More

    ವೇಗದ ಮಿತಿ ಉಲ್ಲಂಘಿಸಿದ ಕಾರು ಮಾಲೀಕನಿಗೆ ವಿಧಿಸಿದ ದಂಡದ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ!

    ಕೊಯಿಕ್ಕೋಡ್​: ಅನೇಕ ಬಾರಿ ವೇಗದ ಮಿತಿಯನ್ನು ಮೀರಿದ್ದಕ್ಕೆ ಕಣ್ಣೂರು ಮೂಲದ ವ್ಯಕ್ತಿಯೊಬ್ಬನಿಗೆ ಕೇರಳದ ಮೋಟಾರು ವಾಹನ ಇಲಾಖೆ ಬರೋಬ್ಬರಿ 1,33,500 ರೂಪಾಯಿ ದಂಡ ವಿಧಿಸಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

    ಕಣ್ಣೂರು ಮೂಲದ ನಿವಾಸಿ ಭಾರೀ ದಂಡದಿಂದಾಗಿ ಕಂಗಾಲಾಗಿದ್ದಾರೆ. ಅವರ ಎಸ್​ಯುವಿ ಕಾರು ಅನೇಕ ಬಾರಿ ವೇಗದ ಮಿತಿಯನ್ನು ಮೀರಿದೆ. ಕೊಯಿಕ್ಕೋಡ್​ ಉತ್ತರ ವಲಯದಲ್ಲಿರುವ ಕಣ್ಗಾವಲು ಕ್ಯಾಮೆರಾದಲ್ಲಿ ಸುಮಾರು 89 ಬಾರಿ ಎಸ್​ಯುವಿ ಕಾರು ಸೆರೆಯಾಗಿದೆ. ಕಳೆದ 2022ರ ಜನವರಿಯೊಂದರಲ್ಲೇ ಇದೇ ಕಾರಣಕ್ಕೆ ಏಳು ಬಾರಿ ದಂಡ ವಿಧಿಸಲಾಗಿದೆ.

    ಕಳೆದ ಕೆಲ ದಿನಗಳ ಹಿಂದೆ ಎಸ್​ಯುವಿ ವಾಹನವು ಅಪಘಾತಕ್ಕೀಡಾದ ನಂತರ ವೇಗದ ಮಿತಿಯ ನಿಯಮ ಉಲ್ಲಂಘಟನೆ ಪ್ರಕರಣಗಳ ಸಂಖ್ಯೆ ಸಂಖ್ಯೆ ಬೆಳಕಿಗೆ ಬಂದಿದೆ. ದಂಡವನ್ನು ಪಾವತಿಸದ ಕಾರಣ ಮೋಟಾರು ವಾಹನ ಇಲಾಕೆ ಎಸ್​ಯುವಿಯನ್ನು ಕಪ್ಪುಪಟ್ಟಿಗೆ ಸೇರಿಸಿದೆ ಎಂದು ತಿಳಿದುಬಂದಿದೆ. ಇದರಿಂದ ಎಚ್ಚೆತ್ತ ಕಾರಿನ ಮಾಲಿಕ ಬಳಿಕ ಕೊಯಿಕ್ಕೋಡ್ ಆರ್‌ಟಿಒ ಕಚೇರಿಗೆ ತೆರಳಿ ದಂಡ ಪಾವತಿಸಿದ್ದಾರೆ. (ಏಜೆನ್ಸೀಸ್​)

    ದೊಡ್ಡ ಮಟ್ಟಕ್ಕೆ ಹರಡಬೇಡಿ: ಹಿಜಾಬ್​ ವಿವಾದ ಕುರಿತ ತುರ್ತು ವಿಚಾರಣೆ ತಿರಸ್ಕರಿಸಿದ ಸುಪ್ರೀಂಕೋರ್ಟ್​

    ಹಿಜಾಬ್​ ವಿವಾದ: ಸ್ಫೋಟಕ ರಹಸ್ಯ ಬಯಲು, ಎರಡು ತಿಂಗಳ ಹಿಂದೆಯೇ ನಡೆದಿತ್ತು ಮಾಸ್ಟರ್​ ಪ್ಲ್ಯಾನ್…

    ಜಿ‌ಟಿಡಿ ಹಣಿಯಲು ಎಚ್​ಡಿಕೆ ಮಾಸ್ಟರ್​ ಪ್ಲ್ಯಾನ್? ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಾನೇ ಬರುವೆ ಎಂದ ದಳಪತಿ

    ಬೆಂಗಳೂರಲ್ಲಿ ಒಣ ಕೊಂಬೆ ಬಿದ್ದು ಕೋಮಾದಲ್ಲಿದ್ದ ಬಾಲಕಿ ಸಾವು: 702 ದಿನ ಸತತ ಚಿಕಿತ್ಸೆಯ ನಂತರವೂ ಬದುಕಲಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts