More

    ಅತ್ಯಾಚಾರಕ್ಕೆ ಕಡಿವಾಣ ಹಾಕಲು ಮುಂಬೈ ಪೊಲೀಸರ ಮೆಗಾ ಪ್ಲಾನ್ ಹೀಗಿದೆ ನೋಡಿ..!

    ಮುಂಬೈ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನೆನಪಿಸುವ ರೀತಿಯಲ್ಲೇ ಇತ್ತೀಚೆಗೆ ಮುಂಬೈನಲ್ಲಿ ನಡೆದ ಘಟನೆ ವಾಣಿಜ್ಯ ನಗರಿ ಜನರನ್ನು ಆಘಾತಕ್ಕೆ ದೂಡಿದೆ. ಸಕಿ ನಕ ಪ್ರದೇಶದಲ್ಲಿ ನಡೆದ ಅತ್ಯಾಚಾರ-ಕೊಲೆ ಪ್ರಕರಣದ ಬೆನ್ನಲ್ಲೇ ಮಹಿಳೆಯರ ಸುರಕ್ಷತೆಗಾಗಿ ಮುಂಬೈನ ಪೊಲೀಸ್​ ಆಯುಕ್ತ ಹೇಮಂತ್ ನಾಗ್ರಾಲೆ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ.

    ಘಟನೆ ಹಿನ್ನೆಲೆ
    ಈ ತಿಂಗಳ ಆರಂಭದಲ್ಲಿ ಸಕಿ ನಕ ಪ್ರದೇಶದಲ್ಲಿ ಟೆಂಪೋ ಒಂದರಲ್ಲಿ 34 ವರ್ಷದ ಮಹಿಳೆಯನ್ನು ಕೂಡಿಟ್ಟು ಅತ್ಯಾಚಾರ ಎಸಗಲಾಗಿದೆ. ಅಲ್ಲದೆ, ಆಕೆಯ ಜನನಾಂಗಕ್ಕೆ ಕಬ್ಬಿಣದ ಸಲಾಕೆಯನ್ನು ತೂರಿ ವಿಕೃತಿಯನ್ನು ಮರೆಯಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕಳೆದ ಶನಿವಾರ ಕೊನೆಯುಸಿರೆಳೆದಿದ್ದಳು.

    ಈ ಘಟನೆ ಬಗ್ಗೆ ಮುಂಬೈನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಸಿಎಂ ಉದ್ಧವ್​ ಠಾಕ್ರೆ ಮುಂಬೈ ಪೊಲೀಸ್​ ಉನ್ನತಾಧಿಕಾರಿಗಳಿಗೆ ಸಮನ್ಸ್​ ನೀಡಿ 30 ದಿನಗಳ ಒಳಗೆ ಚಾರ್ಜ್​ಶೀಟ್​ ಸಲ್ಲಿಸಬೇಕೆಂದು ಸೂಚನೆ ನೀಡಿದ್ದಾರೆ. ಅಲ್ಲದೆ, ಈ ಪ್ರಕರಣವನ್ನು ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

    ಇದರ ನಡುವೆ ಮುಂಬೈ ಪೊಲೀಸ್​ ಆಯುಕ್ತರು ಮಹಿಳೆಯರ ಸುರಕ್ಷತೆಗಾಗಿ ಕೆಲವೊಂದು ಕ್ರಮಗಳನ್ನು ಪ್ರಸ್ತಾಪಿಸಿದ್ದು, ಅವುಗಳು ಈ ಕೆಳಕಂಡಂತಿದೆ…
    1. ಮುಂಬೈನ ಎಲ್ಲ ಪೊಲೀಸ್ ಠಾಣೆಗಳು ತಮ್ಮ ವ್ಯಾಪ್ತಿಯಲ್ಲಿ ವಾಸವಿರುವ ಅಥವಾ ಕೆಲಸ ಮಾಡುತ್ತಿರುವ ಲೈಂಗಿಕ ಅಪರಾಧಿಗಳ ಪಟ್ಟಿಯನ್ನು ಮಾಡಬೇಕು. ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಆರೋಪಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

    2. ನಿರ್ಜನ ಪ್ರದೇಶಗಳಲ್ಲಿ ಮುಂಬೈ ಮಹಾನಗರ ಪಾಲಿಕೆ ಸಹಕಾರದೊಂದಿಗೆ ಸಿಸಿಟಿವಿ ಕ್ಯಾಮರಾ ಮತ್ತು ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಮಾಡಬೇಕು. ಗಸ್ತು ತಿರುಗುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಪೊಲೀಸರು ಕ್ಯೂಆರ್ ಕೋಡ್‌ಗಳನ್ನು ನಿರ್ಜನ ಪ್ರದೇಶಗಳಲ್ಲಿ ಹಾಕಬೇಕು.

    3. ರಾತ್ರಿ ಗಸ್ತು ಸಮಯದಲ್ಲಿ ಮಹಿಳೆ ಒಬ್ಬಂಟಿಯಾಗಿ ಕಂಡುಬಂದರೆ, ಮಹಿಳಾ ಪೊಲೀಸ್ ಅಧಿಕಾರಿಗಳು ಆಕೆಗೆ ಅಗತ್ಯವಿರುವ ಯಾವುದೇ ಸಹಾಯವನ್ನು ಒದಗಿಸಬೇಕು. ಅಗತ್ಯವಿದ್ದರೆ, ಪೊಲೀಸರು ಆಕೆಯ ಸುರಕ್ಷತೆಗಾಗಿ ವ್ಯವಸ್ಥೆ ಮಾಡಬೇಕು.

    4. ಮಹಿಳೆಯ ವಿರುದ್ಧದ ಯಾವುದೇ ಅಪರಾಧದ ಬಗ್ಗೆ ಕಂಟ್ರೋಲ್ ರೂಂ ಅಥವಾ ಪೊಲೀಸ್ ಠಾಣೆಗೆ ಯಾವುದೇ ಕರೆಗಳು ಬಂದರೆ ತಕ್ಷಣವೇ ಸ್ವೀಕರಿಸಬೇಕು. ಕಂಟ್ರೋಲ್ ರೂಂ ಅಧಿಕಾರಿ ಇಂತಹ ಪ್ರಕರಣಗಳಿಗೆ ವಿಶೇಷ ಗಮನ ನೀಡಬೇಕು.

    5. ಸಂಚಾರಿ ಪೊಲೀಸ್ ವ್ಯಾನ್ ಅನ್ನು ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ನಿಯೋಜಿಸಬೇಕು. ಈ ವ್ಯಾನ್‌ಗಳಲ್ಲಿನ ಅಧಿಕಾರಿಗಳು ಏಕಾಂಗಿಯಾಗಿ ಪ್ರಯಾಣಿಸುವ ಮಹಿಳೆಯರು ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಸಹಾಯ ಮಾಡಬೇಕು ಮತ್ತು ಅವರಿಗೆ ಸಾರಿಗೆ ಸಾಧನಗಳನ್ನು ಒದಗಿಸಬೇಕು ಮತ್ತು ಚಾಲಕ ಮತ್ತು ಮಹಿಳೆಯರನ್ನು ಸಾಗಿಸುವ ವಾಹನದ ವಿವರಗಳನ್ನು ನಮೂದಿಸಬೇಕು.

    6. ಮಹಿಳೆಯರ ವಾಷ್ ರೂಂ ಇರುವ ಸ್ಥಳಗಳ ಬಳಿ ಮೊಬೈಲ್ ಪೊಲೀಸ್ ವ್ಯಾನ್ ಗಳನ್ನು ಕೂಡ ನಿಯೋಜಿಸಬೇಕು. ಇಂತಹ ಪ್ರದೇಶಗಳಲ್ಲಿ ನಿಯಮಿತ ಅವಧಿಯಲ್ಲಿ ಗಸ್ತು ತಿರುಗಬೇಕು.

    7. ನಗರದಲ್ಲಿ ಟೆಂಪೋಗಳು, ಟ್ರಕ್‌ಗಳು ಮತ್ತು ಪಿಕ್ ಅಪ್ ವ್ಯಾನ್‌ಗಳಂತಹ ಕೈಬಿಟ್ಟ ವಾಹನಗಳ ಮಾಲೀಕರು ಅಲ್ಲಿಯೇ ಇರಬೇಕು. ಮಾಲೀಕರು ಕಂಡುಬಂದಿಲ್ಲವಾದರೆ, ಅಂತಹ ವಾಹನಗಳನ್ನು ತಕ್ಷಣ ವಶಪಡಿಸಿಕೊಳ್ಳಬೇಕು.

    ಇದಿಷ್ಟು ಮುಂಬೈ ಪೊಲೀಸರು ಮಹಿಳಾ ಸುರಕ್ಷತೆಗಾಗಿ ತೆಗೆದುಕೊಂಡಿರುವ ಕ್ರಮಗಳಾಗಿದ್ದು, ಆದಷ್ಟು ಬೇಗ ಇದು ಜಾರಿಗೆ ಬರಲು ಕ್ರಮ ಕೈಗೊಳ್ಳಲಾವುದು ಎಂದು ಪೊಲೀಸ್​ ಆಯುಕ್ತರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಓದಿನಲ್ಲಿ ಮುಂದಿದ್ದ ಚಿನ್ನದ ಪದಕ ವಿಜೇತೆ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ: ವಿದ್ಯಾರ್ಥಿನಿಯ ದುಡುಕಿನ ನಿರ್ಧಾರ

    ಸಿಎ | ಮಂಗಳೂರಿನ ರುಥ್ ದೇಶಕ್ಕೇ ಫಸ್ಟ್; ಹೊಸ ಸಿಲಬಸ್​ನಲ್ಲಿ ಬೆಂಗಳೂರಿನ ಸಾಕ್ಷಿ 3ನೇ ರ್ಯಾಂಕ್

    ಸೂಪರ್ ಫೀಸ್ ಕೊಟ್ರೆ ಸಿಗಲಿದೆ ಅಮೆರಿಕ ಗ್ರೀನ್ ಕಾರ್ಡ್; ಭಾರತೀಯರ ಕನಸು ನನಸಾಗಿಸಲಿದೆ ಮಸೂದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts