More

    ಇನ್ನೇನು ಚಿತ್ರದ ಶೂಟಿಂಗ್​ ಪೂರ್ಣಗೊಳ್ಳುವಷ್ಟರಲ್ಲಿ ನಟಿ ಮೀರಾ ಮಿಥುನ್​ ಎಸ್ಕೇಪ್: ಮುಂದಾಗಿದ್ದೇನು?​

    ಚೆನ್ನೈ: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಕಾಲಿವುಡ್​ ನಟಿ ಮೀರಾ ಮಿಥುನ್ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತಮಿಳು ಚಿತ್ರ “ಪೈ ಕೊನೋಮ್​” ಚಿತ್ರದಲ್ಲಿ ಮೀರಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ಥೇನಿ ಭರತ್​ ಆರ್​ ಸುರುಲಿವೇಲ್​ ಎಂಬುವರು ಗ್ಲೇಬಲ್​ ಎಂಟರ್​ಟೈನ್​ಮೆಂಟ್​ ಬ್ಯಾನರ್​ ಅಡಿಯಲ್ಲಿ ನಿರ್ಮಿಸಿದ್ದು, ಸೆಲ್ವ ಅಂಬರಾಸನ್​ ನಿರ್ದೇಶನ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಚಿತ್ರದ ಫಸ್ಟ್​ ಲುಕ್​ ಬಿಡುಗಡೆ ಕಾರ್ಯಕ್ರಮ ಚೈನ್ನೈನಲ್ಲಿ ನಡೆಯಿತು. ಈ ವೇಳೆ ನಿರ್ದೇಶಕರು ನಟಿ ಮೀರಾ ಮಿಥುನ್​ ಮಾಡಿದ ಎಡವಟ್ಟಿನ ಬಗ್ಗೆ ಮಾತನಾಡಿದ್ದಾರೆ. ಚಿತ್ರದ ಚಿತ್ರೀಕರಣ ಶೇ. 80 ರಷ್ಟು ಪೂರ್ಣಗೊಂಡಿರುವಾಗಲೇ ಮೀರಾ ಮಿಥುನ್​ ವಿವಿಧ ಕಾರಣಗಳಿಂದಾಗಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಇನ್ನುಳಿದ ಶೇ. 20 ರಷ್ಟು ಚಿತ್ರದ ಶೂಟಿಂಗ್​ ಕೊಡೈಕೆನಾಲ್​ನಲ್ಲಿ ನಿಗದಿಯಾಗಿತ್ತು. ಶೂಟಿಂಗ್​ ಆರು ಮಂದಿಯೊಂದಿಗೆ ಬಂದಿದ್ದ ಮೀರಾ, ಶೂಟಿಂಗ್​ ನಡುವೆಯೇ ಹೇಳದೇ ಕೇಳದೇ ಪರಾರಿ ಆಗಿದ್ದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ಇನ್ನೆರೆಡು ದಿನಗಳಲ್ಲಿ ಶೂಟಿಂಗ್​ ಪೂರ್ಣಗೊಳ್ಳುತ್ತಿತ್ತು. ಕೊನೆಗೆ ಸ್ಟೋರಿಯನ್ನೇ ಬದಲಾಯಿಸಿ ಶೂಟಿಂಗ್​ ಪೂರ್ಣಗೊಳಿಸಿದ್ದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ.

    ಇದೀಗ ಈ ವಿಚಾರದ ಕಾಲಿವುಡ್​ ಗಲ್ಲಿಯಲ್ಲಿ ಚರ್ಚೆಯಾಗುತ್ತಿದೆ. ಆದರೆ, ಈ ಘಟನೆಯ ಬಗ್ಗೆ ಮೀರಾ ಮಿಥುನ್​ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. (ಏಜೆನ್ಸೀಸ್​)

    ಡಾರ್ಲಿಂಗ್ ಪ್ರಭಾಸ್​ರ 320 ಕೋಟಿ ಮೌಲ್ಯದ ಬಂಗಲೆ ಎಲ್ಲಿ ನಿರ್ಮಾಣವಾಗುತ್ತಿದೆ ಗೊತ್ತಾ?

    ಮಧ್ಯರಾತ್ರಿ ಕಾರಲ್ಲಿ ಬಂದು ಅಸಭ್ಯ ವರ್ತನೆ​: ಬಂಧಿತ ಆರೋಪಿ ಕಿಮ್ಸ್ ಕಾಲೇಜಿನ ಎಂಎಸ್ ವಿದ್ಯಾರ್ಥಿ

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹಲ್ಲೆ ಪ್ರಕರಣ: ನಟ ವಿಜಯ್​ ಸೇತುಪತಿಗೆ ಸಮನ್ಸ್​ ನೀಡಿದ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts