More

    ಮಾಜಿ ಪತಿಯ ಈ ಕೃತ್ಯದಿಂದ ವಾಸನೆ ಗ್ರಹಿಕೆಯನ್ನೇ ಕಳೆದುಕೊಂಡಿದ್ದೆ… ಪೂನಂ ಬಿಚ್ಚಿಟ್ಟ ರಹಸ್ಯವಿದು!

    ಮುಂಬೈ: ಬಾಲಿವುಡ್‌ ಹಾಟ್‌ ನಟಿ ಎಂದೇ ಪ್ರಸಿದ್ಧಿ ಪಡೆದಿರುವ ಪೂನಂ ಪಾಂಡೆ ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದು, ತನ್ನ ಮಾಜಿ ಗಂಡ ಸ್ಯಾಮ್​ ಬಾಂಬೆಯಿಂದ ಅನುಭವಿಸಿದ ನೋವುಗಳನ್ನು ಬಿಚ್ಚಿಟ್ಟಿದ್ದಾರೆ.

    ಅಂದಹಾಗೆ ಪೂನಂ ಪಾಂಡೆ, ನಟಿ ಕಂಗನಾ ರಣಾವತ್​ ನಡೆಸಿಕೊಡುವ ಲಾಕಪ್​ ಹೆಸರಿನ ರಿಯಾಲಿಟಿ ಶೋನಿಂದ ಇತ್ತೀಚೆಗಷ್ಟೇ ಎಲಿಮಿನೇಟ್​ ಆಗಿದ್ದಾರೆ. ಇದೀಗ ತಮ್ಮ ವೈಯಕ್ತಿಕ ಜೀವನದ ಶಾಕಿಂಗ್​ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಕೌಟುಂಬಿಕ ದೌರ್ಜನ್ಯದಿಂದ ಅನೇಕ ನೋವುಗಳನ್ನು ಎದುರಿಸಿದ್ದೇವೆ. ಒಮ್ಮೆ ನನ್ನ ಮೆದುಳಿಗೆ ಗಾಯವಾಗಿತ್ತು, ಇದರಿಂದ ನಾನು ವಾಸನೆ ಗ್ರಹಿಕೆಯನ್ನೇ ಕಳೆದುಕೊಂಡಿದ್ದೆ ಮತ್ತು ವಾಸನೆಯ ಬಗ್ಗೆ ಜನರನ್ನು ಕೇಳುತ್ತಿದ್ದೆ ಎಂದಿದ್ದಾರೆ.

    ಮೆದುಳಿನ ರಕ್ತಸ್ರಾವ ಮತ್ತು ಕೌಟುಂಬಿಕ ಹಿಂಸೆಯಿಂದಾಗಿ ನಾನು ವಾಸನೆಯನ್ನು ಕಳೆದುಕೊಂಡೆ. ಆದರೆ, ನಾನೀಗ ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಬಲಶಾಲಿಯಾಗಿದ್ದಾನೆ ಎಂದು ಹೇಳಿದ್ದಾರೆ.

    ಈ ಹಿಂದೆ ಲಾಕಪ್​ ಶೋ ಒಳಗೆ ಮಾತನಾಡಿದ್ದ ಪೂನಂ ಪಾಂಡೆ, ನಮ್ಮ ದೊಡ್ಡ ಮನೆಯಲ್ಲಿ ನಾಲ್ಕು ಅಂತಸ್ತುಗಳಿವೆ. ಆದರೆ, ಸ್ಯಾಮ್​ ನನ್ನನ್ನು ಬೇರೊಂದು ಕೋಣೆಯಲ್ಲಿ ಉಳಿಯಲು ಬಿಡುತ್ತಿರಲಿಲ್ಲ. ಬದಲಾಗಿ ತಾನಿದ್ದ ಕೋಣೆಯಲ್ಲಿ ಉಳಿಯುವಂತೆ ಬಲವಂತ ಮಾಡುತ್ತಿದ್ದ. ನನ್ನ ಮನೆಯ ಒಳಗಡೆಯೇ ಫೋನ್​ ಉಪಯೋಗಿಸಲು ಬಿಡುತ್ತಿರಲಿಲ್ಲ ಎಂದು ಮಾಜಿ ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.

    ಮಾಜಿ ಪತಿಯ ಮತ್ತೊಂದು ಮುಖವನ್ನು ಅನಾವರಣ ಮಾಡಿರುವ ಪೂನಂ, ನನ್ನ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದ. ಅದರಲ್ಲೂ ತಲೆಯ ಒಂದೇ ಭಾಗಕ್ಕೆ ಹೆಚ್ಚು ಥಳಿಸುತ್ತಿದ್ದ. ಇದರಿಂದ ನನಗೆ ಮೆದುಳಿನ ರಕ್ತಸ್ರಾವ ಆಗಿದೆ. ಬೆಳಗ್ಗೆ 10 ಗಂಟೆಗೆ ಕುಡಿಯಲು ಆರಂಭಿಸಿದರೆ, ಮಧ್ಯರಾತ್ರಿಯವರೆಗೂ ಕುಡಿಯುವುದನ್ನು ನಿಲ್ಲಿಸುತ್ತಿರಲಿಲ್ಲ ಎಂದು ಮಾಜಿ ಪತಿಯ ಜತೆ ಕಳೆದ ಕರಾಳ ಕ್ಷಣಗಳನ್ನು ಪೂನಂ ಮೆಲಕು ಹಾಕಿದ್ದರು.

    ಬಹುಕಾಲದ ಗೆಳೆಯ ಮತ್ತು ನಿರ್ಮಾಪಕ ಸ್ಯಾಮ್​ ಬಾಂಬೆ ಜತೆ 2020ರ ಸೆಪ್ಟೆಂಬರ್​ನಲ್ಲಿ ಪೂನಂ ಪಾಂಡೆ ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನಿಂದ ಹಲ್ಲೆಗೊಳಗಾಗಿ ಸಾಕಷ್ಟು ಬಾರಿ ಪೂನಂ ಕೋರ್ಟ್​ ಮೆಟ್ಟಿಲೇರಿದ್ದಾರೆ. 2021ರ ನವೆಂಬರ್​ನಲ್ಲಿ ಪೂನಂ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಸ್ಯಾಮ್​ನನ್ನು ಮುಂಬೈ ಪೊಲೀಸರು ಬಂಧಿಸಿದ್ದರು. (ಏಜೆನ್ಸೀಸ್​)

    ಮಹಿಳೆಯ ಸರ ಕಸಿದು ಪರಾರಿಯಾಗುವಾಗ ಅಪಘಾತ: ಓರ್ವ ಖದೀಮ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

    ಆರ್‌ಸಿಬಿ ಪ್ಲೇಆಫ್ ಆಸೆಗೆ ಬಲ ತುಂಬಿದ ಗೆಲುವು; ಸನ್‌ರೈಸರ್ಸ್‌ಗೆ ತಿರುಗೇಟು ಕೊಟ್ಟ ಪ್ಲೆಸಿಸ್ ಪಡೆ

    ನನ್ನ ಪತಿ ಮನುಷ್ಯನಲ್ಲ ಮೃಗ, ಪಾಕ್​ ಟಿವಿ ನಿರೂಪಕನ ವಿರುದ್ಧ ಪತ್ನಿ ಗಂಭೀರ ಆರೋಪ: 15 ಕೋಟಿ ರೂ.ಪರಿಹಾರ ಕೇಳಿ ವಿಚ್ಚೇದನಕ್ಕೆ ಅರ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts