More

    ಲಾಕಪ್​ ಶೋನಲ್ಲಿ ಕಂಗನಾ ಎದುರು ಅಮ್ಮನ ಸ್ನೇಹಿತೆ ಜತೆಗಿನ ರಹಸ್ಯ ಬಿಚ್ಚಿಟ್ಟ ಶಿವಂ ಶರ್ಮಾ: ಬಬಿತಾ ಪೋಗಟ್​ ಶಾಕ್​!

    ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ನಡೆಸಿಕೊಡುತ್ತಿರುವ “ಲಾಕಪ್” ಹೆಸರಿನ ರಿಯಾಲಿಟಿ ಶೋ ದಿನದಿಂದ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಒಟ್ಟು 16 ಸೆಲೆಬ್ರಿಟಿ ಸ್ಪರ್ಧಿಗಳನ್ನು ಲಾಕಪ್​ನಲ್ಲಿ 72 ದಿನಗಳ ಕಾಲ ಬಂಧಿಸಿಡುವುದೇ ಈ ಶೋ ತಿರುಳಾಗಿದೆ. ಈ ಶೋ ಅನ್ನು ಎಕ್ತಾ ಕಪೂರ್​ ನಿರ್ಮಾಣ ಮಾಡುತ್ತಿದ್ದು, ಆಲ್ಟ್​ ಬಾಲಾಜಿ ಮತ್ತು ಎಂಎಕ್ಷ್​ ಪ್ಲೇಯರ್​ನಲ್ಲಿ 24X7 ಪ್ರಸಾರವಾಗುತ್ತಿದೆ.

    ಈ ಶೋನಲ್ಲಿ ಕೇವಲ ವಿವಾದಿತ ಸೆಲೆಬ್ರಿಟಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮ ನಡೆಸಿಕೊಡುವ ಕಂಗನಾ ಕೂಡ ವಿವಾದಗಳಿಂದ ಹೊರತಾಗಿಲ್ಲ. ಸ್ಪರ್ಧಿಗಳು ತಮ್ಮ ರಹಸ್ಯಗಳನ್ನು ಹೊರಗಾಕುವ ಮೂಲಕ ಈ ಕಾರ್ಯಕ್ರಮ ವೀಕ್ಷಕರಲ್ಲಿ ಹೆಚ್ಚು ಕೂತಹಲವನ್ನು ಸೃಷ್ಟಿ ಮಾಡುತ್ತಿದೆ.

    ಈ ಹಿಂದೆ ಪೂನಂ ಪಾಂಡೆ ತಮ್ಮ ವೈವಾಹಿಕ ಜೀವನದ ರಹಸ್ಯವನ್ನು ಹೊರಗೆ ಹಾಕಿದ್ದರು. ಇದೀಗ ಮತ್ತೊಬ್ಬ ಸ್ಪರ್ಧಿ ಶಿವಂ ಶರ್ಮಾ ತಮ್ಮ ಕುರಿತ ರಹಸ್ಯವೊಂದು ಬಹಿರಂಗಪಡಿಸಿದ್ದಾರೆ. ಶೋನಲ್ಲಿ ಶಿವಂ ಶರ್ಮಾ, ಕರಣ್​ವೀರ್​ ಬೊಹ್ರಾ ಮತ್ತು ಪಾಯಲ್​ ರೊಹಟಗಿ ಹೆಸರು ಚಾರ್ಜ್​ಶೀಟ್​ನಲ್ಲಿತ್ತು. ಎಲಿಮಿನೇಷನ್​ನಿಂದ ಮೊದಲು ತನ್ನನ್ನು ರಕ್ಷಿಸಿಕೊಳ್ಳಲು ಶಿವಂ ಮೊದಲು ಬಜರ್​ ಅನ್ನು ಒತ್ತಿದರು.

    ಕಾರ್ಯಕ್ರಮದ ನಿಯಮದ ಪ್ರಕಾರ ಮೊದಲು ಬಜರ್​ ಒತ್ತಿದವರು ತಮ್ಮ ಕುರಿತ ರಹಸ್ಯವೊಂದು ಬಹಿರಂಗಪಡಿಸಬೇಕು. ಅದರಂತೆ ರಹಸ್ಯವನ್ನು ಹೇಳಿದ ಶಿವಂ, ಡಿವೋರ್ಸ್​ ಆಗಿದ್ದ ತನ್ನ ತಾಯಿಯ ಸ್ನೇಹಿತೆಯ ಜತೆ ಲೈಂಗಿಕ ಸಂಪರ್ಕ ನಡೆಸಿದ್ದಾಗಿ ಒಪ್ಪಿಕೊಂಡರು. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಲೈಂಗಿಕ ಸಂಪರ್ಕ ನಡೆಸಿದೆವು ಎಂದು ಶೋನಲ್ಲಿ ಕಂಗನಾ ಎದರು ಬಿಚ್ಚಿಟ್ಟರು.

    ಅವರು ನನ್ನ ತಾಯಿಯ ಸ್ನೇಹಿತೆ. ನಮ್ಮ ಮನೆಯ ಪಕ್ಕದಲ್ಲೇ ವಾಸವಿದ್ದರು. ಅವರು ಡಿವೋರ್ಸ್​ ಪಡೆದುಕೊಂಡಿದ್ದರು. ಅವರಿಗೆ ಲೈಂಗಿಕ ಜೀವನ ಬೇಕಾಗಿತ್ತು. ನಾನು ವೈಟ್​ ಸಾಸ್​ ಪಾಸ್ತಾ ಆಹಾರವನ್ನು ಚೆನ್ನಾಗಿ ಮಾಡುತ್ತಿದ್ದೆ. ಅದನ್ನು ಅವರ ಮನೆಗೆ ತೆಗೆದುಕೊಂಡು ಹೋಗಿ ಒಳ್ಳೆಯ ಸಮಯ ಕಳೆಯುತ್ತಿದ್ದೆ. ನಾನು ಕಾಲೇಜಿನಲ್ಲಿರುವಾಗ ಅಂದರೆ ಸುಮಾರು 8 ರಿಂದ 9 ವರ್ಷಗಳ ಹಿಂದೆ ಇದು ನಡೆಯಿತು ಎಂದು ಶಿವಂ ಹೇಳಿದರು.

    ಆದರೆ, ಶಿವಂ ಹೇಳಿದ ದಾಟಿ ಕಂಗನಾ ರಣಾವತ್​ಗೆ ಇಷ್ಟವಾಗಲಿಲ್ಲ. ಹೀಗಾಗಿ ಶೋನ ಒಪ್ಪಂದದಲ್ಲಿ ಬರೆದಿರುವಂತೆ ಘಟನೆಯ ಬಗ್ಗೆ ನಿಖರವಾದ ಪದಗಳಲ್ಲಿ ರಹಸ್ಯವನ್ನು ಬಿಚ್ಚಿಡುವಂತೆ ಕೇಳಿಕೊಂಡರು. ಮತ್ತೆ ಮಾತು ಮುಂದುವರಿಸಿದ ಶಿವಂ, ನಡೆದ ಎಲ್ಲ ಘಟನೆಯನ್ನು ಗಟ್ಟಿ ಧ್ವನಿಯಲ್ಲಿ ತಿಳಿಸಿದರು. ಇದಾದ ಬಳಿಕ ಶಿವಂ ರಹಸ್ಯದ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಬಬಿತಾ ಪೋಗಟ್​ರನ್ನು ಕಂಗನಾ ಕೇಳಿದರು. ಶಿವಂ ರಹಸ್ಯ ರಹಸ್ಯ ತಿಳಿದು ಮೊದಲೇ ಶಾಕ್​ ಆಗಿದ್ದ ಬಬಿತಾ, ಇದು ಅವರ ಆಲೋಚನಾ ವಿಧಾನ. ನಾನು ಅವನ ಆಲೋಚನೆಗಳನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಮತ್ತು ಇದನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಗುವುದಿಲ್ಲ. ಇದು ನಿಜಕ್ಕೂ ನನಗೆ ಶಾಕ್​ ಆಗಿದೆ. ಅತನ ಏನು ಹೇಳಿದ ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಲು ಆಗದು ಎಂದು ಹೇಳಿದರು.

    ಬಬಿತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಂ, ನನ್ನ ತಾಯಿಯ ಸ್ನೇಹಿತೆ ತನ್ನ ಗಂಡನನ್ನು ಕಳೆದುಕೊಂಡಳು ಮತ್ತು ನಾನಾಗಿಯೇ ಆಕೆಯ ಮುಂದೆ ಹೋಗಲಿಲ್ಲ. ಅವಳಿಗೂ ಲೈಂಗಿಕ ಜೀವನ ಬೇಕಿತ್ತು. ನಾನು ಒಳ್ಳೆಯ ಹುಡುಗ ಎಂದು ನಾನು ನಂಬುತ್ತೇನೆ ಮತ್ತು ಅವಳು ನನ್ನ ಬಗ್ಗೆ ಆಸಕ್ತಿ ಹೊಂದಿದ್ದಾಳೆಂದು ನಾನು ಭಾವಿಸಿದೆ. ಹಾಗಾಗಿ, ಇದು ಏಕಪಕ್ಷೀಯವಲ್ಲ, ಅದು ಪರಸ್ಪರವಾಗಿತ್ತು. ಇದನ್ನು ಪ್ರೀತಿ ಎಂದು ಕರೆಯಲು ಸಾಧ್ಯವಿಲ್ಲ ಎಂದ ಶಿವಂ, ಯಾರಾದರೂ ಇದನ್ನು ಏನು ಬೇಕಾದರೂ ಕರೆಯಬಹುದು ಎಂದರು.

    ನನ್ನು ತಿಳುವಳಿಕೆಯಂತೆ ಇದನ್ನು “ಬಳಸಿಕೊಳ್ಳುವುದು” ಎಂದು ಕರೆಯಲಾಗುತ್ತದೆ ಎಂದು ಬಬಿತಾ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಂ, ನಾನು ಚಿಕ್ಕವನಾಗಿದ್ದರಿಂದ ಅವಳು ನನ್ನನ್ನು ಬಳಸಿಕೊಂಡಿದ್ದಾಳೆ ಎಂದು ನಾನು ಹೇಳಬಲ್ಲೆ, ಅವಳು ದೊಡ್ಡವಳು ಮತ್ತು 4 ವರ್ಷದ ಮಗು ಕೂಡ ಹೊಂದಿದ್ದಳು. ಅವಳು ಇತ್ತೀಚೆಗೆ ವಿಚ್ಛೇದನ ಪಡೆದಿದ್ದಳು ಮತ್ತು ನನ್ನ ಬಗ್ಗೆ ಆಸಕ್ತಿ ಹೊಂದಿದ್ದಳು. ಹಾಗಾಗಿ, ನನ್ನಿಂದ ಏನೂ ತಪ್ಪಾಗಿಲ್ಲ ಎಂದರು.

    ಇದೇ ಸಂದರ್ಭದಲ್ಲಿ ಮತ್ತೊಬ್ಬ ಸ್ಪರ್ಧಿ ಸಾರಾ ಖಾನ್ ಅವರ ಅಭಿಪ್ರಾಯವನ್ನು ಕೇಳಿದಾಗ, ಅದು ಪರಸ್ಪರ ನಡೆದಿದ್ದು, ಅದನ್ನು ನಿರ್ಣಯಿಸಲು ನಾವು ಯಾರೂ ಅಲ್ಲ ಎಂದು ಹೇಳಿದರು. ಇದಾದ ಬಳಿಕ ಪ್ರತಿಕ್ರಿಯಿಸಿದ ಕಂಗನಾ, ಶಿವಂ ಹೇಳಿಕೆಯಿಂದ ನಾನೇನು ಆಘಾತಕ್ಕೊಳಗಾಗಿಲ್ಲ ಏಕೆಂದರೆ ಶಿವಂ ಯಾವಾಗಲೂ “ಬೋನಫೈಡ್ ಲುಕ್ಕಾ” ಎಂದು ಹೇಳಿದರು. (ಏಜೆನ್ಸೀಸ್​)

    ಶಾಲೆಯಲ್ಲಿ ಹಿಜಾಬ್​ ಬ್ಯಾನ್​: ​ಸಮವಸ್ತ್ರ ಎತ್ತಿಹಿಡಿದು ಐತಿಹಾಸಿಕ ತೀರ್ಪು ಪ್ರಕಟಿಸಿದ ಹೈಕೋರ್ಟ್​

    ನಾನು “ದಿ ಕಾಶ್ಮೀರ್​ ಫೈಲ್ಸ್​” ಸಿನಿಮಾ ನೋಡಲ್ಲ: ಸಿದ್ದರಾಮಯ್ಯ ಕೊಟ್ಟ ಕಾರಣ ಕೇಳಿ ಅವರೆಲ್ಲ ನಗಾಡಿದರು!

    ಸಮಂತಾ ಬೊಲ್ಡ್​ನೆಸ್​ ಗುಟ್ಟು ಸಂಭಾವನೆಯಿಂದ ರಟ್ಟು: ಎಲ್ಲರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಸ್ಯಾಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts