More

    ಬಡವರಿಗೆ ಸಹಾಯ ಮಾಡುವಂತೆ 600 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸರ್ಕಾರಕ್ಕೆ ದಾನ ಕೊಟ್ಟ ವೈದ್ಯ!

    ಲಖನೌ: ಬಡ ಜನರಿಗೆ ಸಹಾಯ ಮಾಡುವಂತೆ ಹೇಳಿ ತಾನು ದುಡಿದ ಇಡೀ ಆಸ್ತಿಯನ್ನು ಮೊರಾದಬಾದ್​ ಮೂಲದ ವೈದ್ಯರೊಬ್ಬರು ಉತ್ತರ ಪ್ರದೇಶ ಸರ್ಕಾರಕ್ಕೆ ದಾನ ಮಾಡುವ ಮೂಲಕ ದೇಶದ ಜನತೆಯ ಗಮನ ಸೆಳೆದಿದ್ದಾರೆ.

    ಸುಮಾರು 600 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದಾನ ಮಾಡಿದ್ದಾರೆ. ಸುಮಾರು 50 ವರ್ಷಗಳಿಂದ ದುಡಿದ ಇಡೀ ಆಸ್ತಿಯನ್ನು ದಾನ ಮಾಡಿದ್ದಾರೆ. ಅಂದಹಾಗೆ ದಾನ ಮಾಡಿದ ವೈದ್ಯನ ಹೆಸರು ಡಾ. ಅರವಿಂದ್ ಕುಮಾರ್​​ ಗೋಯೆಲ್​.

    ಆಸ್ತಿ ದಾನ ಮಾಡಿದ ಬಳಿಕ ಮಾತನಾಡಿದ ಗೋಯೆಲ್​ ಅವರು ನಾನು ಈ ನಿರ್ಧಾರವನ್ನು 25 ವರ್ಷಗಳ ಹಿಂದೆಯೇ ತೆಗೆದುಕೊಂಡಿದ್ದೆ ಎಂದಿದ್ದಾರೆ.

    ಡಾ. ಗೋಯೆಲ್​ ಅವರು ಲಾಕ್​ಡೌನ್​ ಸಂದರ್ಭದಲ್ಲಿ ಮೊರಾದಾಬಾದ್​ನ ಸುಮಾರು 50 ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಜನರಿಗೆ ಆರೋಗ್ಯದ ಜೊತೆಗೆ ಅನೇಕ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರು. ಅಲ್ಲದೆ, ರಾಜ್ಯದಲ್ಲಿನ ಬಡ ಜನರಿಗೆ ಉಚಿತ ಶಿಕ್ಷಣ ಮತ್ತು ಉತ್ತಮ ಚಿಕಿತ್ಸೆ ವ್ಯವಸ್ಥೆಯನ್ನು ಮಾಡಿದ್ದಾರೆ.

    ಡಾ. ಗೋಯೆಲ್​ ಅವರು ನಾಲ್ಕು ಬಾರಿ ರಾಷ್ಟ್ರಪತಿಗಳಿಂದ ತಮ್ಮ ಸಮಾಜ ಸೇವೆಗಾಗಿ ಗೌರವವನ್ನು ಸ್ವೀಕರಿಸಿದ್ದಾರೆ. ಹಾಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಮಾಜಿ ರಾಷ್ಟ್ರಪತಿಗಳಾದ ಪ್ರಣಾಬ್​ ಮುಖರ್ಜಿ, ಪ್ರತಿಭಾ ಪಾಟೀಲ್​ ಮತ್ತು ಎಪಿಜೆ ಅಬ್ದುಲ್​ ಕಲಾಂ ಅವರಿಂದ ಗೌರವ ಸ್ವೀಕರಿಸಿದ್ದಾರೆ.

    ಇನ್ನು ಡಾ. ಗೋಯೆಲ್​ ಅವರ ವೈಯಕ್ತಿಕ ಜೀನವನ್ನು ನೋಡುವುದಾದರೆ, ಅವರಿಗೆ ಪತ್ನಿ ರೇಣು ಗೋಯೆಲ್​, ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳಿದ್ದಾರೆ. ಇದೀಗ ಗೋಯೆಲ್​ ಅವರ ನಡೆಗೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಾರ್ಥಕ ಬದಕು ಸಾಗಿಸಬೇಕು ಎಂದು ಜನರು ಕೊಂಡಾಡುತ್ತಿದ್ದಾರೆ. ಜನರ ಕಷ್ಟಗಳನ್ನು ಅರಿಯುವ ಇಂಥವರಿಂದ ಇನ್ನಷ್ಟು ಮಂದಿ ಬದಲಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಡಾ. ಗೋಯೆಲ್​ ಅವರು ದಾನ ಮಾಡಿರುವ ಆಸ್ತಿಯ ನೈಜ ಬೆಲೆಯನ್ನು ಲೆಕ್ಕಾಚಾರ ಮಾಡಲು ಐವರು ಸದಸ್ಯರ ಸಮಿತಿಯನ್ನು ರಚಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. (ಏಜೆನ್ಸೀಸ್​)

    ನೆಟ್ಟಿಗ ಕೇಳಿದ ತೀರಾ ಅಶ್ಲೀಲ ಪ್ರಶ್ನೆಗೆ ಖ್ಯಾತ ಕಿರುತೆರೆ ನಟಿ ಕೊಟ್ಟ ಬೋಲ್ಡ್​ ಉತ್ತರ ಹೀಗಿತ್ತು…

    ಚಿಕಿತ್ಸೆಗಾಗಿ ಅಮೆರಿಕದಿಂದ ಭಾರತಕ್ಕೆ ಏರ್​ಲಿಫ್ಟ್​: 26 ಗಂಟೆ ಪಯಣಕ್ಕೆ ಒಂದು ಕೋಟಿ ರೂ! ಇದ್ಯಾಕೆ ಅಂತೀರಾ?

    ಕೋಟಿ ಕೋಟಿ ಹಣ ಸಂಪಾದಿಸಲು ರಿಷಭ್​ ಪಂತ್​ಗೆ ಹೀಗೊಂದು ಸಲಹೆ ಕೊಟ್ಟ ಶೋಯೆಬ್​ ಅಖ್ತರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts