More

    ದಕ್ಷಿಣದ ಸಿನಿಮಾಗಳನ್ನು ನೋಡಿ ಬಾಲಿವುಡ್​ ಹೆದರಿದೆ: ಪಾಠ ಕಲಿಯದಿದ್ರೆ ಕಷ್ಟ ಅಂದ್ರು ಮನೋಜ್​ ಬಾಜ್ಪೇಯಿ

    ಮುಂಬೈ: ಬಾಲಿವುಡ್​ ಸ್ಟಾರ್​ ಮನೋಜ್ ಬಾಜ್ಪೇಯಿ ಅವರು ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಕೆಲವು ಆಸಕ್ತಿಕರ ಕಾಮೆಂಟ್​ಗಳನ್ನು ಮಾಡಿದ್ದಾರೆ. ಪುಷ್ಪ, ಆರ್​ಆರ್​ಆರ್​ ಮತ್ತು ಕೆಜಿಎಫ್​ ಚಾಪ್ಟರ್​ 2ನಂತಹ ಸಿನಿಮಾಗಳ ಯಶಸ್ಸು ಬಾಲಿವುಡ್​ ನಿರ್ದೇಶಕರನ್ನು ಕಂಗಾಲಾಗಿಸಿದೆ ಎಂದು ಹೇಳಿದ್ದಾರೆ.

    ಅಲ್ಲು ಅರ್ಜುನ್​ ನಟನೆಯ ಪುಷ್ಪ ಸಿನಿಮಾ ಹಿಂದಿ ಅಂಗಳದಲ್ಲಿ 106 ಕೋಟಿ ರೂಪಾಯಿ ಗಳಿಸಿದರೆ, ಆರ್​ಆರ್​ಆರ್​ ಮತ್ತು ಕೆಜಿಎಫ್​ ಚಾಪ್ಟರ್​-2 ಸಿನಿಮಾ 300 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹ ಮಾಡಿ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿವೆ. ಆದರೆ, ಬಾಲಿವುಡ್​ನಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳೇ ನೂರು ಕೋಟಿ ರೂ. ಹಣಗಳಿಸಲು ಹೆಣಗಾಡುತ್ತಿವೆ.

    ಈ ಬಗ್ಗೆ ದೆಹಲಿ ಟೈಮ್ಸ್​ ಜತೆ ದಿ ಫ್ಯಾಮಿಲಿ ಮ್ಯಾನ್​ ವೆಬ್​ ಸೀರಿಸ್​ ಖ್ಯಾತಿಯ ಮನೋಜ್​ ಬಾಜ್ಪೇಯಿ ಮಾತನಾಡಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳ ಯಶಸ್ಸನ್ನು ನೋಡಿ ಬಾಲಿವುಡ್​ ನಿರ್ದೇಶಕರಿಗೆ ಭಯ ಶುರುವಾಗಿದೆ. ಈಗಲೂ ಅವರಿಗೆ ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಬಾಲಿವುಡ್​ಗೆ ಇದೊಂದು ಪಾಠ. ಇದರಿಂದ ಖಂಡಿತವಾಗಿಯೂ ಅವರು ಪಾಠ ಕಲಿಯಲೇಬೇಕು. ದಕ್ಷಿಣ ಭಾರತದವರು ಸಿನಿಮಾ ಮೇಲೆ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡುತ್ತಾರೆ. ಪ್ರತಿ ದೃಶ್ಯವನ್ನು ವಿಶ್ವದ ಅತ್ಯುತ್ತಮ ದೃಶ್ಯವಾಗಬೇಕೆಂಬ ಅನ್ವೇಷಣೆಯೊಂದಿಗೆ ಚಿತ್ರೀಕರಿಸುತ್ತಾರೆಂದು ಕೊಂಡಾಡಿದ್ದಾರೆ.

    ಪುಷ್ಪ, ಕೆಜಿಎಫ್, ಆರ್‌ಆರ್‌ಆರ್ ಸಿನಿಮಾಗಳನ್ನು ನೋಡಿದರೆ ಯಾವುದೇ ಲೋಪವಿಲ್ಲದೇ ಸ್ವಚ್ಛವಾಗಿ ಕಾಣುತ್ತದೆ. ಚಿತ್ರದ ಪ್ರತಿ ಫ್ರೇಮ್ ಅನ್ನು ಸಹ ಬಹಳ ಬದ್ಧತೆಯಿಂದ ಚಿತ್ರೀಕರಿಸಿದ್ದಾರೆ ಎಂದು ಸುಲಭವಾಗಿ ಅರ್ಥವಾಗುತ್ತದೆ. ಆದರೆ, ನಮ್ಮಲ್ಲಿ ಆ ರೀತಿಯ ಸಮರ್ಪಣಾ ಮನೋಭಾವ ಇಲ್ಲ. ನಾವು ಯಾವಾಗಲೂ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಯೋಚಿಸುತ್ತೇವೆಯೇ ಹೊರತು ನಮ್ಮನ್ನು ನಾವು ಟೀಕಿಸಿಕೊಳ್ಳುವುದಿಲ್ಲ. ಹೀಗಾಗಿಯೇ ಅವರ ಸಿನಿಮಾಗಳು ಬೇರೆ ಎಂದು ಪ್ರತ್ಯೇಕವಾಗಿ ಹೇಳುತ್ತೇವೆ. ಆದರೆ, ಇದು ಖಂಡಿತವಾಗಿಯೂ ನಮಗೊಂದು ಪಾಠವಾಗಿದೆ. ಇದರಿಂದ ನೀವು ಖಂಡಿತವಾಗಿಯೂ ಹೊಸ ಕೌಶಲ್ಯಗಳಲ್ಲಿ ಕಲಿಯಬೇಕೆಂದರು. (ಏಜೆನ್ಸೀಸ್​)

    ಬಿಜೆಪಿಗೆ ಬರ್ಬೇಕು ಅಂದ್ರೆ ಈ 3 ಷರತ್ತಿಗೆ ಒಪ್ಪಬೇಕು… ಸುಮಲತಾರ ಡಿಮಾಂಡ್​ಗೆ ಬೆಚ್ಚಿಬಿದ್ದಿದೆಯಂತೆ ಬಿಜೆಪಿ!

    ದೂರು ನೀಡಲು ಬಂದ ಮಹಿಳೆಯ ಬಳಿ ಮಸಾಜ್​ ಮಾಡಿಸಿಕೊಂಡು ದರ್ಪ ಮೆರೆದ ಠಾಣಾಧಿಕಾರಿ: ವಿಡಿಯೋ ವೈರಲ್​

    ದರ್ಗಾದಲ್ಲಿ ಶಿವನಾಮ ಝೇಂಕಾರ! ಅಮಾವಾಸ್ಯೆ, ಹುಣ್ಣಿಮೆಯಲ್ಲಿ ವಿಶೇಷ ಪೂಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts