More

    20 ವರ್ಷದ ಸಂಘರ್ಷಕ್ಕೆ ಅಂತ್ಯ: ಆಫ್ಘಾನ್​ ನೆಲದಿಂದ ಹೊರನಡೆದ ಕೊನೆಯ ಅಮೆರಿಕ​ ಯೋಧ ಇವರೇ..!

    ಕಾಬುಲ್​: ತಾಲಿಬಾನ್​ ನೀಡಿದ ಡೆಡ್​ಲೈನ್ ಪ್ರಕಾರವೇ ಅಮೆರಿಕ ಸೇನಾ ಪಡೆಗಳು ಅಫ್ಘಾನಿಸ್ತಾನವನ್ನು ತೊರೆದಿವೆ. ಸೋಮವಾರ ಮಧ್ಯರಾತ್ರಿ ಕಾಬುಲ್​ ತೊರೆಯುವ ಮೂಲಕ ಆಫ್ಘಾನ್​ನಲ್ಲಿನ 20 ವರ್ಷದ ಸಂಘರ್ಷಕ್ಕೆ ಅಮೆರಿಕ ಅಂತ್ಯವಾಡಿದೆ. ಇದಕ್ಕೆ ಸಂಬಂಧಿಸಿದ ಫೋಟೋವೊಂದನ್ನು ಅಮೆರಿಕ ಸೇನೆ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, ಅಮೆರಿಕದ ಆರ್ಮಿ ಮೇಜರ್​ ಜನರಲ್​ ಕ್ರಿಸ್ ಡೊನಾಹು ಆಫ್ಘಾನ್​ ನೆಲದಿಂದ ಹೊರ ನಡೆದ ಕೊನೆಯ ಅಮೆರಿಕ ಯೋಧರಾಗಿದ್ದಾರೆ.

    ನೈಟ್​ ವಿಸನ್​ ಆಪ್ಟಿಕ್​ ಛಾಯಾಚಿತ್ರದಲ್ಲಿರುವಂತೆ 82ನೇ ವಾಯುಗಾಮಿ ವಿಭಾಗದ ಕಮಾಂಡರ್ ಜನರಲ್ ಕ್ರಿಸ್ ಡೊನಾಹ್ಯೂ, ಕಾಬೂಲ್‌ನಿಂದ ಹೊರಟ ಕೊನೆಯ ಸೈನಿಕರಾರಾಗಿದ್ದು, XVIII ವಾಯುಗಾಮಿ ಕಾರ್ಪ್ಸ್ ಕರೆಯುತ್ತಿದ್ದಂತೆ ಸೇನಾ ವಿಮಾನದಲ್ಲಿ ಹತ್ತಿದಂತೆ ತೋರಿಸಿತು. ಕ್ರಿಸ್ ಡೊನಾಹ್ಯೂ ನಿರ್ಗಮನದಿಂದ ಎರಡು ವಾರಗಳ ತ್ವರಿತಗತಿಯ ಸ್ಥಳಾಂತರ ಪ್ರಕ್ರಿಯೆ ಕೊನೆಗೊಂಡಂತಾಗಿದೆ. ಯುಎಸ್​ ಮತ್ತು ನ್ಯಾಟೋ ಪಡೆಗಳು ಕಳೆದ ಎರಡು ವಾರಗಳಿಂದ ಸ್ಥಳಾಂತರ ಕೆಲಸದಲ್ಲಿ ತೊಡಗಿಕೊಂಡಿದ್ದವು.

    ಆಗಸ್ಟ್​ 31ರ ಒಳಗೆ ಕಾಬುಲ್​ ಖಾಲಿ ಮಾಡುವಂತೆ ಯುಎಸ್​ ಪಡೆಗೆ ತಾಲಿಬಾನ್​ ಡೆಡ್​ಲೈನ್​ ನೀಡಿತ್ತು. ತಾಲಿಬಾನ್​ ರಕ್ತಪಿಪಾಸುಗಳು ಕಾಬುಲ್​ ವಶಕ್ಕೆ ಪಡೆದಾಗಿನಿಂದ ಒಂದು ಅಂದಾಜಿನ ಪ್ರಕಾರ ಸುಮಾರು 122,000 ಮಂದಿಯನ್ನು ಆಗಸ್ಟ್​ 14ರಿಂದ ಇಲ್ಲಿಯವರೆಗೆ ಅಮೆರಿಕ ಏರ್​ಲಿಫ್ಟ್​ ಮಾಡಿದೆ.

    ಕಾಬೂಲ್‌ನಿಂದ ಕೊನೆಯ ಯುಎಸ್ ಸ್ಥಳಾಂತರಿಸುವ ವಿಮಾನವು ಹೊರಡುತ್ತಿದ್ದಂತೆ ತಾಲಿಬಾನ್‌ಗಳು, ಅಫ್ಘಾನಿಸ್ತಾನಕ್ಕೆ “ಸಂಪೂರ್ಣ ಸ್ವಾತಂತ್ರ್ಯ” ಸಿಕ್ಕಿದೆ ಎಂದು ಘೋಷಿಸಿ ನಗರದಲ್ಲಿ ಸಂಭ್ರಮದ ಗುಂಡಿನ ಮಳೆಗೆರೆದರು. (ಏಜೆನ್ಸೀಸ್​)

    ಕಾಬುಲ್ ವಿಮಾನನಿಲ್ದಾಣದ ಮೇಲೆ ರಾಕೆಟ್ ದಾಳಿ; ತಾಲಿಬಾನ್ ಬೆಂಬಲಕ್ಕೆ ನಿಂತ ಚೀನಾ

    10 ವರ್ಷದ ಬಳಿಕ ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದ್ರೂ ಮನೆಯಿಂದ ಆಚೆ ಬರುತ್ತಿಲ್ಲವೇಕೆ? ಇಲ್ಲಿದೆ ಅಚ್ಚರಿಯ ಕಾರಣ..!

    ಪ್ರಿಯಕರನಿಂದ ಚೂರಿ ಇರಿತ ಪ್ರಕರಣ: ನಿಶ್ಚಿತಾರ್ಥ ನೆರವೇರಿದ ಒಂದೇ ವಾರದಲ್ಲಿ ಯುವತಿ ದುರಂತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts