More

    ಮತ್ತೆ “ವಚನ ಭ್ರಷ್ಟ” ಪಕ್ಷವಾದ ಜೆಡಿಎಸ್: ರಾಜಕೀಯ ದಾಳವಾಗಿ ಬಳಸಿಕೊಂಡ ಜೆಡಿಎಸ್ ವರಿಷ್ಠರು

    ಮೈಸೂರು: ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನ ನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದರೆ, ಇದೇ ಸಂದರ್ಭದಲ್ಲಿ ಜೆಡಿಎಸ್​ ಪಕ್ಷ ಮತ್ತೆ ವಚನ ಭ್ರಷ್ಟ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದೆ.

    ಮೈಸೂರು ಮೇಯರ್ ಚುನಾವಣೆಯಲ್ಲಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಬಿಜೆಪಿಗೆ ಜೆಡಿಎಸ್​ ಸಹಕಾರ ನೀಡಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಲೋಕಾಪವಾದ ತಪ್ಪಿಸಿಕೊಳ್ಳಲು ಮಾತ್ರ ತಟಸ್ಥ ನಿಲುವಿನ ನೆಪ ಹೇಳಿದೆ. ಆದರೆ, ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ ಆಯ್ಕೆಗೆ ಪರೋಕ್ಷ ಸಹಕಾರ ನೀಡಿದೆ ಎಂದು ಹೇಳಲಾಗುತ್ತಿದೆ.

    ಬಿಜೆಪಿಗೆ ಸಹಕಾರ ನೀಡುವ ಮೂಲಕ ಕಾಂಗ್ರೆಸ್ ಜತೆಗಿನ ಮೂರು ವರ್ಷದ ಮೈತ್ರಿಯನ್ನು ಜೆಡಿಎಸ್​ ಮುರಿದುಕೊಂಡಿದೆ. 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಏರ್ಪಟ್ಟಿತ್ತು. ಜೆಡಿಎಸ್‌ಗೆ ಮೂರು ಅವಧಿಯ ಮೇಯರ್, ಕಾಂಗ್ರೆಸ್‌ಗೆ ಎರಡು ಅವಧಿಯ ಮೇಯರ್ ಹುದ್ದೆ ಹಂಚಿಕೆಯಾಗಿತ್ತು. ಮೈತ್ರಿ ಮಾತುಕತೆಗೆ ಮನ್ನಣೆ ಕೊಡದೆ ಅವಕಾಶವಾದಿ ರಾಜಕಾರಣ ಮಾಡಿದೆ ಎಂಬ ಅಪವಾದ ಜೆಡಿಎಸ್ ಮೇಲಿದೆ.

    ನಿನ್ನೆ ಮೈಸೂರು ಮೇಯರ್​ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನಾಯಕರ ನಡೆ ಖಂಡಿಸಿ ಕಾಂಗ್ರೆಸ್ ನಾಯಕರು ಸಭಾ ತ್ಯಾಗ ಮಾಡಿದರು. ಜೆಡಿಎಸ್ ನಾಯಕರು ನಮ್ಮ ಋಣ ತೀರಿಸಲಿಲ್ಲ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಯ್ತು ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ಹೊರಹಾಕಿದ್ದಾರೆ.

    ಈ ಹಿಂದೆ 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಜೆಡಿಎಸ್​ – ಬಿಜೆಪಿ ಸಮ್ಮಿಶ್ರ ಸರಕಾರ ರಚನೆಯ ವೇಳೆ, 20 ತಿಂಗಳು ಕುಮಾರಸ್ವಾಮಿ ಮುಖ್ಯಮಂತ್ರಿ, ಅದಾದ ನಂತರ 20 ತಿಂಗಳು ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಎಂಬ ಕರಾರಿತ್ತು. ಆದರೆ 20 ತಿಂಗಳು ಕಳೆಯುತ್ತಿದ್ದಂತೆ, ಕುಮಾರಸ್ವಾಮಿ ಅಧಿಕಾರ ಬಿಟ್ಟು ಕೊಡಲಿಲ್ಲ. ಬಿಜೆಪಿಗೆ ನೀಡಿದ್ದ ಬೆಂಬಲ ಹಿಂಪಡೆದರು. ಅದರೊಂದಿಗೆ ವಚನ ಭ್ರಷ್ಟ ಎಂಬ ಕಳಂಕವನ್ನು ಕುಮಾರಸ್ವಾಮಿ ಪಡೆದರು. ಇದೀಗ ಮತ್ತೆ ಜೆಡಿಎಸ್​ಗೆ ಅದೇ ಪಟ್ಟ ನೀಡಲಾಗಿದೆ. (ದಿಗ್ವಿಜಯ ನ್ಯೂಸ್​)

    ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ 9 ನ್ಯಾಯಮೂರ್ತಿಗಳ ಹೆಸರಿಗೆ ಕೇಂದ್ರದ ಅನುಮೋದನೆ

    ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನರ್ ವರ್ಗಾವಣೆ: ಸೈಬರಾಬಾದ್​ ಪೊಲೀಸ್​ ಆಯುಕ್ತರಾಗಿ ಸ್ಟೆಫೆನ್​ ರವೀಂದ್ರ ನೇಮಕ!

    8 ತೊಲೆ ಬಂಗಾರವನ್ನು ಮರಳಿಸಿ ಮಹಿಳೆ ಪಾಲಿಗೆ ಬಂಗಾರದ ಮನುಷ್ಯನಾದ ಆಟೋ ಚಾಲಕ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts