More

    ಟೀಮ್​ ಇಂಡಿಯಾ ವಿರುದ್ಧ ಗೆಲುವು: ಪಾಕ್​ ಪರ ಘೋಷಣೆ ವಿರೋಧಿಸಿದ ವಿದ್ಯಾರ್ಥಿನಿಗೆ ಬೆದರಿಕೆ ಕರೆ

    ಶ್ರೀನಗರ: ಟಿ20 ವಿಶ್ವಕಪ್​ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆಲುವು ದಾಖಲಿಸಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ವೈದ್ಯಕೀಯ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಪಾಕ್​ ಪರ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿರುವ ಬಗ್ಗೆ ಈಗಾಗಲೇ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆತಂಕಕಾರಿ ವಿಚಾರವೇನೆಂದರೆ, ಪಾಕ್​ ಘೋಷಣೆಗೆ ವಿರೋಧಿಸಿದ ವಿದ್ಯಾರ್ಥಿನಿಗೆ ಇದೀಗ ಬೆದರಿಕೆ ಕರೆಗಳು ಬರುತ್ತಿರುವುದಾಗಿ ತಿಳಿದುಬಂದಿದೆ.

    ಶ್ರೀನಗರದ ಸೌರದಲ್ಲಿರುವ ಸ್ಕಿಮ್ಸ್​ (SKIMS) ಕಾಲೇಜಿನ ಮೆಡಿಕಲ್​ ವಿದ್ಯಾರ್ಥಿನಿ ಅನನ್ಯ ಜಮ್ವಾಲ್​ಗೆ ಬೆದರಿಕೆ ಕರೆಗಳು ಬರುತ್ತಿವೆ. ಅಬ್ದುಲ್​ ಘಾಜಿ ಎಂಬಾತ ತನ್ನ ಟ್ವಿಟರ್​ನಲ್ಲಿ ಅನನ್ಯರನ್ನು “ಅಪ​ರಾಧಿ” ಹಾಗೂ “ಪೊಲೀಸ್ ಮಾಹಿತಿದಾರ”​ ಎಂದು ಜರಿದಿದ್ದಾನೆ. ಪಾಕ್​ ಪರ ಘೋಷಣೆ ಕೂಗಿದ ಮೆಡಿಕಲ್​​ ವಿದ್ಯಾರ್ಥಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಅಡಿ ಎಫ್​ಐಆರ್​ ದಾಖಲಾಗಲು ಅನನ್ಯಳೇ ಕಾರಣ ಎಂದು ಟ್ವಿಟರ್​ನಲ್ಲಿ ಅಬ್ದುಲ್​ ಘಾಜಿ ಆರೋಪಿಸಿದ್ದಾನೆ.

    ಪಾಕ್​ ಗೆಲುವು ದಾಖಲಿಸಿದ ಬೆನ್ನಲ್ಲೇ ಕೆಲವು ವಿದ್ಯಾರ್ಥಿಗಳು ಪಾಕ್​ ಪರ ಘೋಷಣೆ ಕೂಗಿರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್​​ಐಆರ್​ ಹಿಂದೆ ಅನನ್ಯ ಕೈವಾಡ ಇದೆ. ಆಕೆ ಆರ್​ಎಸ್​ಎಸ್​ ಸದಸ್ಯೆ ಮತ್ತು ಕಾರ್ಯಕರ್ತೆ ಎಂದು ಘಾಜಿ ಸರಣಿ ಟ್ವೀಟ್​ ಮೂಲಕ ಆರೋಪಿಸಿದ್ದಾರೆ.

    ತಮ್ಮ ಮೇಲಿನ ಆರೋಪವನ್ನು ಅನನ್ಯ ತಿರಸ್ಕರಿಸಿದ್ದಾರೆ. ದೇಶದ್ರೋಹಿಗಳಿಗೆ ಬೆಂಬಲ ನೀಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅದಾದ ಬಳಿಕ ನನಗೆ ಕಿರುಕುಳ ನೀಡಲು ಆರಂಭಿಸಿದರು. ನನಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ.

    ಈಗಾಗಲೇ ಎಫ್​ಐಆರ್​ ದಾಖಲಾಗಿದ್ದು, ಅದರಡಿಯಲ್ಲಿ ಸಾಂಬಾ ಜಿಲ್ಲೆಯಲ್ಲಿ 6 ಮಂದಿಯನ್ನು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ಮುಂದುವರಿಸಿದ್ದಾರೆ. ಇನ್ನು ಪಾಕ್​ ಘೋಷಣೆ ಕೂಗಿದ ವಿದ್ಯಾರ್ಥಿಗಳ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸರಿಯಾದ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

    ಹೆಣ್ಣು ಮಕ್ಕಳನ್ನು ಹೆತ್ತು ಮದುವೆಯ ಬಗ್ಗೆ ಚಿಂತಿಸುವ ಪಾಲಕರಿಗೆ ಸಮಂತಾ ಕೊಟ್ಟ ಸಲಹೆ ಹೀಗಿದೆ…

    ಎಂದಿಗೂ ಈ ಒಂದು ಕೆಲಸ ಮಾಡದಂತೆ ಮಕ್ಕಳಿಗೆ ಯಾವಾಗಲೂ ಹೇಳ್ತಾರಂತೆ ನಾಗಾರ್ಜುನ..!

    ರವಿತೇಜಗೆ ಶ್ರೀಲೀಲಾ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts