More

    ಕೇರಳದ ಮೊದಲ ತೃತೀಯಲಿಂಗಿ ರೇಡಿಯೋ ಜಾಕಿ ಆತ್ಮಹತ್ಯೆ: ಈ ನಿರ್ಧಾರವೇ ಮುಳುವಾಯ್ತಾ?

    ತಿರುವನಂತಪುರಂ: ಕೇರಳದ ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ ಅನನ್ಯ ಕುಮಾರಿ ಅಲೆಕ್ಸ್ ಅವರು ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ವರದಿಯಾಗಿದೆ. ಅನನ್ಯ ಅವರು ಕೇರಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಮೊದಲ ತೃತೀಯ ಲಿಂಗಿಯು ಹೌದು.

    ಕೊಚ್ಚಿಯಲ್ಲಿರುವ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅನನ್ಯ ಅವರ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ಕಳೆದ ಒಂದು ವರ್ಷದಿಂದ ಅನನ್ಯ ಕುಮಾರಿ ಅವರು ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಕಳೆದ ವರ್ಷ್​ ಜೂನ್​ ತಿಂಗಳಲ್ಲಿ ಆರು ಬಾರಿ ಲಿಂಗ ಪುನರ್ವಿತರಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

    ಚಿಕಿತ್ಸೆ ನೀಡಿದ್ದ ವೈದ್ಯರು ಮತ್ತು ಆಸ್ಪತ್ರೆ ವಿರುದ್ಧ ಅನನ್ಯ ಕುಮಾರಿ ಅನೇಕ ಆರೋಪಗಳನ್ನು ಮಾಡಿದ್ದರು. ಚಿಕಿತ್ಸೆ ಪಡೆದ ಬಳಿಕ ಅನೇಕ ಆರೋಗ್ಯ ಸಮಸ್ಯೆಗಳಿಂದ ಎದುರಿಸುತ್ತಿದ್ದೇನೆ ಎಂದು ದೂರಿದ್ದರು. ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಿದೆ. ಇದಕ್ಕೆಲ್ಲ ಕಾರಣ ಆಸ್ಪತ್ರೆಯವರು ಎಂದು ಆರೋಪಿಸಿ ಪರಿಹಾರ ಕೊಡಿಸಿ ಎಂದು ಒತ್ತಾಯ ಮಾಡಿದ್ದರು. ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

    ಅನನ್ಯ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಯೂನಿಕ್ ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಾರ್ಟಿ (ಡಿಎಸ್‌ಜೆಪಿ) ಅಭ್ಯರ್ಥಿಯಾಗಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿ ಪಿ.ಕೆ.ಕುನ್ಹಾಲಿಕುಟ್ಟಿ ವಿರುದ್ಧ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಚುನಾವಣೆಗೆ ಪ್ರಚಾರವನ್ನು ನಿಲ್ಲಿಸಿದ್ದರು. ತನ್ನದೇ ಪಕ್ಷದ ನಾಯಕರಿಂದ ಬೆದರಿಕೆ ಇದೆ ಎಂದು ಅನನ್ಯ ಆರೋಪ ಮಾಡಿದ್ದರು. ಅಲ್ಲದೆ, ಚುನಾವಣೆಯಿಂದ ಹಿಂದೆ ಸರಿದಿದ್ದರು. ಆದರೆ, ಪಕ್ಷದ ಪರವಾಗಿ ಮತಯಾಚನೆ ಮಾಡಿದ್ದರು. (ಏಜೆನ್ಸೀಸ್)​

    ಬ್ಲೂ ಫಿಲ್ಮ್​ ದಂಧೆಯಲ್ಲಿ ರಾಜ್​ ಕುಂದ್ರಾ ಸಿಕ್ಕಿಬಿದ್ದಿದ್ಹೇಗೆ? ಮುಂಬೈನ ಕರಾಳ ಲೋಕ ಬಿಚ್ಚಿಟ್ಟ ಪೊಲೀಸ್​ ಆಯುಕ್ತ!

    ಸಾಕಪ್ಪ ಸಾಕು ರಾಜ್​ ಕುಂದ್ರಾ ಸಹವಾಸ: 2019ರಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ಪೂನಂ ಪಾಂಡೆ..!

    ವೆಬ್​ ಸರಣಿಯಲ್ಲಿ ನಟಿಸುವುದಾದ್ರೆ ಹೀಗೆ ಮಾಡಿ! ನಟಿಗೆ ಓಪನ್​ ಆಫರ್​ ಕೊಟ್ಟಿದ್ರಂತೆ ರಾಜ್​ ಕುಂದ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts