ಎರಡನೇ ಮದುವೆಗೆ ರೆಡಿಯಾದ ನಾಗಚೈತನ್ಯ! ಹುಡುಗಿ ಯಾರು? ಯಾವಾಗ ಮದುವೆ? ಇಲ್ಲಿದೆ ಮಾಹಿತಿ

ಹೈದರಾಬಾದ್​: ತಾರಾದಂಪತಿ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್​ ಸಂಗತಿ 2021ರಲ್ಲಿ ಭಾರೀ ಸುದ್ದಿಯಾಯಿತು. ದಾಂಪತ್ಯ ಜೀವನಕ್ಕೆ ಕಳೆದ ಅಕ್ಟೋಬರ್ 2ರಂದು ಇಬ್ಬರು ಅಂತ್ಯವಾಡಿದ್ದು, ಅಂದಿನಿಂದ ಇಬ್ಬರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಸಮಂತಾ ಮತ್ತು ನಾಗಚೈತನ್ಯ ತಮ್ಮ ತಮ್ಮ ಸಿನಿಮಾಗಳಲ್ಲಿ ಬಿಜಿಯಾಗಿದ್ದು, ಇದರ ನಡುವೆ ಒಂದು ಬ್ರೇಕಿಂಗ್​ ನ್ಯೂಸ್​ ಹೊರಬಿದ್ದಿದೆ.

ಯಾವುದು ಆ ಬ್ರೇಕಿಂಗ್​ ಸುದ್ದಿ ಅಂದರೆ, ನಟ ನಾಗಚೈತನ್ಯ ಅವರು ಎರಡನೇ ಮದುವೆಗೆ ರೆಡಿಯಾಗಿದ್ದಾರಂತೆ. ಎರಡನೇ ಬಾರಿಗೆ ಯಾರನ್ನು ಮದುವೆ ಆಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಆದರೆ, ಈ ಬಾರಿ ಸಿನಿಮಾ ನಟಿಯರ ಸಹವಾಸವೇ ಬೇಡ ಅಂತಿದ್ದಾರಂತೆ ನಾಗಚೈತನ್ಯ. ನಟಿಯಲ್ಲದ, ಹೊರಗಿನ ಸಂಬಂಧ ಬೆಳೆಸಲು ಮುಂದಾಗಿದ್ದಾರಂತೆ. ಹೀಗೊಂದು ಸುದ್ದಿ ಟಾಲಿವುಡ್​ ಗಲ್ಲಿಯಿಂದ ಕೇಳಿಬರುತ್ತಿದೆ.

ಶೀಘ್ರದಲ್ಲೇ ಮದುವೆ ಆಗಲಿದ್ದಾರಂತೆ. ಅದಕ್ಕೆಲ್ಲ ತಯಾರಿಯು ನಡೆದಿದೆಯಂತೆ. ಆದರೆ, ಕುಟುಂಬ ಮೂಲಗಳಿಂದ ಯಾವುದೇ ಸುಳಿವು ದೊರೆತಿಲ್ಲ. ಇದು ಸಿನಿಮಾ ಮೂಲಗಳಿಂದ ಬಂದಿರುವ ಮಾಹಿತಿಯಾಗಿದೆ. ಇನ್ನು ನಾಗಾಚೈತನ್ಯ ಮದುವೆಯಾಗಲು ಸಮಂತಾರೇ ಮೊದಲನೇ ಆಯ್ಕೆಯಲ್ಲ. ಈ ಹಿಂದೆ ಶ್ರುತಿ ಹಾಸನ್​ ಜತೆ ಗಾಢವಾದ ಪ್ರೀತಿಯಲ್ಲಿ ಬಿದ್ದಿದ್ದರು. ಶ್ರುತಿ ಜತೆ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಇಬ್ಬರ ಲವ್​ ಬ್ರೇಕಪ್​ ಆಯಿತು.

ಇದಲ್ಲದೆ, ನಾಗಚೈತನ್ಯ ಅವರು ಮಜಿಲಿ ಚಿತ್ರ ಸಹನಟಿ ದಿವ್ಯಾಂಶ ಕೌಸಿಕ್​ ಜತೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ನಾಗಚೈತನ್ಯ ದಿವ್ಯಾಂಶರನ್ನು ಮದುವೆಯಾಗಲು ಆಸಕ್ತಿ ತೋರಿಸುತ್ತಿಲ್ಲ ಎಂದು ಮೂಲಗಳು ಹೇಳುತ್ತವೆ. ಸದ್ಯ ಎರಡನೇ ವಿಚಾರ ಟಾಲಿವುಡ್​ ಗಲ್ಲಿಯಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಈ ವಿಚಾರಕ್ಕೆ ಅಕ್ಕಿನೇನಿ ಕುಟುಂಬ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

ಹಸ್ತಮೈಥುನದಿಂದ ಶ್ವಾಸಕೋಸದ ಪೊರೆ ಹರಿತ! 20ರ ಯುವಕನ ಎಕ್ಸ್​ರೇ ವರದಿಯಲ್ಲಿತ್ತು ಭಯಾನಕ ಅಂಶ

KGF-2 ಕನ್ನಡದ ಹೆಮ್ಮೆಯಲ್ಲ ಎನ್ನುತ್ತಲೇ ದಂಡುಪಾಳ್ಯ ಚಿತ್ರದ ಭಯಾನಕ ಉದಾಹರಣೆ ಕೊಟ್ಟ ಭಾಸ್ಕರ್​ ರಾವ್!​

ರಾಜ್ಯಸಭೆಯ ಸಂಬಳ ರೈತರ ಮಕ್ಕಳ ಶಿಕ್ಷಣಕ್ಕೆ ಮೀಸಲು: ಹರ್ಭಜನ್​ ಸಿಂಗ್ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ!

Share This Article

ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್​ ಇರಬಹುದು!!

ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…