More

    ಬಿಗ್​ಬಾಸ್​ ಕನ್ನಡದ 9ನೇ ಆವೃತ್ತಿಯಲ್ಲಿರಲಿದೆ ಹಲವು ಸರ್ಪ್ರೈಸ್​: ಏನೇನು ಬದಲಾಗಬಹುದು? ಇಲ್ಲಿದೆ ಮಾಹಿತಿ

    ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಓಟಿಟಿ’ಯ ಮೊದಲ ಸೀಸನ್ ಶುಕ್ರವಾರ ರಾತ್ರಿ ಅಂತ್ಯವಾಗಿದೆ. 42 ದಿನಗಳ ಕಾಲ ನಡೆದ ಈ ಮೊದಲ ಸೀಸನ್​ನ ಕೊನೆಯ ಸುತ್ತಿನಲ್ಲಿ ರೂಪೇಶ್ ಶೆಟ್ಟಿ ವಿಜೇತರಾಗಿದ್ದು, ಐದು ಲಕ್ಷ ರೂ. ಬಹುಮಾನ ಪಡೆದಿದ್ದಾರೆ. ಅಷ್ಟೇ ಅಲ್ಲ, ಸೆ. 24ರಿಂದ ಪ್ರಾರಂಭವಾಗಲಿರುವ ‘ಬಿಗ್ ಬಾಸ್ 9’ಗೆ ನೇರ ಎಂಟ್ರಿ ಪಡೆದಿದ್ದಾರೆ.

    ಕೊನೆಯ ಸುತ್ತಿಗೆ ರೂಪೇಶ್ ಶೆಟ್ಟಿ, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್, ರಾಕೇಶ್ ಅಡಿಗ ಮತ್ತು ಸಾನಿಯಾ ಅಯ್ಯರ್ ಬಂದಿದ್ದರು. ಕಾರ್ಯಕ್ರಮವನ್ನು ನಡೆಸಿಕೊಡುವ ಸುದೀಪ್, ಈ ನಾಲ್ವರಲ್ಲಿ ರೂಪೇಶ್ ಅವರನ್ನು ವಿಜೇತರನ್ನಾಗಿ ಘೋಷಿಸಿದ್ದಾರೆ. ಇನ್ನು, ಕೊನೆಯ ಸುತ್ತಿಗೆ ಬಂದಿದ್ದ ನಾಲ್ವರೂ ಸ್ಪರ್ಧಿಗಳು ‘ಬಿಗ್ ಬಾಸ್ 9’ಕ್ಕೆ ನೇರ ಟಿಕೆಟ್ ಪಡೆದಿದ್ದಾರೆ. ಇನ್ನು, ‘ಬಿಗ್ ಬಾಸ್ 9’ರ ಮೊದಲ ಪ್ರೋಮೋ ಇತ್ತೀಚೆಗೆ ಬಿಡುಗಡೆಯಾಗಿದೆ. ಹಿಂದಿನ ಸೀಸನ್​ಗಳಲ್ಲಿ ಭಾಗವಹಿಸಿದ್ದ ಅನುಪಮಾ ಗೌಡ, ದೀಪಿಕಾ ದಾಸ್ ಮತ್ತು ಪ್ರಶಾಂತ್ ಸಂಬರ್ಗಿ ಸೂಟ್​ಕೇಸ್ ತೆಗೆದುಕೊಂಡು ‘ಬಿಗ್ ಬಾಸ್’ ಮನೆಗೆ ಹೊರಡುವ ದೃಶ್ಯಗಳನ್ನು ಪ್ರೋಮೋದಲ್ಲಿ ತೋರಿಸಲಾಗಿದ್ದು, ಆ ಮೂವರು ಸಹ ಇನ್ನೊಮ್ಮೆ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

    ತಾಜಾ ಸುದ್ದಿ ಏನೆಂದರೆ, ಮೂಲಗಳ ಪ್ರಕಾರ, ಈ ಬಾರಿ, ಶೋ ತಯಾರಕರು ವಿಶಿಷ್ಟವಾದ ಕಲ್ಪನೆಯನ್ನು ಯೋಜಿಸುತ್ತಿದ್ದಾರಂತೆ ಮತ್ತು ಸ್ಪರ್ಧಿಗಳಿಗೆ ಕೆಲವು ಆಸಕ್ತಿದಾಯಕ ನಿಯಮಗಳನ್ನು ಅಳವಡಿಸಲಿದ್ದಾರೆ ಹಾಗೂ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

    ಕಲರ್ಸ್ ಕನ್ನಡ ಟ್ವಿಟರ್ ಪುಟದಲ್ಲಿ ಒಂದು ವರ್ಗದ ಪ್ರೇಕ್ಷಕರು ಸ್ಪರ್ಧಿಗಳ ಆಯ್ಕೆಯ ಕುರಿತು ತಯಾರಕರಿಗೆ ಸಲಹೆಗಳನ್ನು ನೀಡುತ್ತಿದ್ದು, ಹೆಚ್ಚಿನವರು ಬಿಗ್ ಬಾಸ್ ಕನ್ನಡ ಸೀಸನ್ 8ರ ಅತ್ಯುತ್ತಮ ಜೋಡಿ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಗಾಜಿನ ಮನೆಗೆ ಮರಳಬೇಕೆಂದು ಬಯಸುತ್ತಿದ್ದಾರೆ.

    ಕೆಲವು ವದಂತಿಗಳ ಪ್ರಕಾರ, ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಗಳಿಗೆ ಮತ್ತು ದೊಡ್ಮನೆಯ ನಿಯಮಗಳನ್ನು ಉಲ್ಲಂಘಿಸಿದವರಿಗೆ ನೀಡಲಾಗುವ ಶಿಕ್ಷೆಯು ಹಿಂದಿನ ಸೀಸನ್‌ಗಳಿಗಿಂತ ಭಿನ್ನವಾಗಿರುತ್ತದೆ. ಈ ಸೀಸನ್​ನಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧವಾಗಿದೆ ಎನ್ನಲಾಗಿದೆ. ಸ್ಪರ್ಧಿಗಳಿಗೆ ಟಾಸ್ಕ್‌ಗಳು ಈ ಸೀಸನ್‌ನಲ್ಲಿ ಆಸಕ್ತಿದಾಯಕ ಮತ್ತು ಕಠಿಣವಾಗಿರುತ್ತದೆ ಎಂದು ಹೇಳಲಾಗಿದೆ.

    ಇನ್ನು ಈ ಸೀಸನ್​ನಲ್ಲಿ ವೀಕ್ಷಕರಿಗೆ ಅಚ್ಚರಿಯ ಅಂಶವನ್ನು ಇರಿಸಲ ಶೋ ತಯಾರಕರು ಶೋಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಗೌಪ್ಯವಾಗಿಡುತ್ತಿದ್ದಾರೆ. ಶೋ ಆರಂಭದ ದಿನ ವೀಕ್ಷಕರಿಗೆ ಕೆಲ ಸರ್ಪ್ರೈಸ್​ ಇರಲಿ ಎಂಬುದು ಶೋ ತಯಾರಕರ ಅಭಿಮತವಾಗಿದೆ. (ಏಜೆನ್ಸೀಸ್​)

    ತಮನ್ನಾ ಮುಂದೆಯೇ ಬೌನ್ಸರ್ಸ್​ಗಳ ಅನುಚಿತ ವರ್ತನೆ! ಮುಜುಗರಕ್ಕೀಡಾದ ಮಿಲ್ಕಿ ಬ್ಯೂಟಿ

    ಶಾಲೆಯ ಲಿಫ್ಟ್​ ಬಾಗಿಲುಗಳ​ ಮಧ್ಯೆ ಸಿಲುಕಿ ಶಿಕ್ಷಕಿ ಸಾವು: ಮಟ ಮಟ ಮಧ್ಯಾಹ್ನವೇ ನಡೆಯಿತು ಭಯಾನಕ ಘಟನೆ

    VIDEO| ನಮೀಬಿಯಾದಿಂದ ಭಾರತಕ್ಕೆ ಚೀತಾಗಳನ್ನು ಕರೆತಂದ ವಿಮಾನದ ಒಳಗಿನ ದೃಶ್ಯ ಹೀಗಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts