More

    ಮೂರೇ ತಿಂಗಳಲ್ಲಿ 2 ಲಕ್ಷ ಸಬ್​ಸ್ಕ್ರೈಬರ್ಸ್​ ಕಳೆದುಕೊಂಡ ನೆಟ್​ಫ್ಲಿಕ್ಸ್​: ಕಾರಣ ಹೀಗಿದೆ…

    ಸ್ಯಾನ್​ ಫ್ರಾನ್ಸಿಸ್ಕೋ: ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋ ನಗರದಲ್ಲಿರುವ ಚಂದಾದಾರ ಆಧಾರಿತ ಸ್ಟ್ರೀಮಿಂಗ್​ ಸರ್ವೀಸ್​ ಮತ್ತು ಪ್ರೊಡಕ್ಷನ್​ ಕಂಪನಿ ನೆಟ್​ಫ್ಲಿಕ್ಸ್​ ತನ್ನ ಒಟ್ಟು ಷೇರು ಮೌಲ್ಯದ ಕಾಲು ಭಾಗವನ್ನು ಕಳೆದುಕೊಂಡು ಮಂಗಳವಾರ ನಷ್ಟ ಅನುಭವಿಸಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ತನ್ನ ಚಂದಾದಾರಿಕೆ ಪ್ರಮಾಣದಲ್ಲಿ ಕುಸಿತಕಂಡ ಪರಿಣಾಮ ನೆಟ್​ಫ್ಲಿಕ್ಸ್​ಗೆ ಭಾರಿ ಹಿನ್ನೆಡೆಯಾಗಿದೆ.

    ಮೂಂಚೂಣಿಯಲ್ಲಿರುವ ಸ್ಟ್ರೀಮಿಂಗ್​ ಟೆಲಿವಿಷನ್​ ಸರ್ವೀಸ್​ ಕಂಪನಿ ದಶಕದಲ್ಲೇ ಮೊದಲ ಬಾರಿಗೆ ಭಾರೀ ಪ್ರಮಾಣದ ಚಂದಾದಾರವನ್ನು ಕಳೆದುಕೊಂಡಿದೆ. ಯೂಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರಿದ್ದು, ರಷ್ಯಾದಲ್ಲಿ ತನ್ನ ಸೇವೆ ಸ್ಥಗಿತಗೊಂಡಿರುವ ಪರಿಣಾಮ ಎಂದು ಕಂಪನಿ ತಿಳಿಸಿದೆ.

    ನೆಟ್‌ಫ್ಲಿಕ್ಸ್ ಈ ವರ್ಷದ ಮೊದಲ ತ್ರೈಮಾಸಿಕವನ್ನು 221.6 ಮಿಲಿಯನ್ ಚಂದಾದಾರರೊಂದಿಗೆ ಕೊನೆಗೊಳಿಸಿತು, ಇದು ಕಳೆದ ವರ್ಷದ ಅಂತಿಮ ತ್ರೈಮಾಸಿಕಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಇತ್ತೀಚೆಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ತನ್ನ ನಿವ್ವಳ ಆದಾಯ 1.6 ಬಿಲಿಯನ್​ ಡಾಲರ್​ ಎಂದು ನೆಟ್​ಫ್ಲಿಕ್ಸ್ ವರದಿ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯ ನಿವ್ವಳ ಆದಾಯ 1.7 ಬಿಲಿ​ಯನ್​ ಡಾಲರ್​ ಇತ್ತು. ಷೇರು ಮಾರುಕಟ್ಟೆಯು ವಹಿವಾಟಿನ ಗಳಿಕೆಯ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ ಬಳಿಕ ನೆಟ್‌ಫ್ಲಿಕ್ಸ್ ಷೇರುಗಳಲ್ಲಿ ಶೇ. 25 ರಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ.

    ನಾವು ಬಯಸಿದಷ್ಟು ವೇಗವಾಗಿ ನಮ್ಮ ಆದಾಯವನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ ಎಂದು ನೆಟ್​ಫ್ಲಿಕ್ಸ್​ ಹೇಳಿಕೊಂಡಿದೆ. ಕರೊನಾ ಮಹಾಮಾರಿ ಜಗತ್ತನ್ನು ಕಾಡಿದರೆ, ನೆಟ್​ಫ್ಲಿಕ್ಸ್​ ಅದು ವರವಾಗಿ ಪರಿಣಮಿಸಿತ್ತು. 2020ರಲ್ಲಿ ನೆಟ್​ಫ್ಲಿಕ್ಸ್​ ಬೆಳವಣಿಗೆ ಉತ್ತಮವಾಗಿತ್ತು. 2021ರಲ್ಲಿ ಬೆಳವಣಿಗೆ ನಿಧಾನವಾದರೂ ಕುಸಿತ ಕಂಡಿರಲಿಲ್ಲ. ಆದರೆ, ಇದೀಗ ಕೇವಲ 100 ದಿನಗಳಲ್ಲಿ 2 ಲಕ್ಷ ಚಂದಾದಾರರನ್ನು ನೆಟ್​ಫ್ಲಿಕ್ಸ್​ ಕಳೆದುಕೊಂಡಿದೆ.

    ನೆಟ್‌ಫ್ಲಿಕ್ಸ್ ತನ್ನ ಬೆಳವಣಿಗೆಗೆ ಅಡ್ಡಿಯಾಗಿರುವ ಅಂಶಗಳನ್ನು ಪಟ್ಟಿಮಾಡಿದೆ. ಕೈಗೆಟುಕುವ ದರದ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆ ಮತ್ತು ಸ್ಮಾರ್ಟ್ ಟೆಲಿವಿಷನ್‌ಗಳ ಜತೆಗೆ ಚಂದಾದಾರರು ತಮ್ಮ ಮನೆಗಳಲ್ಲಿ ವಾಸಿಸದ ಜನರೊಂದಿಗೂ ಸಹ ತಮ್ಮ ಖಾತೆಗಳನ್ನು ಹಂಚಿಕೊಳ್ಳುತ್ತಿರುವ ಪರಿಣಾಮ ಎಂದು ನೆಟ್​ಫ್ಲಿಕ್ಸ್​ ಹೇಳಿದೆ. (ಏಜೆನ್ಸೀಸ್​)

    ಕೋಟಿ ಸಂಪಾದಿಸುವ ಸಮಂತಾರ ಮೊದಲ ಸಂಬಳ ಎಷ್ಟೆಂಬುದನ್ನು ತಿಳಿದ್ರೆ ನೀವು ಅಚ್ಚರಿ ಪಡ್ತೀರಾ!

    ಕಿಟಕಿ ತೆಗೆಯಲು KSRTC ಬಸ್​ ಚಾಲಕನ ಸಹಾಯ ಕೋರಿದ ಬೆಂಗ್ಳೂರು ವಿದ್ಯಾರ್ಥಿನಿಗೆ ಕಾದಿತ್ತು ಶಾಕ್!​

    ಅಲ್ಲು ಅರ್ಜುನ್​ ಭವಿಷ್ಯದ ಯೋಜನೆಯನ್ನೇ ಬದಲಿಸಿದ ಕೆಜಿಎಫ್-2 ಗೆಲುವು! ಬನ್ನಿ ಪ್ಲಾನ್​ ಕೇಳಿದ್ರೆ ಫ್ಯಾನ್ಸ್​ ಥ್ರಿಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts