More

    ಫಲಿಸಿತು 20 ವರ್ಷಗಳ ಹುಡುಕಾಟದ ಶ್ರಮ: ಪತ್ತೆಯಾದ ವಜ್ರದ ತುಣುಕಿನ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ವಿಜಯವಾಡ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದೆ. ಆದರೆ, ಈ ವ್ಯಕ್ತಿಯ ಅದೃಷ್ಟವು 20 ವರ್ಷಗಳ ಶ್ರಮದ ಪ್ರತಿಫಲವೂ ಆಗಿದೆ. ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ. ಹಾಗೆಯೇ ಅವರ ತಾಳ್ಮೆಯನ್ನು ಮೆಚ್ಚಿಕೊಳ್ಳುವಿರಿ.

    ಒಂದೇ ಒಂದು ವಜ್ರದ ತುಣುಕು ಇದ್ದರೆ ಆತ ಕೋಟ್ಯಧಿಪತಿ ಆಗುವುದರಲ್ಲಿ ಸಂಶಯವೇ ಇಲ್ಲ. ವಜ್ರದ ತುಣುಕು ಸಿಕ್ಕಿ ಜೀವನದ ದಿಕ್ಕಿ ಬದಲಾದ ಎಷ್ಟೋ ಘಟನೆಗಳು ನಮ್ಮ ಕಣ್ಣ ಮುಂದಿದೆ. ಇನ್ನು ಕೆಲವರು ಅದೃಷ್ಟಕ್ಕಾಗಿ ಎದುರು ನೋಡುತ್ತಿರುತ್ತಾರೆ. ಅದರಂತೆ ಮಧ್ಯಪ್ರದೇಶದ ಪನ್ನಾ ಗಣಿಯಲ್ಲಿ ಸಾಕಷ್ಟು ಜನರು ವಜ್ರಕ್ಕಾಗಿ ನಿತ್ಯವೂ ಭೂತಗನ್ನಡಿ ಹಾಕಿ ಹುಡುಕುತ್ತಿರುತ್ತಾರೆ. ಯಾವಾಗ ವಜ್ರ ಸಿಗುತ್ತದೆಯೋ? ಅದೃಷ್ಟದ ಬಾಗಿಲು ತೆರೆದು ನಮ್ಮ ಬಾಳು ಯಾವಾಗ ಬಂಗಾರವಾಗುತ್ತದೆಯೋ ಎಂಬ ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಅದರಂತೆ ವ್ಯಕ್ತಿಯೊಬ್ಬ ಪನ್ನಾ ಗಣಿಯಲ್ಲಿ ಕಳೆದ 20 ವರ್ಷಗಳಿಂದ ವಜ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಎರಡು ದಶಕಗಳಲ್ಲಿ ಒಮ್ಮೆಯೂ ಅದೃಷ್ಟ ಅವರ ಮನೆಯ ಬಾಗಿಲು ಬಡಿಯಲಿಲ್ಲ. ಆದರೂ ಆತ ತನ್ನ ಭರವಸೆಯನ್ನು ಕಳೆದುಕೊಳ್ಳಲಿಲ್ಲ. ಇದೀಗ ಆತನ ಶ್ರಮಕ್ಕೆ ಒಳ್ಳೆಯ ಫಲ ದೊರೆತಿದೆ. 26.11 ಕ್ಯಾರೆಟ್​ ವಜ್ರವನ್ನು ಆ ವ್ಯಕ್ತಿ ಪತ್ತೆಹಚ್ಚಿದ್ದು, ಕೊನೆಗೂ ಅದೃಷ್ಟ ಆತನ ಮನೆಗೆ ಬಾಗಿಲು ತೆರೆದು ಒಳಗಡೆ ಪ್ರವೇಶಿಸಿದೆ.

    ವಿವರಣೆಗೆ ಬರುವುದಾದರೆ, ಸುಶಿಲ್​ ಶುಕ್ಲಾ ಎಂಬಾತ ಮಧ್ಯಪ್ರದೇಶದ ನಿವಾಸಿ. ಇಟ್ಟಿಗೆ ಬಿಜಿನೆಸ್​ ಮಾಡುವ ಈತ ಅದಕ್ಕಾಗಿ ಪನ್ನಾ ಗಣಿಯಲ್ಲಿ ಒಂದಷ್ಟು ಭಾಗವನ್ನು ಭೋಗ್ಯಕ್ಕೆ ಪಡೆದಿದ್ದ. ಪನ್ನಾ ಗಣಿಯಲ್ಲಿ ಈ ಹಿಂದೆ ಸಾಕಷ್ಟು ವಜ್ರ ಸಿಕ್ಕಿ ಬಡವರ ಬದುಕು ಹಸನಾದ ಉದಾಹರಣೆಗಳಿವೆ. ಸುಮಾರು 20 ವರ್ಷದಿಂದಲೂ ಶುಕ್ಲಾ ಕುಟುಂಬ ಗಣಿ ವ್ಯವಹಾರದಲ್ಲಿ ತೊಡಗಿತ್ತು. ಆದರೆ, ಒಂದು ದಿನವು ಅವರಿಗೆ ಒಂದು ತುಣುಕು ವಜ್ರವೂ ದೊರಕಿರಲಿಲ್ಲ. ಆದರೂ ತಾಳ್ಮೆ ಕಳೆದುಕೊಳ್ಳದ ಶುಕ್ಲಾ ಕುಟುಂಬ ಗಣಿಯಲ್ಲಿ ತಮ್ಮ ಕೆಲಸದ ಜತೆಗೆ ಹುಡುಕಾಟವನ್ನು ಮುಂದುವರಿಸಿತ್ತು. ಬರೋಬ್ಬರಿ 20 ವರ್ಷಗಳ ನಂತರ 26.11 ಕ್ಯಾರೆಟ್​ ಚಿನ್ನ ಸಿಕ್ಕಿದ್ದು, ಅದರ ಬೆಲೆ 1.2 ಕೋಟಿ ರೂ. ಆಗಿದೆ.

    ಅಂದಹಾಗೆ, ಶುಕ್ಲಾ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಕಿಶೋರ್​ ಗಂಜ್​ ನಿವಾಸಿ. ಕಲ್ಯಾಣ್​ಪುರ್​ ಏರಿಯಾದಲ್ಲಿರುವ ಗಣಿಯನ್ನು ಭೋಗ್ಯಕ್ಕೆ ಪಡೆದುಕೊಂಡಿದ್ದರು. ಸೋಮವಾರ ಗಣಿಯಿಂದ ಪತ್ತೆಯಾದ 26.11 ಕ್ಯಾರೆಟ್ ವಜ್ರದ ಮೌಲ್ಯ 1.2 ಕೋಟಿ ರೂಪಾಯಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಇದನ್ನು ಹರಾಜು ಹಾಕಿ ಮಾರಾಟದಿಂದ ಬಂದ ಹಣದಿಂದ ರಾಯಲ್ಟಿ ಹೊರತುಪಡಿಸಿ ಉಳಿದ ಹಣವನ್ನು ಶುಕ್ಲಾಗೆ ಪಾವತಿಸುವುದಾಗಿ ಅಧಿಕಾರಿಗಳು ಘೋಷಿಸಿದರು.

    ಈ ಬಗ್ಗೆ ಮಾತನಾಡಿರುವ ಶುಕ್ಲಾ, ನಮ್ಮ ಕುಟುಂಬವು 20 ವರ್ಷಗಳಿಂದ ಗಣಿಗಾರಿಕೆ ವ್ಯವಹಾರದಲ್ಲಿದೆ. ಆದರೆ ಅಂತಹ ದೊಡ್ಡ ವಜ್ರವನ್ನು ನೋಡಿಲ್ಲ ಎಂದು ಹೇಳಿದರು. 20 ವರ್ಷಗಳ ಶ್ರಮಕ್ಕೆ ಫಲ ಸಿಕ್ಕಿರುವುದು ಖುಷಿ ತಂದಿದೆ ಎಂದಿದ್ದಾರೆ. (ಏಜೆನ್ಸೀಸ್​)

    ಮದ್ಯ ಇಟ್ಟುಕೊಂಡಿದ್ದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮಲಪುತ್ರನನ್ನು ಬಂಧಿಸಿದ ಪೊಲೀಸರು: ಮುಂದೇನಾಯ್ತು?

    ಯೂಕ್ರೇನ್​ ಬಿಕ್ಕಟ್ಟು: ಬ್ರಿಟನ್​, ಜರ್ಮನಿ ಬೆನ್ನಲ್ಲೇ ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ಹೇರಿದ ಅಮೆರಿಕ

    ವಿಶ್ವಸಂಸ್ಥೆಯಲ್ಲಿ ರಷ್ಯಾಗೆ ಹಿನ್ನಡೆ: ಯೂಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭದ್ರತಾ ಮಂಡಳಿ ತುರ್ತು ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts