More

    ಮತ್ತೊಮ್ಮೆ ತನ್ನದೇ ರಾಷ್ಟ್ರೀಯ ದಾಖಲೆ ಮುರಿದ ನೀರಜ್​ ಜೋಪ್ರಾ: ಡೈಮಂಡ್​ ಲೀಗ್​ನಲ್ಲಿ ಬೆಳ್ಳಿ ಪದಕ

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದ ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್​​ ಚೋಪ್ರಾ, ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ. ಸ್ಟಾಕ್​ಹೋಮ್​​ನಲ್ಲಿ ಗುರುವಾರ (ಜೂನ್​ 30) ನಡೆದ ಡೈಮಂಡ್​ ಲೀಗ್​ನಲ್ಲಿ 89.94 ಮೀಟರ್​ ದೂರಕ್ಕೆ ಜಾವೆಲಿನ್​ ಎಸೆಯುವ ಮೂಲಕ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಜಯಿಸಿದ್ದಲ್ಲದೆ, ತಮ್ಮ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.

    24 ವರ್ಷ ವಯಸ್ಸಿನ ನೀರಜ್​, 2021ರ ಆಗಸ್ಟ್​ 7ರಂದು ಟೋಕಿಯೋ ಒಲಿಂಪಿಕ್ಸ್​ನಲ್ಲಿ 87.58 ಮೀಟರ್​ ದೂರಕ್ಕೆ ಜಾವೆಲಿನ್​ ಎಸೆದು ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದರು. 2021ರ ಮಾರ್ಚ್​ನಲ್ಲಿ ಪಟಿಯಾಲಾದಲ್ಲಿ ಜಾವೆಲಿನ್​ ಅನ್ನು 88.07 ಮೀಟರ್​ ದೂರಕ್ಕೆ ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.

    ಇದೀಗ ಒಂದೇ ತಿಂಗಳಲ್ಲಿ ಎರಡು ಬಾರಿ ತಮ್ಮ ಒಲಿಂಪಿಕ್ಸ್​ ದಾಖಲೆಯನ್ನು ನೀರಜ್​ ಚೋಪ್ರಾ ಮುರಿದಿದ್ದಾರೆ. ಕಳೆದ ಜೂನ್​ 15ರಂದು ಫಿನ್‌ಲ್ಯಾಂಡ್‌ನ ಸ್ಪರ್ಧೆಯ ಮೊದಲ ಸುತ್ತಿನಲ್ಲಿ 86.92 ಮೀಟರ್​​ ದೂರಕ್ಕೆ ಜಾವೆಲಿನ್​ ಎಸೆದ ನೀರಜ್​, 2ನೇ ಅವಕಾಶದಲ್ಲಿ 89.30 ಮೀಟರ್​ ದೂರಕ್ಕೆ ಜಾವೆಲಿನ್​ ಮುಟ್ಟಿಸಿದರು. ಆ ಮೂಲಕ ತನ್ನದೇ ಹಿಂದಿನ ದಾಖಲೆಯನ್ನು ಮುರಿದ್ದರು. ಇದೀಗ ಸ್ಟಾಕ್​ಹೋಮ್​​ನಲ್ಲಿ ಗುರುವಾರ (ಜೂನ್​ 30) ನಡೆದ ಡೈಮಂಡ್​​ ಲೀಗ್​ನಲ್ಲಿ 89.94 ಮೀಟರ್​ ದೂರಕ್ಕೆ ಜಾವೆಲಿನ್​ ಎಸೆಯುವ ಮೂಲಕ ಎರಡನೇ ಸ್ಥಾನದೊಂದಿಗೆ ತಮ್ಮ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.

    ಡೈಮಂಡ್​ ಲೀಗ್​ನಲ್ಲಿ ನೀರಜ್​ ಚೋಪ್ರಾ ಎರಡನೇ ಸ್ಥಾನ ಪಡೆದರೆ, ಆ್ಯಂಡರ್ಸನ್​ ಪೀಟರ್​ 90.31 ಮೀಟರ್​ ಎಸೆಯುವ ಮೂಲಕ ಮೊದಲ ಸ್ಥಾನದೊಂದಿಗೆ ವಿಶ್ವ ಚಾಂಪಿಯನ್​ ಎನಿಸಿಕೊಂಡರು.

    ಮೊದಲ ಬಾರಿಗೆ ಡೈಮಂಡ್ ಲೀಗ್ ಮೀಟ್‌ನಲ್ಲಿ ಅಗ್ರ 3 ರಲ್ಲಿ ಸ್ಥಾನ ಪಡೆದ ನೀರಜ್ ಚೋಪ್ರಾ, ಒಟ್ಟು 6 ಥ್ರೋಗಳನ್ನು ಎಸೆದರು. ಮೊದಲ ಎಸೆತದಲ್ಲೇ 89.94 ಮೀಟರ್​ ಮೂಲಕ ತಮ್ಮದೇ ದಾಖಲೆಯನ್ನು ಮುರಿದರು. ಉಳಿದ ಐದು ಎಸೆತಗಳಲ್ಲಿ ಕ್ರಮವಾಗಿ 84.37 ಮೀ, 87.46 ಮೀ, 84.77 ಮೀ, 86.67 ಮೀ, ಮತ್ತು 86.84 ಮೀ. ಎಸೆದರು. (ಏಜೆನ್ಸೀಸ್​)

    ಪಿಯುಸಿ ಮರು ಪರೀಕ್ಷೆಯಲ್ಲೂ ಫೇಲ್​ ಆಗಿದ್ದಕ್ಕೆ ಮನನೊಂದು ಸಾವಿನ ಹಾದಿ ಹಿಡಿದ ವಿದ್ಯಾರ್ಥಿನಿ

    ಹೇರ್, ಸಲೂನ್ ಉದ್ಯಮ ಬೆಳವಣಿಗೆಗೆ ಎಕ್ಸ್​ಪೋ

    ಸುಲಲಿತ ವ್ಯವಹಾರ ರಾಜ್ಯಕ್ಕೆ ಅಗ್ರಸ್ಥಾನ; 17ನೇ ಸ್ಥಾನದಿಂದ ಟಾಪ್ ಅಚೀವರ್ ಆಗಿ ಹೊರಹೊಮ್ಮಿದ ಕರ್ನಾಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts