More

    ಹೇರ್, ಸಲೂನ್ ಉದ್ಯಮ ಬೆಳವಣಿಗೆಗೆ ಎಕ್ಸ್​ಪೋ

    ಬೆಂಗಳೂರು: ಹೇರ್ ಕೇರ್ ಮತ್ತು ಸಲೂನ್ ಉದ್ಯಮ ಉತ್ತೇಜಿಸುವ ಪ್ರಯತ್ನವಾಗಿ ಸವಿತಾ ಸಮಾಜ ಅಭಿವೃದ್ಧಿ ನಿಗಮವು ಆಗಸ್ಟ್ 6ರಿಂದ 9ರವರೆಗೆ ಎಕ್ಸ್​ಪೋ ಆಯೋಜಿಸಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನಿಗಮದ ಅಧ್ಯಕ್ಷ ಎಸ್.ನರೇಶ್ ಕುಮಾರ್, ಸಮಾಜದವರ ಉದ್ಯಮ ಸಾಮರ್ಥ್ಯ, ಜಾಗತಿಕ ಗುಣಮಟ್ಟ ಹೆಚ್ಚಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮ್ಯಾನ್ ಪೋ ಕನ್ವೆಂಷನ್ ಸೆಂಟರ್​ನಲ್ಲಿ ನಡೆಯುವ ಮೇಳದಲ್ಲಿ ಸಂಶೋಧನೆ ಫಲಿತಾಂಶಗಳು, ನವೀನ ತಂತ್ರಗಳು, ದೇಶ ಮತ್ತು ಪ್ರಪಂಚದಾದ್ಯಂತ ಹೇರ್​ಕೇರ್, ಸ್ಪಾ ತಜ್ಞರೊಂದಿಗೆ ಸಂಪರ್ಕ ಸಾಧಿಸಲು ವೇದಿಕೆ ಕಲ್ಪಿಸಲಿದೆ ಎಂದು ವಿವರಿಸಿದರು.

    ಮಾರುಕಟ್ಟೆ ಅವಲೋಕನ, ಉತ್ಪನ್ನಗಳು, ಬೆಸ್ಟ್ ಪ್ರಾಕ್ಟೀಸಸ್​ಗಳ ಮೇಲೆ ಬೆಳಕು ಚೆಲ್ಲಲು ಉನ್ನತ ಮಟ್ಟದ ಸಲಹಾ ಸಮಿತಿಯಿಂದ ತಾಂತ್ರಿಕ ಸಮ್ಮೇಳನ ಆಯೋಜಿಸಲಾಗುತ್ತಿದೆ. ರಾಜ್ಯದಲ್ಲಿ ಸವಿತಾ ಸಮಾಜಕ್ಕೆ ಸಾಮಾಜಿಕ, ಆರ್ಥಿಕ ಮತ್ತು ಔದ್ಯೋಗಿಕ ಬೆಂಬಲ ನೀಡಿ ಪ್ರೋತ್ಸಾಹಿಸಲು ಎಸ್​ಎಸ್​ಡಿಸಿ ಸ್ಥಾಪಿಸಿದೆ.

    ಸಮುದಾಯದ ಮೇಲೆ ಪರಿಣಾಮ ಬೀರಿದ ಜಾತಿ ಆಧಾರಿತ ಕಳಂಕವನ್ನು ಹೋಗಲಾಡಿಸಲು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ಮೇಳದಲ್ಲಿ ನೂರಕ್ಕೂ ಹೆಚ್ಚು ಬ್ರಾಂಡ್​ಗಳು ಮತ್ತು ಅಂದಾಜು 40 ಸಾವಿರ ಸಂದರ್ಶಕರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದ ಅವರು ದೇಶದಲ್ಲಿ ಕೂದಲಿನ ಬಗ್ಗೆ ದೊಡ್ಡ ಎಕ್ಸಿಬಿಷನ್ ಇದಾಗಿರುತ್ತದೆ ಈ ಕ್ಷೇತ್ರದ ಖ್ಯಾತ ನಾಮರು ಬರುತ್ತಾರೆ ಎಂದರು.

    ಕಾಸ್ಮೆಟಿಕ್ ಹಬ್ ಸ್ಥಾಪನೆಗೆ ಆಗ್ರಹ: ರಾಜ್ಯದಲ್ಲಿ ಕಾಸ್ಮೆಟಿಕ್ ಇಂಡಸ್ಟ್ರಿ ಹಬ್ ಕ್ರಿಯೇಟ್ ಮಾಡಬೇಕಿದ್ದು, ಸರ್ಕಾರ ನೂರೈವತ್ತು ಎಕರೆ ಜಾಗ ಕೊಡಬೇಕು ಎಂಬುದು ನಮ್ಮ ಬೇಡಿಕೆ ಎಂದು ನರೇಶ್ ಕುಮಾರ್ ಹೇಳಿದರು. ರಷ್ಯಾ, ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ ಕೂದಲ ಬಗ್ಗೆ ಹೆಚ್ಚಿನ ಸಂಶೋಧನೆ ಆಗುತ್ತಿದೆ. ನಮ್ಮಲ್ಲೂ ಅದೇ ರೀತಿ ಸಂಶೋಧನೆ ಆಗಬೇಕಾಗಿದೆ ಎಂದ ಅವರು ಧರ್ಮಸ್ಥಳ, ತಿರುಪತಿಯಲ್ಲಿ ಸಂಗ್ರಹವಾಗುವ ದೊಡ್ಡ ಮಟ್ಟದ ಕೂದಲನ್ನು ಅಮೋನಿಯಂ ಆಕ್ಸೈಡ್​ಗೆ ಬಳಸಲಾಗುತ್ತದೆ. ರಾಜ್ಯದಲ್ಲಿ ವಾರ್ಷಿಕ 8 ಸಾವಿರ ಕೋಟಿ ಹಾಗೂ ದೇಶದಲ್ಲಿ ಇಪ್ಪತೆôದು ಸಾವಿರ ಕೋಟಿಯಷ್ಟು ವ್ಯವಹಾರ ನಡೆಯುತ್ತದೆ. ಇದಕ್ಕೆ ಇನ್ನಷ್ಟು ಪ್ರೋತ್ಸಾಹ ಬೇಕಿದೆ ಎಂದರು.

    ಮಾಂಸಪ್ರಿಯರೇ ಎಚ್ಚರ; ಚಿಕನ್ ಲೆಗ್ ಪೀಸ್ ಪಾರ್ಸೆಲ್ ತಂದ ಗ್ರಾಹಕನಿಗೆ ಕಾದಿತ್ತು ಶಾಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts