More

    ಬರ್ತಡೇ ಖುಷಿಯಲ್ಲಿ ನಟಸಾರ್ವಭೌಮನ ಬೆಡಗಿ: ಅನುಪಮಾ ಮಿಸ್​ ಮಾಡಿಕೊಂಡ ಸೂಪರ್​ ಹಿಟ್ ಚಿತ್ರವಿದು!

    ಹೈದರಾಬಾದ್​: ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ನಟ ಸಾರ್ವಭೌಮ ಚಿತ್ರದ ಮೂಲಕ ಕನ್ನಡಿಗರಿಗೂ ಪರಿಚಿತರಾಗಿರುವ ಸೌತ್​ ಬ್ಯೂಟಿ ಅನುಪಮಾ ಪರಮೇಶ್ವರನ್, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬಹಳ ಹೆಸರು ಮಾಡಿದ್ದಾರೆ.​ ಮೂಲತಃ ಮಲಯಾಳಿಯಾಗಿರುವ ಅನುಪಮಾ ಇಂದು 26ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

    ಬರ್ತಡೇ ಗರ್ಲ್​ ಅನುಪಮಾಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇತ್ತೀಚೆಗಷ್ಟೇ ಅನುಪಮಾ ಅವರು ರೌಡಿ ಬಾಯ್ಸ್​ ಹೆಸರಿನ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಚಿತ್ರದ ಪ್ರೀ ರಿಲೀಸ್​ ಈವೆಂಟ್​ ವೇಳೆ ಟಾಲಿವುಡ್​ ಸೂಪರ್​ಸ್ಟಾರ್​ ರಾಮ್​ಚರಣ್​ ಅತಿಥಿಯಾಗಿದ್ದರು. ಈ ವೇಳೆ ಆರ್​ಆರ್​ಆರ್​ ಚಿತ್ರ ನಾಟು ನಾಟು ಹಾಡಿಗೆ ಅನುಪಮಾ ಮತ್ತು ರಾಮ್​ ಚರಣ್​ ಜತೆಯಾಗಿ ಹೆಜ್ಜೆ ಹಾಕಿದ್ದರು.

    ಬರ್ತಡೇ ಖುಷಿಯಲ್ಲಿ ನಟಸಾರ್ವಭೌಮನ ಬೆಡಗಿ: ಅನುಪಮಾ ಮಿಸ್​ ಮಾಡಿಕೊಂಡ ಸೂಪರ್​ ಹಿಟ್ ಚಿತ್ರವಿದು!

    ಈಗ್ಯಾಕೆ ಈ ವಿಚಾರ ಅಂತಿರಾ ಅನುಪಮಾ ಅವರು ತಮ್ಮ ಸಿನಿ ಕೆರಿಯರ್​ನಲ್ಲೇ ಅತ್ಯುತ್ತಮ ಹಾಗೂ ಸೂಪರ್​ ಹಿಟ್​ ಚಿತ್ರವನ್ನು ಮಿಸ್​ ಮಾಡಿಕೊಂಡಿದ್ದಾರೆ. ಆ ಚಿತ್ರದ ನಾಯಕ ಬೇರೆ ಯಾರು ಅಲ್ಲ ರಾಮ್​ಚರಣ್​.

    ಹೌದು, ಅನುಪಮಾ ಅವರು ರಾಮ್​ಚರಣ್​ ಅಭಿನಯದ ರಂಗಸ್ಥಳಂ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ದಿನಾಂಕ ಹೊಂದಾಣಿಕೆಯಾಗದ ಕಾರಣ ಆ ಚಿತ್ರವನ್ನು ಅನುಪಮಾ ಒಪ್ಪಿರಲಿಲ್ಲ. ಬಳಿಕ ಆ ಚಿತ್ರ ಸಮಂತಾ ಪಾಲಾಯಿಯು. ಕೊನೆಗೆ ಚಿತ್ರ ಸೂಪರ್​ ಡೂಪರ್​ ಹಿಟ್​ ಆಗಿ ಸಮಂತಾಗೆ ಒಳ್ಳೆಯ ಹೆಸರು ತಂದುಕೊಟ್ಟಿತು.

    ಬರ್ತಡೇ ಖುಷಿಯಲ್ಲಿ ನಟಸಾರ್ವಭೌಮನ ಬೆಡಗಿ: ಅನುಪಮಾ ಮಿಸ್​ ಮಾಡಿಕೊಂಡ ಸೂಪರ್​ ಹಿಟ್ ಚಿತ್ರವಿದು!

    ಅನುಪಮಾ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಾಮ್​ಚರಣ್​ ಅಭಿಮಾನಿಗಳು ಸಹ ಅನುಪಮಾಗೆ ಶುಭಕೋರಿದ್ದು, ಇಬ್ಬರ ಕಾಂಬಿನೇಷನ್​ನಲ್ಲಿ ಒಂದು ಚಿತ್ರವನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ. (ಏಜೆನ್ಸೀಸ್​)

    ಲಿಪ್​ಲಾಕ್ ದೃಶ್ಯಕ್ಕಾಗಿ ವೃತ್ತಿ ಜೀವನದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆದ ಮಲಯಾಳಿ ಬೆಡಗಿ ಅನುಪಮಾ!

    ಅಪಘಾತದಲ್ಲಿ ದೀಪ್​ ಸಿಧು ದುರ್ಮರಣ: ಕಣ್ಣೀರಿಟ್ಟ ಬೆನ್ನಲ್ಲೇ ಸಂಶಯ ಮೂಡಿಸಿದ ಗರ್ಲ್​ಫ್ರೆಂಡ್​ ರೀನಾ ನಡೆ

    ಥೂ ಇದೆಂಥಾ ಅಸಹ್ಯ? ಅಣ್ಣ-ತಂಗಿ ನಡುವೆಯೇ ಅಕ್ರಮ ಸಂಬಂಧ, ಅಡ್ಡಿಬಂದ ತಾಯಿಯನ್ನೇ ಕೊಂದ ಕಾಮುಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts