರೆ, ಆಲಪ್ಪುಳದಲ್ಲಿ ಗುರುವಾರ ನಡೆದ ಮದುವೆಯೊಂದು ಹೆಣ್ಣು ಹೆತ್ತ ಪಾಲಕರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

    ಹೌದು. ನಿನ್ನೆ ನಡೆದ ಸತೀಶ್​ ಸತ್ಯಾನ್​ ಮತ್ತು ಶ್ರುತಿ ರಾಜ್​ ಮದುವೆಯಲ್ಲಿ ಸಮಾಜಕ್ಕೆ ಒಂದು ಬಲವಾದ ಸಂದೇಶವನ್ನು ರವಾನಿಸಲಾಗಿದೆ. ವರ ಸತೀಶ್​ ನನಗೆ ಚಿನ್ನ ಬೇಡ ಎಂದು ವಧುವಿನ ಕುಟುಂಬಕ್ಕೆ ಹಿಂತಿರುಗಿಸಿ ಎಲ್ಲರು ತನ್ನ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಮೂಲಕ ಕೇರಳದಲ್ಲಿ ಹೊಸ ಪದ್ಧತಿಗೆ ಸತೀಶ್​ ನಾಂದಿ ಆಡಿದ್ದಾರೆ.

    ಇದನ್ನೂ ಓದಿರಿ: ಮಗುವಿಗಾಗಿ ಮಗಳನ್ನೇ ಮದುವೆಯಾದನಾ 75ರ ವೃದ್ಧ!? ವೈರಲ್​ ಫೋಟೋ ಕುರಿತ ಅಸಲಿ ಕಹಾನಿ ಇಲ್ಲಿದೆ

    ಅಂದಹಾಗೆ ಸತೀಶ್​ ಸತ್ಯನ್​ ಮತ್ತು ಶ್ರುತಿ ರಾಜ್​ ಪಣಯಿಲ್​ ದೇವಿ ದೇವಸ್ಥಾನದಲ್ಲಿ ಗುರುವಾರ ಸಪ್ತಪದಿ ತುಳಿದಿದ್ದಾರೆ. ಮದುವೆ ಮುಗಿದ ಬಳಿಕ ವರ ಸತೀಶ್​ ಮತ್ತು ಅವರ ತಂದೆ ಸತ್ಯನ್​, ವಧು ಧರಿಸಿದ್ದ ಚಿನ್ನಾಭರಣಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಅವರ ಕುಟುಂಬಕ್ಕೆ ಹಿಂತಿರುಗಿಸಿದ್ದಾರೆ.

    ಸತೀಶ್​ ನೂರನಾಡ್​​ ಪಲ್ಲಿಕಲ್​ ನಿವಾಸಿ ಕೆ.ವಿ. ಸತ್ಯನ್​ ಮತ್ತು ಜಿ ಸರಸ್ವತಿ ಅವರ ಪುತ್ರ. ಶ್ರುತಿ ರಾಜ್​ ನೂರನಾಡ್​ ಪಣಯಿಲ್​ ನಿವಾಸಿ ಆರ್​. ರಾಜೇಂದ್ರನ್​ ಮತ್ತು ಪಿ ಶೀಲಾ ಅವರು ಮಗಳು. ಕೋವಿಡ್​ ಶಿಷ್ಟಾಚಾರದಂತೆ ನಡೆದ ಮದುವೆಯಲ್ಲಿ ಆಪ್ತ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದರು. (ಏಜೆನ್ಸೀಸ್​)

    2 ದಿನದ ಅಂತರದಲ್ಲಿ ಮೂವರು ಯುವತಿಯರ ದುರಂತ ಸಾವು: ಸಾಕ್ಷರತಾ ರಾಜ್ಯ ಕೇರಳಕ್ಕೆ ಕಪ್ಪುಚುಕ್ಕೆ

    ವರದಕ್ಷಿಣೆಗೆ ವೈದ್ಯೆ ಬಲಿ! ಸಾವಿಗೂ ಮುನ್ನ ಸೋದರನ ಬಳಿ ಆಕೆ ಬಿಚ್ಚಿಟ್ಟ ನೋವಿನ ಸಂದೇಶ ಇಲ್ಲಿದೆ

    ಕೋಟಿಕೋಟಿ ವರದಕ್ಷಿಣೆ ಕೊಟ್ಟರೂ ಸಂತೃಪ್ತನಾಗದ ಪತಿರಾಯ! ಹೆಂಡತಿಯನ್ನು ಆಹಾರ ಕೊಡದೆ ಕೂಡಿ ಹಾಕಿದ್ದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts