More

    ದೇವರ ಗೂಳಿಯನ್ನು ಕಸಾಯಿಖಾನೆಗೆ ಸಾಗಿಸಿರುವ ಪ್ರಕರಣ: ನಂಜನಗೂಡಿನಲ್ಲಿ ಗೋಶಾಲೆ ಆರಂಭಕ್ಕೆ ಹಕ್ಕೊತ್ತಾಯ

    ಮೈಸೂರು: ದೇವರ ಗೂಳಿಯನ್ನು ಕಸಾಯಿಖಾನೆಗೆ ಸಾಗಿಸಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಗೋಶಾಲೆ ಆರಂಭಿಸಲು ಹಕ್ಕೊತ್ತಾಯ ಕೇಳಿಬಂದಿದೆ.

    ಶ್ರೀಕಂಠೇಶ್ವರ ದೇವಾಲಯದ ವತಿಯಿಂದ ಗೋಶಾಲೆ ಆರಂಭಿಸುವಂತೆ ನಂಜನಗೂಡು ನಾಗರಿಕರು ಮತ್ತು ಹಿಂದೂಪರ ಸಂಘಟನೆಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

    ಗೋಶಾಲೆಗಾಗಿ ದೇವಾಲಯದ ಮುಂದೆ ಹರಕೆಯ ಹಣ ಬೇಕು ಹರಕೆಯ ಗೂಳಿ ಯಾಕೆ ಬೇಡ? ಎಂಬ ಸಾಲಿನೊಂದಿಗೆ ಸಹಿ ಸಂಗ್ರಹ ಅಭಿಯಾನ ಕೂಡ ನಡೆದಿದೆ. ಹರಕೆಯ ಗೂಳಿಗಳ ರಕ್ಷಣೆಗಾಗಿ ಗೋಶಾಲೆ ಬೇಕೇ ಬೇಕು. ದೇವಾಲಯದಲ್ಲಿ ಹಣ, ಸಿಬ್ಬಂದಿ, ಜಾಗ ಎಲ್ಲವೂ ಇದೆ. ಆದ್ದರಿಂದ ದೇವರ ಹರಕೆ ಗೂಳಿಗಳ ರಕ್ಷಣೆಗೆ ಮುಂದಾಗಲಿ. ದೇವಾಲಯದ ವತಿಯಿಂದಲೇ ಗೋಶಾಲೆ ಆರಂಭಿಸಿ, ಭಕ್ತರ ಭಾವನೆವನ್ನು ಕಾಪಾಡಲಿ ಎಂದು ಹಿಂದು ಸಂಘಟನೆ ಮನವಿ ಮಾಡಿದೆ.

    ಹರಕೆ ಗೋವುಗಳ ಸಂರಕ್ಷಣೆ ಆಗಬೇಕಿದೆ. ಮುಂದೆ ಆಗುವ ಕೋಮು ಸಂಘರ್ಷಗಳನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಿ. ಮತಾಂಧರು ರಾತ್ರೋರಾತ್ರಿ ಕಸಾಯಿ ಖಾನೆಗೆ ದೇವರ ಗೂಳಿಗಳನ್ನು ಕದ್ದು ಸಾಗಿಸುತ್ತಿದ್ದಾರೆ. ಇದರಿಂದ ಭಕ್ತರ ಧಾರ್ಮಿಕ ಭಾವನೆ ಘಾಸಿಗೊಳಿಸುತ್ತಿದೆ. ಈ ಕೃತ್ಯದ ವಿರುದ್ಧ ಹಲವು ಬಾರಿ ಭಕ್ತರು ಹಾಗೂ ಹಿಂದೂಪರ ಸಂಘಟನೆ ಧ್ವನಿ ಎತ್ತಿವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.

    ಗೋವು ಕಳ್ಳಸಾಗಾಣೆ ಹೀಗೆ ಮುಂದುವರಿದರೆ ಮುಂದೆ ಕೋಮು ಸಂಘರ್ಷಕ್ಕೂ ಕಾರಣವಾಗಲಿದೆ. ಆದ್ದರಿಂದ ಗೋಶಾಲೆ ನಿರ್ಮಿಸಬೇಕಾಗಿ ಸವಿನಯ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ನಂಜನಗೂಡು ನಾಗರಿಕರು ಮತ್ತು ಹಿಂದೂಪರ ಸಂಘಟನೆಗಳು ಕೇಳಿಕೊಂಡಿವೆ. (ದಿಗ್ವಿಜಯ ನ್ಯೂಸ್​)

    ಕಮಲ್​ ಹಾಸನ್​ ವಿರುದ್ಧ ಗಂಭೀರ ಆರೋಪ ಮಾಡಿದ ಖ್ಯಾತ ಕಿರುತೆರೆ ಕಲಾವಿದೆ: ಅಭಿಮಾನಿಗಳಿಗೆ ಶಾಕ್​!

    ಸಾಲಕೂಪದಲ್ಲಿ ಲಂಕಾ ಜನರಿಗೆ ಅರೆಹೊಟ್ಟೆ

    ಧನಂಜಯ್ ನಿಜಕ್ಕೂ ನಟರಾಕ್ಷಸ!; ‘ಮಾನ್ಸೂನ್ ರಾಗ’ ಟ್ರೇಲರ್ ಲಾಂಚ್​ನಲ್ಲಿ ರಚಿತಾ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts