More

    ಬೆಳಕಿನ ಹಬ್ಬದಂದೇ ಕ್ರೇಜಿಸ್ಟಾರ್ ಪುತ್ರನ ಅದ್ಧೂರಿ ಎಂಟ್ರಿ: ದೀಪಾವಳಿಗೆ “ಮುಗಿಲ್ ಪೇಟೆ” ಬಿಡುಗಡೆ

    ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್​ ನಾಯಕನಾಗಿ ನಟಿಸಿರುವ “ಮುಗಿಲ್ ಪೇಟೆ” ಚಿತ್ರದ ಪ್ರಥಮಪ್ರತಿ ಸದ್ಯದಲ್ಲೇ ಸಿದ್ಧವಾಗಲಿದೆ. ಚಿತ್ರ ದೀಪಾವಳಿ ಹಬ್ಬಕ್ಕೆ ತೆರೆಗೆ ಬರಲಿದೆ. “ಮುಗಿಲ್ ಪೇಟೆ ” ಅದ್ದೂರಿಯಾಗಿ ಮೂಡಿಬಂದಿದ್ದು, ಸಿನಿರಸಿಕರಿಗೆ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಲಿದೆ.

    ಈ ಚಿತ್ರದ ಟ್ರೇಲರ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. ಮನು ಅವರಿಗೆ ನಾಯಕಿಯಾಗಿ ಕಯಾದು ಲೋಹರ್ ನಟಿಸಿದ್ದಾರೆ. ರಿಷಿ, ಅವಿನಾಶ್, ತಾರಾ ಅನುರಾಧ, ಸಾಧುಕೋಕಿಲ, ರಂಗಾಯಣ ರಘು ಹೀಗೆ ಹೆಸರಾಂತ ಕಲಾವಿದರು “ಮುಗಿಲ್ ಪೇಟೆ” ಯಲ್ಲಿ ಅಭಿನಯಿಸಿದ್ದಾರೆ.

    ಭರತ್ ಎಸ್ ನಾವುಂದ ರಚನೆ ಹಾಗೂ ನಿರ್ದೇಶನದ ಈ ಚಿತ್ರವನ್ನು ಮೋತಿ ಮೂವೀ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿದ್ದಾರೆ. ಈ ಹಿಂದೆ “ಅಡಚಣೆಗಾಗಿ ಕ್ಷಮಿಸಿ” ಚಿತ್ರ ನಿರ್ದೇಶಿಸಿದ್ದ ಭರತ್ ಅವರಿಗೆ ಇದು ಎರಡನೇ ಚಿತ್ರ.

    ಆರು‌ ಸುಮಧುರ ಹಾಡುಗಳಿರುವ ಈ‌ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ರವಿವರ್ಮ (ಗಂಗು) ಅವರ ಛಾಯಾಗ್ರಹಣ “ಮುಗಿಲ್ ಪೇಟೆ” ಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.‌

    ಅರ್ಜುನ್ ಕಿಟ್ಟು ಸಂಕಲನ, ಡಾ||ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನ, ಹಾಗೂ ಸತೀಶ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಹನುಮಂತು ನಿರ್ಮಾಣ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

    ಬಾಯ್​ಫ್ರೆಂಡ್​ ಜತೆ ಒಂದೇ ಮನೆಯಲ್ಲಿ ವಾಸವಿದ್ದ ಕಿರಿಯ ಕಲಾವಿದೆ ಆತ್ಮಹತ್ಯೆ: ಕಾರಣ ಬಿಚ್ಚಿಟ್ಟ ಸಹೋದರಿ

    ಡೆತ್​ನೋಟ್​ ಬರೆದಿಟ್ಟು ಬೆಂಗಳೂರು ಸಮೀಪ ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ

    ನಾನು ಕನ್ಯತ್ವ ಕಳೆದುಕೊಂಡಿದ್ದೇನೆ: 7 ವರ್ಷದ ಸಂಬಂಧದ ಬಗ್ಗೆ ಬೋಲ್ಡ್​ ಮಾತುಗಳನ್ನಾಡಿದ ಟಾಲಿವುಡ್​ ಬ್ಯೂಟಿ

    ಡಿವೋರ್ಸ್​ ವಿಚಾರವಾಗಿ ಕೊನೆಗೂ ಮೌನ ಮುರಿದ ಸಮಂತಾ: ಆದ್ರೆ ಸೌತ್​ ಬ್ಯೂಟಿ ಹೇಳಿಕೆಯಿಂದ ಫ್ಯಾನ್ಸ್​ ಕನ್ಫ್ಯೂಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts