More

    ಆಗಾಗ ಮಕ್ಕಳ ಲೈಂಗಿಕ ಅಪರಾಧಿಯ ಭೇಟಿ: ಬಿಲ್​ಗೇಟ್ಸ್ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಪತ್ನಿ

    ನ್ಯೂಯಾರ್ಕ್​: ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮೈಕ್ರೋಸಾಫ್ಡ್​ ಸಹ-ಸಂಸ್ಥಾಪಕ ಬಿಲ್​ ಗೇಟ್ಸ್ ಬಗ್ಗೆ ಡಿವೋರ್ಸ್​ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಪತ್ನಿ ಮೆಲಿಂಡಾ ಫ್ರೆಂಚ್​ ಗೇಟ್ಸ್​, ಅಮೆರಿಕದ ಹಣಕಾಸುದಾರ ಹಾಗೂ ವಿಚಾರಣೆ ಸಂದರ್ಭದಲ್ಲಿ 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಲೈಂಗಿಕ ಅಪರಾಧಿ ಜೆಫ್ರಿ ಎಪ್​ಸ್ಟೀನ್​ನನ್ನು​ ಆಗಾಗ ಭೇಟಿ ಮಾಡುತ್ತಿದ್ದಕ್ಕಾಗಿ ಟೀಕಿಸಿದ್ದಾರೆ.

    ಕಳೆದ ವರ್ಷ ಮೇನಲ್ಲಿ ಡಿವೋರ್ಸ್​ ಪಡೆದಾಗಿನಿಂದ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದ ಮೆಲಿಂಡಾ ಇದೇ ಮೊದಲ ಬಾರಿಗೆ ಟೆಲಿವೈಸ್ಡ್​ ಸಂದರ್ಶನದಲ್ಲಿ ಪಾಲ್ಗೊಂಡರು. ತಾವು ಕೂಡ ಒಮ್ಮೆ ಜೆಫ್ರಿ ಎಪ್​ಸ್ಟೀನ್​ನನ್ನು​ ಭೇಟಿಯಾಗಿದ್ದಾಗಿ ಮತ್ತು ಭೇಟಿಯ ನಂತರ ದುಸ್ವಪ್ನಗಳನ್ನು ಎದುರಿಸಿದ್ದಾಗಿ ಇದೇ ಸಂದರ್ಭದಲ್ಲಿ ಮೆಲಿಂಡಾ ಒಪ್ಪಿಕೊಂಡರು.

    ಆ ವ್ಯಕ್ತಿ (ಜೆಫ್ರಿ ಎಪ್​ಸ್ಟೀನ್​) ಯಾರೆಂದು ನಾನು ನೋಡಲು ಬಯಸಿದೆ ಮತ್ತು ಭೇಟಿಯಾದ ಬಳಿಕ ನನಗೆ ನಾನೇ ಪಶ್ಚಾತಾಪ ಅನುಭವಿಸಿದೆ ಎಂದಿರುವ ಮೆಲಿಂಡಾ ಯಾವಾಗ ಭೇಟಿಯಾಯಿತು ಎಂಬ ಸ್ಪಷ್ಟನೆಯನ್ನು ನೀಡಲಿಲ್ಲ. ಭೇಟಿಯನ್ನು ವಿವರಿಸಿದ ಮೆಲಿಂಡಾ, ಎಪ್​​ಸ್ಟನ್​ರನ್ನು “ಅಸಹ್ಯಕರ” ಮತ್ತು “ದುಷ್ಟ ವ್ಯಕ್ತಿತ್ವ” ಎಂದು ಹೇಳಿದರು.

    ಎಪ್​ಸ್ಟೀನ್​ ಜತೆ ಬಿಲ್​ಗೇಟ್ಸ್​ಗೆ ಯಾವ ಸಂಬಂಧ ಇತ್ತು ಎಂಬ ಉಳಿದ ಪ್ರಶ್ನೆಗಳಿಗೆ ಬಿಲ್​ಗೇಟ್ಸ್​ ಅವರೇ ಉತ್ತರ ನೀಡಬೇಕು. ಆದರೆ, ಎಪ್​ಸ್ಟೀನ್​ ಬಗ್ಗೆ ನನಗೆ ಅನಿಸಿದ್ದನ್ನು ನಾನು ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ಮೆಲಿಂಡಾ ಹೇಳಿದರು.

    ಎಪ್​ಸ್ಟೀನ್​ ಜತೆಗಿನ ಬಿಲ್​ಗೇಟ್ಸ್​ ಸಂಬಂಧ ನಿಮ್ಮ ಡಿವೋರ್ಸ್​ ವಿಚಾರದಲ್ಲಿ ಪಾತ್ರವಹಿಸಿತೇ ಎಂಬ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ ಮೆಲಿಂಡಾ, ಹೌದು ಡಿವೋರ್ಸ್​ಗೆ ಕಾರಣವಾದ ಅನೇಕ ಸಂಗತಿಗಳಲ್ಲಿ ಇದು ಒಂದಾಗಿದೆ ಎಂದು ತಿಳಿಸಿದರು.

    ಈ ಹಿಂದೆ ವರದಿ ಮಾಡಿದ್ದ ವಾಲ್ ಸ್ಟ್ರೀಟ್ ಜರ್ನಲ್, 2020ರ ಮಾರ್ಚ್​ನಲ್ಲಿ ಮೈಕ್ರೋಸಾಫ್ಟ್‌ನಿಂದ ಬಿಲ್​ಗೇಟ್ಸ್​ ನಿರ್ಗಮನವು ಅವರು ಉದ್ಯೋಗಿಯೊಂದಿಗೆ ಹೊಂದಿದ್ದ ಸಂಬಂಧದ ತನಿಖೆಯ ಸಮಯದಲ್ಲೇ ನಡೆದಿದೆ ಎಂದು ಬಹಿರಂಗಪಡಿಸಿತು. 1975ರಲ್ಲಿ ಮೈಕ್ರೋಸಾಫ್ಟ್ ಅನ್ನು ಸ್ಥಾಪಿಸಿದ ಮತ್ತು 129 ಬಿಲಿಯನ್ ಡಾಲರ್​ ಸಂಪತ್ತನ್ನು ಹೊಂದಿರುವ ಬಿಲ್​ಗೇಟ್ಸ್ 2000ರಲ್ಲಿ ಕಂಪನಿಯ CEO ಹುದ್ದೆಯಿಂದ ಕೆಳಗಿಳಿದರು. ಇಳಿಯುವಾಗ ತನ್ನ ಫೌಂಡೇಶನ್​ ಮೇಲೆ ಗಮನ ವಹಿಸಬೇಕಾಗಿದೆ ಹೀಗಾಗಿ ಕಂಪನಿ ಸಿಇಒ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು. ಬಿಲ್​ಗೇಟ್ಸ್​ 2008ರಲ್ಲಿ ಮೈಕ್ರೋಸಾಫ್ಟ್‌ನಲ್ಲಿ ತಮ್ಮ ಪೂರ್ಣ ಸಮಯದ ಪಾತ್ರವನ್ನು ತೊರೆದರು, ಆದರೆ ಮಾರ್ಚ್ 2020ರವರೆಗೆ ಅವರ ಕಂಪನಿಯ ಬೋರ್ಡ್ ಸೀಟಿನಲ್ಲಿ ಇದ್ದರು. ಇದೀಗ ಸಂಪೂರ್ಣ ಕಂಪನಿಯಿಂದ ನಿರ್ಗಮಿಸಿದ್ದಾರೆ.

    ಎಪ್​ಸ್ಟೀನ್​ ವಿಚಾರಕ್ಕೆ ಬಂದರೆ, 2019ರ ಆಗಸ್ಟ್​ನಲ್ಲಿ ಮ್ಯಾಹಟ್ಟನ್​ ಜೈಲಿನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡನು. ಸಾಕಷ್ಟು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಪರಾಧದಲ್ಲಿ ಶಿಕ್ಷೆಗೆ ಗುರಿಯಾಗಿದ್ದನು. ಈತ ಓರ್ವ ಸಮಾಜವಾದಿ ಮತ್ತು ದಾನಿಯಾಗಿ ತನ್ನ ಸಂಬಂಧದ ಜಾಲವನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬಿಲ್ ಕ್ಲಿಂಟನ್‌ನಿಂದ ಬ್ರಿಟಿಷ್ ರಾಜಕುಮಾರ ಆಂಡ್ರ್ಯೂವರೆಗೆ ವಿಸ್ತರಿಸಿದ್ದನು.

    ಮಾಜಿ ದಂಪತಿಗಳು ವಿಚ್ಛೇದನದ ಹೊರತಾಗಿಯೂ ತಮ್ಮ ನಾಮಸೂಚಕ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಅನ್ನು ಲಾಭರಹಿತವಾಗಿ ಮುನ್ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ರಾಧೆ ಶ್ಯಾಮ್​ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಜತೆ ಕಿಸ್ಸಿಂಗ್​ ಸೀನ್​: ಅಚ್ಚರಿಯ ಹೇಳಿಕೆ ನೀಡಿದ ನಟ ಪ್ರಭಾಸ್​!

    ನಿಮ್ಮಿಂದಲೇ ರಷ್ಯಾಗೆ ಗ್ರೀನ್​ ಸಿಗ್ನಲ್​ ಸಿಕ್ಕಿದ್ದು… ನ್ಯಾಟೋ ವಿರುದ್ಧವೇ ತಿರುಗಿಬಿದ್ದ ಯೂಕ್ರೇನ್​ ಅಧ್ಯಕ್ಷ!

    ಕಾಲೇಜಿನಲ್ಲಿ ಡಿಬಾರ್ ಮಾಡಿದ್ದಕ್ಕೆ ಲೇಡಿಸ್​ ಪಿಜಿಯ 5ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ದುರಂತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts