More

    ನಗ್ನ ಫೋಟೋ ವೈರಲ್ ಮಾಡೋ ಬೆದರಿಕೆ: ಪ್ರೇಯಸಿಯಿಂದ 35 ಲಕ್ಷ ರೂ. ಪೀಕಿದ್ದ ಆರೋಪಿ ಅಂದರ್​!

    ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆತನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

    ಮೈಸೂರಿನ ನಂಜನಗೂಡು ಮೂಲದ ಯುವತಿಗೆ ಮಂಗಳೂರು ಮೂಲದ ಮಹಮ್ಮದ್ ಅಜ್ವಾನ್ ಎಂಬಾತ ಲವ್, ಸೆಕ್ಸ್, ದೋಖಾ ಮಾಡಿರುವ ಆರೋಪ ಕೇಳಿಬಂದಿದ್ದು, ಆರೋಪಿಯನ್ನು ಬೆಂಗಳೂರಿನಲ್ಲಿ ಸೆರೆಹಿಡಿಯಲಾಗಿದೆ.

    ಪ್ರೀತಿಯ ನಾಟಕವಾಡಿ ಯುವತಿಗೆ ಮೋಸ ಮಾಡಿದ್ದಾನೆ. ಅಲ್ಲದೆ, ಯುವತಿಯ ನಗ್ನ ಫೋಟೋ ವೈರಲ್ ಮಾಡುವ ಬೆದರಿಕೆ ಒಡ್ಡಿ 35 ಲಕ್ಷ ರೂಪಾಯಿ ಪಡೆದು ಕೊಂಡಿರುವ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಮೈಸೂರು ಮೂಲದ ಸಂತ್ರಸ್ತೆ ಪ್ರಕರಣ ದಾಖಲಿಸಿದ್ದಳು.

    ದೂರು ಹಿನ್ನೆಲೆಯಲ್ಲಿ ಆರೋಪಿ ಮಹಮ್ಮದ್ ಅಜ್ವಾನ್​ನನ್ನು ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಮಹಮ್ಮದ್​ ಅಜ್ವಾನ್​ ಮಂಗಳೂರಿನ ಮುಡಿಪು ನಿವಾಸಿ. ಮೋಸ ಹೋದ ಯುವತಿ ಆರೋಪಿ ಮಹಮ್ಮದ್ ಅಜ್ವಾನ್ ಮನೆ ಹುಡುಕಿಕೊಂಡು ಮಂಗಳೂರಿಗೆ ಬಂದಿದ್ದಳು. ಆದರೆ, ಮಹಮ್ಮದ್ ಅಜ್ವಾನ್ ಕುಟುಂಬಸ್ಥರು ಯುವತಿಯ ಮೇಲೆ ಹಲ್ಲೆ ಮಾಡಿರುವ ಆರೋಪವಿದೆ.

    ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ಮಂಗಳೂರು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕಲಾಪದಲ್ಲಿ MLC ತೇಜಸ್ವಿನಿ ಗೌಡ ಮಾಡಿದ ಗಂಭೀರ ಆರೋಪಕ್ಕೆ ಮಂಗ್ಳೂರು ಪೊಲೀಸ್​ ಆಯುಕ್ತರ ತಿರುಗೇಟು..!

    ಫೇಸ್​ಬುಕ್​ ಪ್ರೇಯಸಿಗೆ ಓಡಾಡಲು ಇನ್ನೋವಾ ಕಾರು, ಕೈತುಂಬಾ ಹಣ ಕೊಟ್ಟವನಿಗೆ ಕಾದಿತ್ತು ಬಿಗ್​ ಶಾಕ್​..!

    ಮಕ್ಕಳೊಂದಿಗೆ ಪತ್ನಿ ನಾಪತ್ತೆ: ಆಕೆ ಸಿಗುತ್ತಿದ್ದಂತೆ ಪೊಲೀಸರಿಗೆ ಕಾದಿತ್ತು ಶಾಕ್​! ಗಂಡ-ಹೆಂಡ್ತಿಯಲ್ಲ, ಆದ್ರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts