More

    ಬಡವರಿಗೆ ಹಂಚಿ ಬಿಡಿ! ಆತ್ಮಹತ್ಯೆಗೂ ಮುನ್ನ ದಂಪತಿ ಆಡಿರುವ ಮಾತುಗಳು ಕಣ್ಣೀರುವ ತರಿಸುವಂತಿದೆ

    ಮಂಗಳೂರು: ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ಮಂಗಳೂರು ಹೊರವಲಯದ ಚಿತ್ರಾಪುರ ರಹೆಜಾ ಅಪಾರ್ಟ್ಮೆಂಟ್​ನ ಫ್ಲಾಟ್​ನಲ್ಲಿ ನಡೆದಿದೆ.

    ಮೃತ ದಂಪತಿಯನ್ನು ರಮೇಶ್​ಕುಮಾರ್​ ಮತ್ತು ಗುಣ ಎಂದು ಗುರುತಿಸಲಾಗಿದೆ. ಕರೊನಾ ಕಾರಣದಿಂದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಚಿತ್ರಾಪುರದ ಫ್ಲ್ಯಾಟ್​ನಲ್ಲಿ ವಾಸವಿದ್ದ ದಂಪತಿ ಒಂದು ವಾರದಿಂದ ಕರೊನಾ ಸೋಂಕಿಗೆ ಒಳಗಾಗಿದ್ದರು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದಾರೆಂದು ತಿಳಿದುಬಂದಿದೆ.

    ಆತ್ಮಹತ್ಯೆ ಮಾಡುವ ಮುನ್ನ ಸಹಾಯಕ ಪೊಲೀಸ್ ಆಯುಕ್ತರಿಗೆ ಹಾಗೂ ಹಿಂದು ಸಂಘಟನೆ ಮುಖಂಡರಿಗೆ ದಂಪತಿ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮೀಷನರ್​ಗೆ ವಾಯ್ಸ್ ಮೆಸೇಜ್ ತಲುಪಿಸುವಂತೆ ರಮೇಶ್​ ಮನವಿ ಮಾಡಿಕೊಂಡಿದ್ದರು. ಶರಣ್ ಪಂಪ್ವೆಲ್, ಸತ್ಯಜಿತ್ ಸುರತ್ಕಗೂ ಅಂತ್ಯಕ್ರಿಯೆಯನ್ನು ಮಾಡುವಂತೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ.

    ಅಂತ್ಯಕ್ರಿಯೆಗಾಗಿ ಒಂದು ಲಕ್ಷ ರೂಪಾಯಿ ಇಟ್ಟಿರೋದಾಗಿ ಮೆಸೇಜ್ ಮಾಡಿದ್ದು, ಮನೆಯ ಉಪಕರಣ ಮಾರಿ ಬಡವರಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ವಾಯ್ಸ್ ಮೆಸೇಜ್ ಬಂದ ಕೂಡಲೇ ಅಡ್ರೆಸ್ ಟ್ರ್ಯಾಕ್ ಮಾಡಿದ ಕಮೀಷನರ್, ಮನೆ ತಲುಪುವ ವೇಳೆಯಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಮನೆಯಲ್ಲಿ ಡೆತ್​ನೋಟ್​ ಪತ್ತೆಯಾಗಿದ್ದು, ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡುತ್ತಿರುವುದಾಗಿ ಉಲ್ಲೇಖ ಮಾಡಲಾಗಿದೆ. ಪತ್ನಿ ಗುಣಗೆ ನಿರಂತರವಾಗಿ ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ಸದ್ಯ ಕೋವಿಡ್​ನ ಲಕ್ಷಣಗಳು ಕಂಡು ಬಂದಿದೆ. ಕೋವಿಡ್​ನ ಗಂಭೀರ ಲಕ್ಷಣಗಳ ಬಗ್ಗೆ ಭಯವಿದೆ ಎಂದು ಉಲ್ಲೇಖಿಸಿರುವ ದಂಪತಿ ಹಿಂದೂ ಧರ್ಮದ ಪ್ರಕಾರ ಅಂತ್ಯಕ್ರಿಯೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಆಫ್ಘಾನ್​ನಲ್ಲಿ ತಾಲಿಬಾನ್​ ರಕ್ತಚರಿತ್ರೆ: ಕೊನೆಗೂ ಮೌನ ಮುರಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಹೇಳಿದ್ದು ಹೀಗೆ..

    ಚಾಕೋಲೆಟ್ ತರಲು ಅಂಗಡಿಗೆ ತರಳಿದ ಬಾಲಕಿ ಮನೆಗೆ ಮರಳಿದ್ದು ಹೆಣವಾಗಿ: ಈ ಸಾವು ನ್ಯಾಯವೇ?

    ಕಳೆದು ಹೋದ ಮೊಬೈಲ್​ಫೋನ್​ಗಾಗಿ ಗುಂಪು ಕಟ್ಟಿಕೊಂಡು ಬಂದು ಹಲ್ಲೆ; ಫೋನ್​ ಕಳ್ಕೊಂಡವನೊಬ್ಬ, ಪ್ರಾಣ ಕಳ್ಕೊಂಡಿದ್ದು ಮತ್ತೊಬ್ಬ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts