More

    ಭಾರಿ ಮಳೆಗೆ ಸಿಲಿಕಾನ್​ ಸಿಟಿ ತತ್ತರ: ಬೆಂಗಳೂರು ಪ್ರವಾಹ ಕುರಿತು ತೆಲಂಗಾಣ ಸಚಿವ ಮಾಡಿದ ಟ್ವೀಟ್​ ವೈರಲ್​​

    ಬೆಂಗಳೂರು: ಭಾರೀ ಮಳೆಯಿಂದಾಗಿ ರಾಜ್ಯ ರಾಜಧಾನಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ರಸ್ತೆಗಳು, ಮನೆಗಳು ಸೇರಿದಂತೆ ಎಲ್ಲಿ ನೋಡಿದರೂ ಸಿಲಿಕಾನ್​ ಸಿಟಿಯಲ್ಲಿ ನೀರು ತುಂಬಿದೆ. ಇದರ ಪರಿಣಾಮ ಟ್ರಾಫಿಕ್​ ಜಾಮ್​, ವಿದ್ಯುತ್​ ಮತ್ತು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಒಟ್ಟಾರೆಯಾಗಿ ಬೆಂಗಳೂರು ಭಾರಿ ಮಳೆಗೆ ನಲುಗಿ ಹೋಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇದರ ಬೆನ್ನಲ್ಲೇ ಬೆಂಗಳೂರನ್ನು ಅಣುಕಿಸುವ ಅನೇಕ ಪೋಸ್ಟ್​ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಇದೆಲ್ಲದರ ನಡುವೆ ತೆಲಂಗಾಣದ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರ ಪುತ್ರ ಕೆ.ಟಿ. ರಾಮರಾವ್​ (ಕೆಟಿಆರ್​) ಅವರು ಬೆಂಗಳೂರು ಪ್ರವಾಹದ ಬಗ್ಗೆ ಮಾಡಿರುವ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಸಮಯದಲ್ಲಿ ನಗರದ ಉನ್ನತೀಕರಣವು ಅಗತ್ಯವಾಗಿದೆ ಮತ್ತು ನಗರ ಯೋಜನೆ ಮತ್ತು ಆಡಳಿತದಲ್ಲಿ ರಾಜ್ಯಗಳಿಗೆ ದಿಟ್ಟ ಸುಧಾರಣೆಗಳ ಅಗತ್ಯವಿದೆ ಎಂದು ಕೆಟಿಆರ್​ ಅವರು ಅಭಿಪ್ರಾಯಪಟ್ಟಿದ್ದಾರೆ.

    ಕೆಟಿಆರ್​ ಟ್ವೀಟ್​ ಸಾರಾಂಶ ಹೀಗಿದೆ…
    ಜಲಾವೃತವಾದ ಬೆಂಗಳೂರನ್ನು ಅಪಹಾಸ್ಯ ಮಾಡುವವರಿಗೆಲ್ಲ:

    ನಮ್ಮ ನಗರಗಳು ನಮ್ಮ ಆರ್ಥಿಕತೆಯ ಇಂಜಿನ್​ಗಳಾಗಿದ್ದು, ರಾಜ್ಯಗಳ/ದೇಶದ ಬೆಳವಣಿಗೆಗೆ ಚಾಲನೆ ನೀಡುತ್ತವೆ. ಕ್ಷಿಪ್ರ ನಗರೀಕರಣ ಮತ್ತು ಉಪ-ನಗರೀಕರಣದೊಂದಿಗೆ ಮೂಲಸೌಕರ್ಯವು ಸಹ ಕುಸಿಯುತ್ತಿದೆ. ಏಕೆಂದರೆ ನಾವು ಅದನ್ನು ನವೀಕರಿಸಲು ಸಾಕಷ್ಟು ಬಂಡವಾಳವನ್ನು ತುಂಬಿಸಿಲ್ಲ. ಹೀಗಾಗಿ ನಗರ ಯೋಜನೆ ಮತ್ತು ಆಡಳಿತದಲ್ಲಿ ನಮಗೆ ದಿಟ್ಟ ಸುಧಾರಣೆಗಳ ಅಗತ್ಯವಿದೆ. ಸಂಪ್ರದಾಯವಾದಿ ಮನಸ್ಥಿತಿಯಿಂದ ದೂರವಿದ್ದು, ಆಮೂಲಾಗ್ರವಾಗಿ ಯೋಚಿಸಬೇಕಾಗಿದೆ. ಸ್ವಚ್ಛ ರಸ್ತೆಗಳು, ಶುದ್ಧ ನೀರು, ಶುದ್ಧ ಗಾಳಿ ಮತ್ತು ಉತ್ತಮ ಚಂಡಮಾರುತ ನೀರು ನಿರ್ವಹಣಾ ವ್ಯವಸ್ಥೆಗಳನ್ನು ನಿರ್ಮಿಸುವುದು ನಮಗೆ ಕಷ್ಟವೇನಲ್ಲ. ಅದಕ್ಕೆಲ್ಲ ನಮಗೆ ಬಂಡವಾಳ ಬೇಕು ಎನ್ನುವ ಮೂಲಕ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಹರ್ದೀಪ್​ ಎಸ್​ ಪುರಿ ಅವರಿಗೆ ಟ್ಯಾಗ್​ ಮಾಡಿ, ಸಹಾಯ ಮಾಡುವಂತೆ ಕೋರಿದ್ದಾರೆ.

    ಬೆಂಗಳೂರಿಗೆ ಬಂದಂತಹ ಪರಿಸ್ಥಿತಿ ಹಿಂದೊಮ್ಮೆ ಹೈದರಾಬಾದ್​​ಗೆ ಬಂದಿದ್ದಾಗ ಕೆಲ ಬೆಂಗಳೂರು ರಾಜಕಾರಣಿಗಳು ನಮ್ಮನ್ನು ಅಣುಕಿಸಿದ್ದರು. ಆದರೆ, ನಾವು ಆ ರೀತಿ ಮಾಡುವುದಿಲ್ಲ. ಹೈದರಾಬಾದ್‌ನಲ್ಲಿರುವ ನನ್ನ ಕೆಲವು ಸ್ನೇಹಿತರು ನಾನು ಹೇಳುವುದನ್ನು ಇಷ್ಟಪಡುವುದಿಲ್ಲ ಎಂದು ನನಗೆ ತಿಳಿದಿದೆ. ಒಂದು ರಾಷ್ಟ್ರವಾಗಿ ನಾವು ಬೆಳೆಯಬೇಕು ಮತ್ತು ಪರಸ್ಪರರ ಅನುಭವದಿಂದ ಕಲಿಯಬೇಕು ಹಾಗೂ ಸಾಮೂಹಿಕ ಇಚ್ಛಾಶಕ್ತಿಯನ್ನು ತೋರಿಸಬೇಕು ಎಂದು ಕೆಟಿಆರ್​ ಹೇಳಿದ್ದಾರೆ. (ಏಜೆನ್ಸೀಸ್​)

    ನಮ್ಮನ್ನು ಬದುಕಲು ಬಿಡಿ: ನೆಟ್ಟಿಗರ ಕಾಟ ಸಹಿಸದೇ ನಟಿ, ನಿರ್ಮಾಪಕಿ ಚಾರ್ಮಿ ಕೌರ್​ ತೆಗೆದುಕೊಂಡ ನಿರ್ಧಾರವಿದು…

    ಮಳೆ ನೀರು ಸೋರದಂತೆ ತಗಡಿನ ಶೀಟ್ ಅಳವಡಿಸುವಾಗ ವಿದ್ಯುತ್​ ತಂತಿ ತಗುಲಿ ಸ್ಥಳದಲ್ಲೇ ಇಬ್ಬರ ಸಾವು

    ಸ್ಕೂಟರ್​ ಬೀಳುವಾಗ ಸಹಾಯಕ್ಕೆಂದು ವಿದ್ಯುತ್​ ಕಂಬ ಹಿಡಿದ ಯುವತಿ ಸಾವು: ಬೆಸ್ಕಾಂ, ಬಿಬಿಎಂಪಿ ವಿರುದ್ಧ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts