More

    ಐಎಎಸ್​ ಅಧಿಕಾರಿಗಳು vs ರಾಜಕಾರಣಿಗಳು: ರೋಹಿಣಿ ಸಿಂಧೂರಿ, ಮನೀಶ್​ ಮೌದ್ಗಿಲ್ ವಿರುದ್ಧ ವಾಗ್ದಾಳಿ

    ಮೈಸೂರು: ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಾರಾ ಮಹೇಶ್​ರನ್ನು ಹಣಿಯಲು ಮೈಸೂರು ಭೂ ಅಕ್ರಮ ಮರು ತನಿಖೆಗೆ ಆದೇಶದ ಮಾಡಿದ ಬೆನ್ನಲ್ಲೇ ಐಎಎಸ್​ ಅಧಿಕಾರಿಗಳ ವಿರುದ್ಧ ರಾಜಕಾರಣಿಗಳು ಒಂದಾಗಿದ್ದು, ಇದೀಗ ಮೈಸೂರಿನಲ್ಲಿ ರಾಜಕಾರಣಿಗಳು vs ಐಎಎಸ್​ ಅಧಿಕಾರಿಗಳ ವಿರುದ್ಧ ಶೀತಲ ಸಮರ ಏರ್ಪಟ್ಟಿದೆ.

    ಜೆಡಿಎಸ್​ ಶಾಸಕ ಸಾ.ರಾ.ಮಹೇಶ್ ಪರ ಬ್ಯಾಟ್​ ಬೀಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಐಎಎಸ್​ ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ. ಮರು ತನಿಖೆ ಮಾಡಿಸಲು ಮನೀಶ್ ಮೌದ್ಗಿಲ್​ಗೆ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನೆ ಮಾಡುವ ಮೂಲಕ ಸರ್ವೇ ಇಲಾಖೆ ಆಯುಕ್ತ ಮನೀಶ್​ ಮೌದ್ಗಿಲ್ ವಿರುದ್ಧ ಸಚಿವ ಸೋಮಶೇಖರ್​ ಕಿಡಿ ಕಾರಿದ್ದಾರೆ.

    ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆದ ನಂತರವೂ ಮತ್ತೊಂದು ತನಿಖೆ ಯಾಕೆ? ಐಎಎಸ್ ಅಧಿಕಾರಿಗಳು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿರುವು ಸೋಮಶೇಖರ್​, ಅಧಿಕಾರಿಗಳು ಆರೋಪ ಮಾಡಿದರೆ ರಾಜಕಾರಣಿಗಳು ಭ್ರಷ್ಟರು. ರಾಜಕಾರಣಿಗಳ ಮೇಲೆ ಆರೋಪ ಮಾಡಿದರೆ ಅವರು ಪ್ರಾಮಾಣಿಕರಾ ಎಂದು ಪ್ರಶ್ನಿಸುವ ಮೂಲಕ ರೋಹಿಣಿ ಸಿಂಧೂರಿ ಹಾಗೂ ಮನೀಶ್ ಮೌದ್ಗಿಲ್ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದರು.

    ಭೂ ಅಕ್ರಮ ಮರು ತನಿಖಾ ಆದೇಶ
    ಸಾರಾ ಮಹೇಶ್​ ವಿರುದ್ಧ ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಆಯ್ತು ಭೂ ಅಕ್ರಮ ಆರೋಪ ಮಾಡಿದ್ದರು. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಸಾರಾ ಚೌಲ್ಟ್ರಿಯನ್ನು ನಿರ್ಮಿಸಲಾಗಿದೆ ಎಂದು ಸಿಂಧೂರಿ ಆರೋಪ ಮಾಡಿದ್ದರು. ಇದಾದ ಬಳಿಕ ಸಾರಾ ಮಹೇಶ್​ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಪ್ರತಿಭಟನೆಗೆ ಕುಳಿತಿದ್ದರು. ಒಂದಿಂಚು ಭೂಮಿಯನ್ನು ಆಕ್ರಮಿಸಿಕೊಂಡಿದ್ದರೆ, ಇಡೀ ಚೌಲ್ಟ್ರಿಯನ್ನೇ ಬಿಟ್ಟು ಕೊಡುತ್ತೇನೆಂದು ಸವಾಲು ಹಾಕಿದ್ದರು. ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ತನಿಖೆ ನಡೆದು ಸಾರಾ ಮಹೇಶ್​ಗೆ ಕ್ಲೀನ್​ ಚಿಟ್​ ನೀಡಲಾಗಿತ್ತು. ಇದಾದ ಬಳಿಕ ಪ್ರಕರಣ ತಣ್ಣಗಾಗಿತ್ತು, ಇದೀಗ ಸರ್ವೆ ಇಲಾಖೆ ಆಯುಕ್ತರಾಗಿರುವ ಮನೀಶ್ ಮುದ್ಗಲ್ ಅವರು ಭೂ ಅಕ್ರಮದ ವಿರುದ್ಧ ಮರು ತನಿಖೆಗೆ ಆದೇಶ ಮಾಡಿರುವುದು ಸಾ.ರಾ.ಮಹೇಶ್ ಆಕ್ರೋಶಕ್ಕೆ ಕಾರಣವಾಗಿದೆ.

    ಸಾರಾ ಮಹೇಶ್​ ಕೆಂಡಾಮಂಡಲ
    ಮೈಸೂರು ಭೂ ಅಕ್ರಮ ಮರು ತನಿಖಾ ಆದೇಶಕ್ಕೆ ಕೆಂಡಾಮಂಡಲರಾಗಿರುವ ಸಾರಾ ಮಹೇಶ್​, ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಮನೀಶ್​ ಮುದ್ಗಲ್​ ವಿರುದ್ಧ ವಾಗ್ದಾಳಿ ನಡೆಸಿದರು. ನೀನು ಸರ್ವೇ ಕಮಿಷನರ್ ಆದ ತಕ್ಷಣ ರಾಜ್ಯಕ್ಕೆ ಸುಪ್ರೀಮಾ? ತನಿಖೆ ಆದೇಶಕ್ಕೂ ಮುನ್ನ ಡಿಸಿಯಿಂದ ಮಾಹಿತಿ ಪಡೆಯಬೇಕಿತ್ತು ಎಂದು ತಾಕೀತು ಮಾಡಿದರು. ರೋಹಿಣಿ ಸಿಂಧೂರಿ ಹಾಗೂ ಮನೀಶ್ ಮುದ್ಗಿಲ್ ತುಂಬಾ ಹತ್ತಿರ ಎಂದು ಹೇಳಿದರು. ನಾನು ಯಾವುದೇ ಭೂ ಒತ್ತುವರಿ ಮಾಡಿಲ್ಲ. ಈ ಹಿಂದೆ ತನಿಖೆ ಮಾಡಿ ಒತ್ತುವರಿ ಆಗಿಲ್ಲ ಅಂತ ಅಧಿಕಾರಿಗಳು ಹೇಳಿದ್ದಾರೆ. ನಾನೀಗ ಭೂಮಿನ ಟ್ರ್ಯಾಲಿ ತೆಗೆದುಕೊಂಡು ಎಳೆದುಬಿಟ್ಟಿದ್ದೀನಾ? ಎಂದು ಮರು ತನಿಖೆ ಆದೇಶಕ್ಕೆ ಆಕ್ರೋಶ ಹೊರಹಾಕಿದರು. (ದಿಗ್ವಿಜಯ ನ್ಯೂಸ್​)

    ರೋಹಿಣಿ ಸಿಂಧೂರಿ- ಮನೀಶ್ ಮೌದ್ಗಿಲ್ ಇಬ್ಬರೂ ತುಂಬಾ ತುಂಬಾ ಹತ್ತಿರ… ಎನ್ನುತ್ತಲೇ ಸಾ.ರಾ.ಮಹೇಶ್ ಕಿಡಿ

    ಸಿಂಧೂರಿ ವಿರುದ್ಧ ಮತ್ತೆ ಗುಡುಗಿದ ಸಾರಾ ಮಹೇಶ್​! ಆಂಧ್ರ ಅಧಿಕಾರಿಗಳ ಮನೆಗೆ ಹೋಯ್ತಾ 6 ಕೋಟಿ ರೂ.?

    ಹಾಸ್ಟೆಲ್​ ರಹಸ್ಯ ಮುಚ್ಚಿಕೊಳ್ಳಲು ಯುವತಿಯ ನಾಟಕ: ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಯತ್ನ ಕೇಸ್​ಗೆ ಟ್ವಿಸ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts