More

    ನೀಟ್​ ಪರೀಕ್ಷೆ ಫಲಿತಾಂಶ ಪ್ರಕಟ: ರಾಜ್ಯದ ಇಬ್ಬರು ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

    ಬೆಂಗಳೂರು: ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) 2021ರ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ (ಎಐಆರ್) 5ನೇ ರ್ಯಾಂಕ್​ ಪಡೆಯುವ ಮೂಲಕ ಕರ್ನಾಟಕ ಟಾಪರ್ ಎಂಬ ಕೀರ್ತಿ ಪಡೆದಿದ್ದಾರೆ.

    ಕೆ- ಸಿಇಟಿಯಲ್ಲಿ ಪ್ರಥಮ ರ್ಯಾಂಕ್​ ಗಳಿಸಿದ್ದ ಮೈಸೂರಿನ ಎಚ್.ಕೆ. ಮೇಘನ್ ಮತ್ತು ಉಡುಪಿಯ ಜಶನ್ ಛಾಬ್ರಾ ಟಾಪರ್‌ಗಳಾಗಿದ್ದಾರೆ.

    ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸೋಮವಾರ ಸಂಜೆ ನೀಟ್ ಫಲಿತಾಂಶವನ್ನು ಪ್ರಕಟಿದೆ. 2021ನೇ ಸಾಲಿನ ನೀಟ್ ಪರೀಕ್ಷೆ ರಾಜ್ಯಾದ್ಯಂತ 202 ಪರೀಕ್ಷಾ ಕೇಂದ್ರಗಳಲ್ಲಿ ಸೆ.12ರಂದು ನಡೆದಿತ್ತು. ಒಟ್ಟು 16.1 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

    ಮೇಘನ್ ಸಂತಸ: ‘ನೀಟ್‌ನಲ್ಲಿ 5ನೇ ರ್ಯಾಂಕ್​ ಬಂದಿರುವುದು ಸಂತಸವನ್ನು ತಂದಿದೆ. ದೆಹಲಿಯ ಏಮ್ಸ್‌ನಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಸೇರಬೇಕು ಎಂದುಕೊಂಡಿದ್ದೇನೆ. ವೈದ್ಯನಾಗಬೇಕೆಂಬ ಕನಸು ಇಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ ಪ್ರೌಢಶಾಲೆಗೆ ಬಂದ ತಕ್ಷಣವೇ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೆ. ಕರೊನಾ ರಜೆ ಸಿಕ್ಕ ಕಾರಣ ಓದಲು ಮತ್ತಷ್ಟು ಅವಕಾಶ ಸಿಕ್ಕಂತಾಯಿತು. ಈ ಸಾಧನೆಗೆ ಎಲ್ಲ ಪ್ರೋತ್ಸಾಹ ನೀಡಿದ ನನ್ನ ಪಾಲಕರಿಗೆ ಹಾಗೂ ಉಪನ್ಯಾಸಕರಿಗೆ ಧನ್ಯವಾದಗಳು’ ಎನ್ನುತ್ತಾರೆ ಎಚ್.ಕೆ.ಮೇಘನ್.

    ಕೇದಾರನಾಥದಲ್ಲಿ ಸಾರಾ ಅಲಿ ಖಾನ್​-ಜಾಹ್ನವಿ ಕಪೂರ್

    ಆರ್​ಆರ್​ಆರ್ ಟೀಸರ್ ಬಂತು; ಚಿತ್ರಕ್ಕಾಗಿ ಪಿವಿಆರ್ ಹೆಸರು ಬದಲು

    ಆರ್​ಆರ್​ಆರ್ ಟೀಸರ್ ಬಂತು; ಚಿತ್ರಕ್ಕಾಗಿ ಪಿವಿಆರ್ ಹೆಸರು ಬದಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts